ಕಾರ್ತಿಕ್ ಆರ್ಯನ್ ಕಾಲ್​ಶೀಟ್ ಕೊಡಿಸೋದಾಗಿ ಮೋಸ; ಕರ್ನಾಟಕದಲ್ಲಿ ವಂಚಕ ಅರೆಸ್ಟ್

ಐಶ್ವರ್ಯಾ ಶರ್ಮಾ ಅವರಿಗೆ ಕಾರ್ತಿಕ್ ಆರ್ಯನ್ ಜೊತೆ ಸಿನಿಮಾ ಮಾಡಬೇಕು ಎಂದಿತ್ತು. ಈ ಚಿತ್ರಕ್ಕೆ ‘ಲವ್​ ಇನ್ ಲಂಡನ್’ ಎಂದು ಟೈಟಲ್ ಇಡೋಕೆ ನಿರ್ಧರಿಸಿದ್ದರು. ಈ ವಿಚಾರ ಕೃಷ್ಣ ಕುಮಾರ್​ಗೆ ಗೊತ್ತಾಗಿತ್ತು. ಆತ ಐಶ್ವರ್ಯಾನ ಸಂಪರ್ಕಿಸಿ, ನಟನ ಭೇಟಿ ಮಾಡಿಸೋದಾಗಿ ಹೇಳಿದ್ದರು.

ಕಾರ್ತಿಕ್ ಆರ್ಯನ್ ಕಾಲ್​ಶೀಟ್ ಕೊಡಿಸೋದಾಗಿ ಮೋಸ; ಕರ್ನಾಟಕದಲ್ಲಿ ವಂಚಕ ಅರೆಸ್ಟ್
ಕಾರ್ತಿಕ್ ಆರ್ಯನ್

Updated on: Jun 07, 2024 | 2:25 PM

ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಎಂದು ಕನಸು ಕಾಣುವ ಅನೇಕರು ಮೋಸ ಹೋಗುತ್ತಿದ್ದಾರೆ. ಸಿನಿಮಾದಲ್ಲಿ ಚಾನ್ಸ್ ಕೊಡಿಸೋದಾಗಿ ಮೋಸ ಮಾಡುವವರ ಸಂಖ್ಯೆ ಹೆಚ್ಚಿದೆ. ಈಗ ಬಾಲಿವುಡ್​ನಲ್ಲಿ ನಿರ್ಮಾಪಕಿ ಆಗಬೇಕು ಎಂದು ಕನಸು ಕಾಣುತ್ತಿದ್ದ ಐಶ್ವರ್ಯಾ ಶರ್ಮಾ (Aishwarya Sharma) ಅವರಿಗೆ ಮೋಸ ಆಗಿದೆ. ಕಾರ್ತಿಕ್ ಆರ್ಯನ್​ ಅವರ ಕಾಲ್​ಶೀಟ್ ಕೊಡಿಸೋ ನೆಪದಲ್ಲಿ ಬರೋಬ್ಬರಿ 82.75 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಸದ್ಯ ಕೃಷ್ಣ ಕುಮಾರ್ ಶರ್ಮಾ ಎಂಬಾತನನ್ನು ಬಂಧಿಸಲಾಗಿದೆ.

ಐಶ್ವರ್ಯಾ ಶರ್ಮಾ ಅವರಿಗೆ ಕಾರ್ತಿಕ್ ಆರ್ಯನ್ ಜೊತೆ ಸಿನಿಮಾ ಮಾಡಬೇಕು ಎಂದಿತ್ತು. ಈ ಚಿತ್ರಕ್ಕೆ ‘ಲವ್​ ಇನ್ ಲಂಡನ್’ ಎಂದು ಟೈಟಲ್ ಇಡೋಕೆ ನಿರ್ಧರಿಸಿದ್ದರು. ಈ ವಿಚಾರ ಕೃಷ್ಣ ಕುಮಾರ್​ಗೆ ಗೊತ್ತಾಗಿತ್ತು. ಆತ ಐಶ್ವರ್ಯಾನ ಸಂಪರ್ಕಿಸಿ, ನಟನ ಭೇಟಿ ಮಾಡಿಸೋದಾಗಿ ಹೇಳಿದ್ದರು. ಈ ಭೇಟಿಗೆ ಒಂದಷ್ಟು ಹಣದ ಅವಶ್ಯಕತೆ ಇದೆ ಎಂದಿದ್ದ ಕೃಷ್ಣ, ಐಶ್ವರ್ಯಾ ಅವರಿಂದ ಬರೋಬ್ಬರಿ 82 ಲಕ್ಷ ರೂಪಾಯಿ ಪಡೆದಿದ್ದ.

ಹಣ ಸಿಕ್ಕ ಬಳಿಕ ಕಾರ್ತಿಕ್ ಆರ್ಯನ್​ನ ಕೃಷ್ಣ ಭೇಟಿ ಮಾಡಿಸಲೇ ಇಲ್ಲ. ಈ ಬಗ್ಗೆ ಕೇಳಿದಾಗೆಲ್ಲ ಕಾರ್ತಿಕ್ ಆರ್ಯನ್ ಬ್ಯುಸಿ ಇದ್ದಾರೆ ಎನ್ನುತ್ತಿದ್ದ. ನಿಧಾನವಾಗಿ ಐಶ್ವರ್ಯಾಗೆ ತಾವು ಮೋಸ ಹೋಗಿದ್ದು ಗೊತ್ತಾಗಿದೆ. ಆತನಿಗೆ ಚಿತ್ರರಂಗದ ಜೊತೆ ನಂಟೇ ಇಲ್ಲ ಎಂಬ ವಿಚಾರ ತಿಳಿಸಿದೆ. .

ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆತ ಕರ್ನಾಟಕದಲ್ಲಿ ಇದ್ದ ಎನ್ನಲಾಗಿದೆ. ಇತ್ತೀಚೆಗೆ ಆತನ ಬಂಧಿಸಲಾಗಿದೆ. ಸದ್ಯ ಆತನ ವಿರುದ್ಧ ಮುಂಬೈ, ದೆಹಲಿ ಹಾಗೂ ಚೆನ್ನೈನಲ್ಲಿ ವಂಚನೆ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಜೊತೆ ನಟಿಸೋ ಚಾನ್ಸ್ ಪಡೆದ ತೃಪ್ತಿ ದಿಮ್ರಿ; ಹಾರರ್ ಸಿನಿಮಾಗೆ ಆಯ್ಕೆ

ಈ ಬಗ್ಗೆ ಕಾರ್ತಿಕ್ ಆರ್ಯನ್​ಗೆ ಮಾಹಿತಿಯೇ ಇರಲಿಲ್ಲ. ಅವರು ‘ಚಂದು ಚಾಂಪಿಯನ್’ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಕಬಿರ್ ಖಾನ್ ಅವರು ನಿರ್ದೇಶನ ಮಾಡಿದ್ದಾರೆ. ಜೂನ್ 14ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಇದರ ಜೊತೆಗೆ ‘ಭೂಲ್ ಭುಲಯ್ಯ 3’ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us