‘ಇನ್ಮೇಲೆ ಒಳ್ಳೇ ಮನುಷ್ಯ ಆಗ್ತೀನಿ’; ಎನ್​ಸಿಬಿ ಅಧಿಕಾರಿಗಳಿಗೆ ಭರವಸೆ ನೀಡಿದ ಶಾರುಖ್​ ಪುತ್ರ ಆರ್ಯನ್​ ಖಾನ್​

ಸ್ಟಾರ್​ ಕಿಡ್​ ಆರ್ಯನ್​ ಖಾನ್​ ಅವರು ಜೀವನದಲ್ಲಿ ಯಾವುದೇ ಕಷ್ಟ ನೋಡಿರಲಿಲ್ಲ. ಐಷಾರಾಮಿ ಸೌಲಭ್ಯಗಳನ್ನು ಅನುಭವಿಸುತ್ತಿದ್ದ ಅವರು ಈಗ ಸಾಮಾನ್ಯ ಖೈದಿಯಂತೆ ಜೈಲು ವಾಸ ಅನುಭವಿಸುತ್ತಿದ್ದಾರೆ. ಇದರಿಂದ ಅವರ ಮನ ಪರಿವರ್ತನೆ ಆದಂತಿದೆ.

‘ಇನ್ಮೇಲೆ ಒಳ್ಳೇ ಮನುಷ್ಯ ಆಗ್ತೀನಿ’; ಎನ್​ಸಿಬಿ ಅಧಿಕಾರಿಗಳಿಗೆ ಭರವಸೆ ನೀಡಿದ ಶಾರುಖ್​ ಪುತ್ರ ಆರ್ಯನ್​ ಖಾನ್​
ಆರ್ಯನ್ ಖಾನ್
Edited By:

Updated on: Oct 17, 2021 | 3:46 PM

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರು ಇನ್ನೂ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಮಾಡಿದ ಆರೋಪ ಅವರ ಮೇಲಿದೆ. ಎನ್​ಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ವೇಳೆ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಮತ್ತು ಕೆಲವು ಸಾಮಾಜಿಕ ಕಾರ್ಯಕರ್ತದಿಂದ ಆರ್ಯನ್​ಗೆ ಆಪ್ತ ಸಮಾಲೋಚನೆ ಕೊಡಿಸಲಾಗಿದೆ. ಅನೇಕ ವಿಚಾರಗಳ ಬಗ್ಗೆ ಅವರಿಗೆ ಬುದ್ಧಿ ಹೇಳಲಾಗುತ್ತಿದೆ. ಆ ಕುರಿತು ಕೆಲವು ಇಂಟರೆಸ್ಟಿಂಗ್​ ಮಾಹಿತಿಗಳು ಹೊರಬಿದ್ದಿವೆ.

ಸ್ಟಾರ್​ ಕಿಡ್​ ಆಗಿರುವ ಆರ್ಯನ್​ ಖಾನ್​ ಅವರು ಜೀವನದಲ್ಲಿ ಯಾವುದೇ ಕಷ್ಟ ನೋಡಿರಲಿಲ್ಲ. ಐಷಾರಾಮಿ ಸೌಲಭ್ಯಗಳನ್ನು ಅನುಭವಿಸುತ್ತಿದ್ದ ಅವರು ಈಗ ಸಾಮಾನ್ಯ ಖೈದಿಯಂತೆ ಜೈಲು ವಾಸ ಅನುಭವಿಸುತ್ತಿದ್ದಾರೆ. ಇದರಿಂದ ಅವರ ಮನ ಪರಿವರ್ತನೆ ಆದಂತಿದೆ. ‘ನಾನು ಇನ್ಮುಂದೆ ಕೆಟ್ಟ ಕೆಲಸ ಮಾಡುವುದಿಲ್ಲ. ಬಡಜನರ ಸಾಮಾಜಿಕ ಮತ್ತು ಆರ್ಥಿಕ ಏಳಿಗೆಗಾಗಿ ಶ್ರಮಿಸುತ್ತೇನೆ. ಕೆಟ್ಟ ಕಾರಣದಿಂದ ಯಾವತ್ತೂ ಸುದ್ದಿ ಆಗುವುದಿಲ್ಲ. ಹೆಸರು ಕೆಡಿಸಿಕೊಳ್ಳುವುದಿಲ್ಲ. ನನ್ನ ಬಗ್ಗೆ ನೀವು ಹೆಮ್ಮೆ ಪಡುವಂತೆ ಮಾಡುತ್ತೇನೆ’ ಅಂತ ಆರ್ಯನ್​ ಖಾನ್​ ಹೇಳಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಆರ್ಯನ್​ ಖಾನ್​ ಜೊತೆ ಬಂಧನಕ್ಕೆ ಒಳಗಾಗಿರುವ ಇನ್ನಿತರರಿಗೂ ಎನ್​ಸಿಬಿ ಅಧಿಕಾರಿಗಳು ಕೌನ್ಸಲಿಂಗ್​ ನೀಡಿದ್ದಾರೆ. ಆರ್ಯನ್​ಗೆ ಜಾಮೀನು ಕೊಡಿಸಬೇಕು ಎಂದು ಶಾರುಖ್​ ಖಾನ್​ ಮತ್ತು ಗೌರಿ ಖಾನ್​ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಮೊದಲು ಖ್ಯಾತ ವಕೀಲ ಸತೀಶ್​ ಮಾನೆಶಿಂಧೆ ಅವರು ವಕಾಲತ್ತು ವಹಿಸಿದ್ದರು. ನಂತರ ವಕೀಲರನ್ನು ಬದಲಾಯಿಸಲಾಯಿತು. ಏನೇ ಮಾಡಿದರೂ ಆರ್ಯನ್​ಗೆ ಜಾಮೀನು ಎಂಬುದು ಮರೀಚಿಕೆ ಆಗಿದೆ.

ಆರ್ಯನ್​ ಅರೆಸ್ಟ್​ ಆದ ನಂತರ ಶಾರುಖ್​ ಖಾನ್​ ಅವರ ಇಮೇಜ್​ಗೆ ಧಕ್ಕೆ ಆಗಿದೆ. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಕೆಲವು ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಶಾರುಖ್​ ರಾಯಭಾರಿ ಆಗಿದ್ದಾರೆ. ಅದರಿಂದ ಅವರಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ಸಿಗುತ್ತದೆ. ಆದರೆ ಮಗನ ಹಗರಣ ಹೊರಬಂದ ಬಳಿಕ ಕೆಲವು ಕಂಪನಿಗಳು ಶಾರುಖ್​ ಜೊತೆಗಿನ ಒಪ್ಪಂದವನ್ನು ಮುರಿದುಕೊಳ್ಳಲು ತೀರ್ಮಾನಿಸಿವೆ ಎನ್ನಲಾಗಿದೆ.

ಇದನ್ನೂ ಓದಿ:

ಶಾರುಖ್​ ಮಗನನ್ನು ಅರೆಸ್ಟ್​ ಮಾಡಿದ ಎನ್​ಸಿಬಿ ಅಧಿಕಾರಿಗೆ ಈಗ ಹೊಸ ತಲೆನೋವು; ಇದು ಯಾರ ಸಂಚು?

ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್​ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್​ ಖಾನ್​ ಇತಿಹಾಸ