AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೂನಿಯರ್’: ಹೇಗಿದೆ ಜನಾರ್ದನ ರೆಡ್ಡಿ ಪುತ್ರನ ಸಿನಿಮಾ ಟ್ರೈಲರ್

Kireeti Reddy movie: ಕರ್ನಾಟಕದ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ಚಿತ್ರರಂಗ ಪ್ರವೇಶಿಸಿದ್ದು, ಅವರ ನಟನೆಯ ಮೊದಲ ಸಿನಿಮಾ ‘ಜೂನಿಯರ್’ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದಲ್ಲಿ ರವಿಚಂದ್ರನ್, ಸುಧಾರಾಣಿ, ಶ್ರೀಲೀಲಾ, ಜೆನಿಲಿಯಾ ಡಿಸೋಜಾ ಇನ್ನೂ ಹಲವರು ನಟಿಸಿದ್ದು, ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.

‘ಜೂನಿಯರ್’: ಹೇಗಿದೆ ಜನಾರ್ದನ ರೆಡ್ಡಿ ಪುತ್ರನ ಸಿನಿಮಾ ಟ್ರೈಲರ್
Junior
ಮಂಜುನಾಥ ಸಿ.
|

Updated on:Jul 12, 2025 | 4:01 PM

Share

ಮಾಜಿ ಸಚಿವ, ರಾಜ್ಯದ ಜನಪ್ರಿಯ ರಾಜಕಾರಣಿ ಜನಾರ್ದನ ರೆಡ್ಡಿ (Janardhana Reddy) ಅವರ ಪುತ್ರ ಕಿರೀಟಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಅವರ ನಟನೆಯ ಮೊದಲ ಸಿನಿಮಾ ‘ಜೂನಿಯರ್’ದ ಟ್ರೈಲರ್ ಬಿಡುಗಡೆ ಆಗಿದೆ. ಶ್ರೀಲೀಲಾ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಸೆಟ್ಟೇರಿ ಬಹಳ ಸಮಯ ಆಗಿತ್ತು, ಕಾರಣಾಂತರಗಳಿಂದ ಮಧ್ಯದಲ್ಲಿ ಕೆಲ ಸಮಯ ಚಿತ್ರೀಕರಣ ನಿಂತಿತ್ತು. ಬಳಿಕ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಇದೀಗ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

ಸಿನಿಮಾದ ಟ್ರೈಲರ್​​ನಲ್ಲಿ ಕಿರೀಟಿ ಗಮನ ಸೆಳೆದಿದ್ದಾರೆ. ಟ್ರೈಲರ್​ನಲ್ಲಿಯೇ ಅವರ ಡ್ಯಾನ್ಸ್, ಆಕ್ಷನ್, ವಿವಿಧ ಲುಕ್, ಮಾಸ್ ಎಂಟ್ರಿ ಎಲ್ಲವನ್ನೂ ತೋರಿಸಿಬಿಟ್ಟಿದ್ದಾರೆ ನಿರ್ದೇಶಕ. ಈ ಸಿನಿಮಾ ಸೆಂಟಿಮೆಂಟ್ ಜೊತೆಗೆ ಆಕ್ಷನ್ ಅನ್ನು ಒಳಗೊಂಡಿರುವ ಸಿನಿಮಾ ಎಂಬುದು ಟ್ರೈಲರ್​ನಿಂದ ತಿಳಿದು ಬರುತ್ತಿದೆ. ಅಪ್ಪ-ಅಮ್ಮನ ಮುದ್ದಿನ ಮಗ, ಪೋಷಕರ ಅತಿಯಾದ ಪ್ರೀತಿ, ಕಾಳಜಿಯಿಂದ ಬೇಸತ್ತು ಅವರನ್ನು ಬಿಟ್ಟು ದೂರ ಹೋಗುವ ಆ ನಂತರ ಪೋಷಕರ ಮಹತ್ವ, ಅಪ್ಪ ಕಂಡಿದ್ದ ಕನಸು ಅದನ್ನು ನನಸು ಮಾಡಲು ಮತ್ತೊಂದು ಪ್ರಯಾಣ ಅಲ್ಲಿ ಎದುರಾಗುವ ಅಡೆ-ತಡೆ ಹೀಗೆ ಸಾಕಷ್ಟು ಟ್ವಿಸ್ಟ್​ಗಳನ್ನು ಹೊಂದಿರುವ ಕತೆ ಸಿನಿಮಾನಲ್ಲಿ ಇರುವುದು ಟ್ರೈಲರ್​ನಿಂದ ತಿಳಿದು ಬರುತ್ತಿದೆ.

ಇದನ್ನೂ ಓದಿ:ವೈರಲ್ ವೈಯ್ಯಾರಿ ಹಾಡಿನಲ್ಲಿ ಶ್ರೀಲೀಲಾ, ಕಿರೀಟಿ ರೆಡ್ಡಿ ಸೂಪರ್ ಡ್ಯಾನ್ಸ್

ಈಗ ಬಿಡುಗಡೆ ಆಗಿರುವ ಟ್ರೈಲರ್​ನಲ್ಲಿ ತೆಲುಗು ಹಾಗೂ ಕನ್ನಡದ ಜನಪ್ರಿಯ ನಟ-ನಟಿಯರು ನಟಿಸಿದ್ದಾರೆ. ಸಿನಿಮಾನಲ್ಲಿ ರವಿಚಂದ್ರನ್ ಮತ್ತು ಸುಧಾರಾಣಿ ನಾಯಕನ ಪೋಷಕರ ಪಾತ್ರದಲ್ಲಿ ನಟಿಸಿದ್ದಾರೆ. ಬಹುಭಾಷಾ ತಾರೆ ಜೆನಿಲಿಯಾ ಡಿಸೋಜಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ತೆಲುಗಿನ ನಟರಾದ ರಾವ್ ರಮೇಶ್, ಹಾಸ್ಯನಟ ಹರ್ಷ ಚೆಮುಡು, ಕನ್ನಡದ ‘ಹಾಗೆ ಸುಮ್ಮನೆ’ ನಟ ಕಿರಣ್ ಶ್ರೀನಿವಾಸ್, ಅಚ್ಯುತ್ ಕುಮಾರ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದ ನಾಯಕಿ ಶ್ರೀಲೀಲಾ, ಟ್ರೈಲರ್​​ನಲ್ಲಿ ಶ್ರೀಲೀಲಾ ಸಹ ಗಮನ ಸೆಳೆಯುತ್ತಾರೆ.

‘ಜೂನಿಯರ್’ ಸಿನಿಮಾ ಟ್ರೈಲರ್

ಟ್ರೈಲರ್​​ನಲ್ಲಿ ಕಿರೀಟಿಯ ಡ್ಯಾನ್ಸ್ ಮತ್ತು ಆಕ್ಷನ್ ಗಮನ ಸೆಳೆಯುತ್ತಿದೆ. ನಟನೆಯೂ ಪರವಾಗಿಲ್ಲ ಎನ್ನಬಹುದಾಗಿದೆ. ನುರಿತ ನಟನ ರೀತಿಯಲ್ಲಿ ಅವರು ಡ್ಯಾನ್ಸ್ ಮತ್ತು ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್​ ಸಹ ಚೆನ್ನಾಗಿದೆ. ಕೆಲವು ಆಕ್ಷನ್ ದೃಶ್ಯಗಳಲ್ಲಿ ಡ್ಯೂಪ್ ಇಲ್ಲದೆ ಅವರೇ ಪಾಲ್ಗೊಂಡಿರುವುದು ಟ್ರೈಲರ್​ನಲ್ಲಿ ಕಾಣುತ್ತದೆ.

‘ಜೂನಿಯರ್’ ಸಿನಿಮಾ ಅನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್. ಸಿನಿಮಾದ ಹಾಡೊಂದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿನಿಮಾ ನಿರ್ಮಾಣ ಮಾಡಿರುವುದು ‘ಈಗ’, ‘ಎನ್​ಟಿಆರ್ ಕಥಾನಾಯಕುಡು’ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ವರಾಹಿ ಸಂಸ್ಥೆ. ಸಿನಿಮಾ ತೆಲುಗು ಹಾಗೂ ಕನ್ನಡ ಭಾಷೆಗಳಲ್ಲಿ ಏಕಕಾಲಕ್ಕೆ ಜುಲೈ 18 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:56 pm, Sat, 12 July 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ