ದಳಪತಿ ವಿಜಯ್ ಚಿತ್ರದಲ್ಲಿ ನನ್ನ ಪಾತ್ರ ವೇಸ್ಟ್ ಮಾಡಿದರು; ಸಂಜಯ್ ದತ್ ಬೇಸರ
ಸಂಜಯ್ ದತ್ ಅವರು ಲೋಕೇಶ್ ಕನಗರಾಜ್ ನಿರ್ದೇಶನದ 'ಲಿಯೋ' ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಪಾತ್ರ ನಿರೀಕ್ಷೆಯಂತೆ ಕೆಲಸ ಮಾಡದಿರುವುದರಿಂದ ಅವರು ನಿರಾಶರಾಗಿದ್ದಾರೆ . 'ಲಿಯೋ' ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಅನೇಕರು ಟೀಕಿಸಿದ್ದರು. ಈಗ ಸಂಜಯ್ ದತ್ ಕೂಡ ಈ ಬಗ್ಗೆ ಮಾತನಾಡಿದಂತೆ ಆಗಿದೆ.

ನಟ ಸಂಜಯ್ ದತ್ (Sanjay Dutt) ಅವರು ಈಗ ಬಾಲಿವುಡ್ನಿಂದ ದಕ್ಷಿಣದತ್ತ ಮುಖ ಮಾಡಿದ್ದಾರೆ. ಇಲ್ಲಿ ಅವರು ವಿಲನ್ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ಮೊದಲು ಇಂಥ ಆಫರ್ ಕೊಟ್ಟಿದ್ದು ಪ್ರಶಾಂತ್ ನೀಲ್. ‘ಕೆಜಿಎಫ್ 2’ ಚಿತ್ರದಲ್ಲಿ ಅಧೀರನ ಪಾತ್ರವನ್ನು ನೀಡಿದರು. ಈ ಪಾತ್ರ ಸಾಕಷ್ಟು ಗಮನ ಸೆಳೆಯಿತು. ಈ ಕಾರಣದಿಂದಲೇ ದಕ್ಷಿಣದಲ್ಲಿ ಅವರಿಗೆ ಸಾಕಷ್ಟು ಆಫರ್ಗಳು ಬರುತ್ತಿವೆ. ಆದರೆ, ಅವರು ದಕ್ಷಿಣದಲ್ಲಿ ನಟಿಸಿದ ಎಲ್ಲಾ ಸಿನಿಮಾಗಳು ಹಿಟ್ ಆಗಿಲ್ಲ. ಇದರಲ್ಲಿ ‘ಲಿಯೋ’ ಕೂಡ ಸೇರಿದೆ. ಅವರ ಪಾತ್ರದ ಬಗ್ಗೆಯೇ ಸಂಜಯ್ ದತ್ಗೆ ಬೇಸರ ಇದೆ.
ಸಂಜಯ್ ದತ್ ಅವರು ವಿಜಯ್ ನಟನೆಯ, ಲೋಕೇಶ್ ಕನಗರಾಜ್ ನಿರ್ಮಾಣದ ‘ಲಿಯೋ’ ಚಿತ್ರದಲ್ಲಿ ಆ್ಯಂಟನಿ ದಾಸ್ ಹೆಸರಿನ ಪಾತ್ರ ಮಾಡಿದರು. ಈ ಚಿತ್ರದ ಟ್ರೇಲರ್ ನೋಡಿದವರಿಗೆ ಈ ಪಾತ್ರದಲ್ಲಿ ಏನೋ ಇದೆ ಎಂದೇ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಈ ಪಾತ್ರ ಕಮಾಲ್ ಮಾಡುವಲ್ಲಿ ವಿಫಲವಾಯಿತು. ಎಲ್ಲರೂ ಲೋಕೇಶ್ನ ಬೈದರು. ಈಗ ಸಂಜಯ್ ದತ್ ಕೂಡ ಇದೇ ಕೆಲಸ ಮಾಡಿದ್ದಾರೆ.
ಚೆನ್ನೈನಲ್ಲಿ ನಡೆದ ಈವೆಂಟ್ ಒಂದರಲ್ಲಿ ಮಾತನಾಡಿದ ಸಂಜಯ್ ದಯ್, ‘ನನಗೆ ಲೋಕೇಶ್ ಮೇಲೆ ಸಿಟ್ಟಿದೆ. ನನಗೆ ದೊಡ್ಡ ಆಫರ್ ನೀಡಿಲ್ಲ. ಅವರು ನನ್ನನ್ನು ವೇಸ್ಟ್ ಮಾಡಿ ಬಿಟ್ಟರು’ ಎಂದು ಹೇಳಿದ್ದಾರೆ. ಅವರ ಮಾತನ್ನು ಅನೇಕರು ಒಪ್ಪಿದ್ದಾರೆ. ಅಷ್ಟು ದೊಡ್ಡ ನಟನ ಈ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳಬಾರದಿತ್ತು ಎಂದು ಹೇಳಿದ್ದಾರೆ.
ಲೋಕೇಶ್ ಕನಗರಾಜ್ ಅವರು ತಮ್ಮದೇ ಸಿನಿಮಾ ಯೂನಿವರ್ಸ್ ಮಾಡಿದ್ದಾರೆ. ಅವರು ಯಾವಾಗಲೂ ಪಾತ್ರವನ್ನು ಸೃಷ್ಟಿಸುವಾಗ ಸ್ಟ್ರಾಂಗ್ ಆಗಿ ಆಲೋಚಿಸುತ್ತಾರೆ. ಆದರೆ, ‘ಲಿಯೋ’ ವಿಚಾರದಲ್ಲಿ ಒಟ್ಟಾರೆ ಕಥೆ ಹಾಗೂ ಪಾತ್ರಗಳು ಹೈಲೈಟ್ ಆಗಿರಲೇ ಇಲ್ಲ.
ಇದನ್ನೂ ಓದಿ: ‘ಕೆಡಿ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಬಾಲಿವುಡ್ ಬಗ್ಗೆ ಸಂಜಯ್ ದತ್ ಬೇಸರ
ಸದ್ಯ ‘ಕೆಡಿ: ದಿ ಡೆವಿಲ್’ ಸಿನಿಮಾದಲ್ಲಿ ಸಂಜಯ್ ದತ್ ನಟಿಸುತ್ತಿದ್ದಾರೆ. ಇದು ಪ್ರೇಮ್ ನಿರ್ದೇಶನದ ಸಿನಿಮಾ. ಈ ಚಿತ್ರದಲ್ಲಿ ಧ್ರುವ ಸರ್ಜಾ ನಾಯಕ. ಅವರದ್ದು ವಿಲನ್ ಪಾತ್ರ. ‘ದಿ ರಾಜಾ ಸಾಬ್’ ಸಿನಿಮಾ ಹಾಗೂ ರಣವೀರ್ ಸಿಂಗ್ ನಟನೆಯ ‘ಧುರಂದರ್’ ಚಿತ್ರದಲ್ಲಿಯೂ ಅವರು ಬಣ್ಣ ಹಚ್ಚುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:04 am, Sat, 12 July 25







