‘ಸೂರ್ಯವಂಶಿ’ ನಟ ನಿಧನ; ವಾಯು ಪಡೆಯಲ್ಲಿ ಸೇವೆ ಸಲ್ಲಿಸಿ ಚಿತ್ರರಂಗಕ್ಕೆ ಬಂದಿದ್ದ ಆಶಿಶ್ ವಾರಂಗ್

ಪ್ರಸಿದ್ಧ ಹಿಂದಿ ಮತ್ತು ಮರಾಠಿ ಚಿತ್ರನಟ ಆಶಿಶ್ ವಾರಂಗ್ ಅವರು 55ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. "ಸೂರ್ಯವಂಶಿ" ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು, ಭಾರತೀಯ ವಾಯುಪಡೆಯಲ್ಲಿಯೂ ಸೇವೆ ಸಲ್ಲಿಸಿದ್ದರು. ಅವರ ಸಹೋದರ ಅಭಿಜೀತ್ ವಾರಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

‘ಸೂರ್ಯವಂಶಿ’ ನಟ ನಿಧನ; ವಾಯು ಪಡೆಯಲ್ಲಿ ಸೇವೆ ಸಲ್ಲಿಸಿ ಚಿತ್ರರಂಗಕ್ಕೆ ಬಂದಿದ್ದ ಆಶಿಶ್ ವಾರಂಗ್
ಆಶಿಶ್
Updated By: ರಾಜೇಶ್ ದುಗ್ಗುಮನೆ

Updated on: Sep 06, 2025 | 8:31 AM

ಸಾಕಷ್ಟು ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ನಟಿಸಿದ್ದ ನಟ ಆಶಿಶ್ ವಾರಂಗ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆಶಿಶ್ ಅವರ ಸಹೋದರ ಅಭಿಜೀತ್ ವಾರಂಗ್ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಅವರ ಪೋಸ್ಟ್‌ಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅವರಿಗೆ ಕೇವ 55 ವರ್ಷ ವಯಸ್ಸಾಗಿತ್ತು.

ಆಶಿಶ್ ವಾರಂಗ್ ಕೊನೆಯ ಬಾರಿಗೆ ‘ಸೂರ್ಯವಂಶಿ’ ಚಿತ್ರದಲ್ಲಿ ಕಾಣಿಸಿಕೊಂಡರು. ಅವರು ಅನೇಕ ಉತ್ತಮ ಬಾಲಿವುಡ್ ಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದರು. ‘ದೃಶ್ಯಂ’, ‘ಮರ್ದಾನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಅನೇಕ ಚಿತ್ರಗಳಲ್ಲಿ ಪೋಷಕ ನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಿಧನವು ಅನೇಕರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ.

ಆಶಿಶ್ ಚಿತ್ರರಂಗಕ್ಕೆ ಕಾಲಿಡುವ ಮೊದಲು, ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು. ಆಶಿಶ್ ವಾರಂಗ್ ಪ್ರಮುಖ ಪಾತ್ರಗಳಲ್ಲಿ ಹೆಚ್ಚು ಕೆಲಸ ಮಾಡದಿದ್ದರೂ, ಅವರು ಅನೇಕ ದೊಡ್ಡ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಜನಪ್ರಿಯ ಮುಖವಾಗಿದ್ದರು.

ಇದನ್ನೂ ಓದಿ
SIIMA 2025 Telugu: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣಗೆ ಅವಾರ್ಡ್
ಸೈಮಾ 2025: ಸುದೀಪ್ ಅತ್ಯುತ್ತಮ ನಟ, ಸಂಪೂರ್ಣ ವಿನ್ನರ್ ಪಟ್ಟಿ
ಬಿಗ್ ಬಾಸ್​ಗೆ ನಿರ್ಮಾಣ ಆಗಿದೆ ಬೇರೆಯದೇ ಮನೆ; ಹೇಗಿದೆ ಈ ಬಾರಿಯ ಸೆಟ್?
ರಾಜ್ ಮುಟ್ಟಿದ್ದೆಲ್ಲ ಚಿನ್ನ; ಹಂಚಿಕೆ ಮಾಡಿದ ‘ಲೋಕಃ’ ಗಳಿಕೆ ಜೋರು

ಅಭಿಜೀತ್ ವಾರಂಗ್ ಅವರು ಆಶಿಶ್ ವಾರಂಗ್ ಅವರ ನೆನಪಿಗಾಗಿ ಪೋಸ್ಟ್ ಬರೆದಿದ್ದಾರೆ. ‘ವಾರಂಗ್ ಆಶಿಶ್ ದಾದಾ, ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಮೊದಲು ನೀವು ವಾಯುಪಡೆಯ ಅಧಿಕಾರಿಯಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದೀರಿ ಮತ್ತು ನಂತರ ನಿಮ್ಮ ನಟನೆಯ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದೀರಿ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಯಶ್ ಬಂದಾಗ ಇಡೀ ‘ಟಾಕ್ಸಿಕ್’ ಸೆಟ್ ಸೈಲೆಂಟ್ ಆಗುತ್ತೆ’; ಬಾಲಿವುಡ್ ನಟ ಅಕ್ಷಯ್​ ಅಪರೂಪದ ಹೇಳಿಕೆ

ರೋಹಿತ್ ಶೆಟ್ಟಿ ಅವರ ‘ಸೂರ್ಯವಂಶಿ’ ಚಿತ್ರದಲ್ಲಿ ಆಶಿಶ್ ಕಾನ್​​ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು 2021ರಲ್ಲಿ ಬಿಡುಗಡೆಯಾಯಿತು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ಇದರ ಹೊರತಾಗಿ, ಅವರು ‘ಏಕ್ ವಿಲನ್ ರಿಟರ್ನ್ಸ್’, ಪ್ರಸಿದ್ಧ ವೆಬ್ ಸರಣಿ ‘ದಿ ಫ್ಯಾಮಿಲಿ ಮ್ಯಾನ್’ ನಲ್ಲಿಯೂ ಕಾಣಿಸಿಕೊಂಡರು. ಅವರು ತಮ್ಮ ಸಣ್ಣ ಆದರೆ ಪರಿಣಾಮಕಾರಿ ಪಾತ್ರಗಳೊಂದಿಗೆ ಪ್ರೇಕ್ಷಕರ ಮೇಲೆ ತಮ್ಮದೇ ಆದ ಛಾಪು ಮೂಡಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.