‘ಅಮೃತಧಾರೆ’ ಧಾರಾವಾಹಿಯಲ್ಲಿ ದೊಡ್ಡ ತಿರುವು; ಭೂಮಿಕಾಗೆ ಅವಳಿ ಮಕ್ಕಳು
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಅವಳಿ ಮಕ್ಕಳು ಜನಿಸುವ ಮೂಲಕ ದೊಡ್ಡ ತಿರುವುಂಟಾಗಿದೆ. ಜಯದೇವ ಮತ್ತು ಶಕುಂತಲಾ ಆಸ್ತಿಗಾಗಿ ಮಗುವನ್ನು ಕೊಲ್ಲಲು ಯತ್ನಿಸಿದರು ಆದರೆ ಶಿವು ಮತ್ತು ಪಾರು ಮಗುವನ್ನು ರಕ್ಷಿಸಿದರು. ಒಂದು ಮಗುವನ್ನು ಅಪಹರಿಸಲಾಯಿತು ಆದರೆ ಇನ್ನೊಂದು ಮಗು ಸೇಫ್ ಆಗಿಯೇ ಉಳಿದಿದೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ (Amruthadhare Serial) ಒಂದು ದೊಡ್ಡ ತಿರುವು ಬಂದಿದೆ. ಈ ತಿರುವನ್ನು ಯಾರೂ ಊಹಿಸಿರಲಿಕ್ಕಿಲ್ಲ. ಭೂಮಿಕಾ ಪ್ರೆಗ್ನೆಂಟ್ ಆಗಿದ್ದಳು ಮತ್ತು ಅವಳಿಗೆ ಅವಳಿ ಮಕ್ಕಳು ಜನಿಸಿದ್ದಾರೆ. ಈ ದೊಡ್ಡ ಟ್ವಿಸ್ಟ್ನಿಂದ ಮುಂದೆ ಧಾರಾವಾಹಿ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇತ್ತೀಚೆಗೆ ಎಪಿಸೋಡ್ನಲ್ಲಿ ಏನೆಲ್ಲ ಆಯ್ತು? ಮಗು ಜನಿಸುವುದಕ್ಕೂ ಮೊದಲು ಯಾವೆಲ್ಲ ಚಾಲೆಂಜ್ಗಳು ಬಂದವು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಭೂಮಿಕಾಗೆ ಮಗು ಹುಟ್ಟಬಾರದು ಎಂದು ಜಯದೇವ್ ಹಾಗೂ ಶಕುಂತಲಾ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಕಾರಣ ಆಸ್ತಿ. ಒಮ್ಮೆ ಭೂಮಿಕಾ ಹಾಗೂ ಗೌತಮ್ ದಂಪತಿಗೆ ಮಗು ಹುಟ್ಟಿದರೆ ಮಗುವಿಗೆ ಆಸ್ತಿ ಹೋಗುತ್ತದೆ ಎಂದು ನಂಬಿದ್ದಾನೆ ಜಯದೇವ. ಭೂಮಿಕಾಗೆ ಹಳ್ಳಿ ಔಷಧ ಕೊಡಿಸಲು ಹಳ್ಳಿಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ ರೌಡಿಗಳನ್ನು ಬಿಟ್ಟು ಮಗುವನ್ನು ಸಾಯಿಸುವ ಪ್ಲ್ಯಾನ್ ಮಾಡಿದ್ದು ಜೆಡಿ ಹಾಗೂ ಆತನ ತಾಯಿ ಶಕುಂತಲಾ.
ಆದರೆ, ಅಲ್ಲಾಗಿದ್ದೇ ಬೇರೆ. ‘ಅಣ್ಣಯ್ಯ’ ಧಾರಾವಾಹಿಯ ಶಿವು ಹಾಗೂ ಪಾರು ಬಂದು ಮಗುವನ್ನು ಕಾಪಾಡಲು ಪ್ರಯತ್ನಿಸಿದರು. ಸಾಯಿಸಲು ಬಂದ ರೌಡಿಗಳನ್ನು ಶಿವು ಹೊಡೆದು ಓಡಿಸಿದರೆ, ಭೂಮಿಕಾಗೆ ಮಗು ಹುಟ್ಟಲು ಡಾ. ಪಾರು ಹಾಗೂ ಡಾ. ಕರ್ಣ ಸಹಾಯ ಮಾಡಿದರು.
ಮೊದಲು ಒಂದು ಮಗು ಸರಿಯಾಗಿ ಹುಟ್ಟಿತು. ಅದನ್ನು ಜೆಡಿ ಬಂದು ಕಿಡ್ನ್ಯಾಪ್ ಮಾಡಿಕೊಂಡು ಹೋದನು. ಈ ಮೂಲಕ ಗೌತಮ್ ಕುಟುಂಬ ಕುಡಿ ನಾಶ ಆಯಿತು ಎಂಬ ಖುಷಿಯಲ್ಲಿ ಇವರು ಇದ್ದರು. ಆದರೆ, ಅಲ್ಲಿ ಒಂದು ಅಚ್ಚರಿಯ ಘಟನೆ ನಡೆಯಿತು. ಅದೇನೆಂದರೆ ಹೊಟ್ಟೆಯಲ್ಲಿ ಮತ್ತೊಂದು ಮಗು ಇದೆ ಎಂಬ ವಿಚಾರ ವೈದ್ಯರಿಗೆ ತಿಳಿಯಿತು.
ಒಂದು ಕಡೆ ಮಗು ಕಳೆದು ಹೋಯಿತು ಎಂದು ಟೆನ್ಶನ್ನಲ್ಲಿ ಇದ್ದ ಗೌತಮ್ಗೆ ಈ ವಿಚಾರ ಕೇಳಿ ಅಳಬೇಕೋ ಅಥವಾ ಖುಷಿಪಡಬೇಕೋ ಎಂಬುದು ಗೊತ್ತೇ ಆಗಿಲ್ಲ. ಭೂಮಿಕಾಗಿ ಅವಳಿ ಮಕ್ಕಳಿದ್ದಾರೆ ಎಂಬ ವಿಚಾರವನ್ನು ತಿಳಿದು ಜೆಡಿ ಹಾಗೂ ಶಂಕುತಲಾಗೆ ಏನು ಮಾಡಬೇಕು ಎಂಬುದೇ ತಿಳಿದಿಲ್ಲ. ಧಾರಾವಾಹಿಯಲ್ಲಿ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ‘ಅಮೃತಧಾರೆ’ ಟಿಆರ್ಪಿ ಏರಿಕೆ; ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ? ಇಲ್ಲಿದೆ ವಿವರ
ಈಗ ಕಿಡ್ನ್ಯಾಪ್ ಮಾಡಿದ್ದರ ಉದ್ದೇಶ ವಿಫಲ ಆದಂತೆ ಆಗಿದೆ. ಏಕೆಂದರೆ ಈಗ ಇಬ್ಬರು ಮಕ್ಕಳು ಇರುವುದರಿಂದ ಎರಡೂ ಮಗುವನ್ನು ಕಿಡ್ನ್ಯಾಪ್ ಮಾಡಬೇಕಿದೆ. ಅದು ಸಾಧ್ಯವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:57 am, Fri, 11 July 25