ಬಾಲಿವುಡ್​ನಲ್ಲಿ ಗೆದ್ದ ಎ.ಹರ್ಷ; ‘ಬಾಘಿ 4’ ಚಿತ್ರದ ಮೊದಲ ದಿನದ ಕಲೆಕ್ಷನ್ ಇಷ್ಟೊಂದಾ?

ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಎ. ಹರ್ಷ ಅವರು ಬಾಲಿವುಡ್‌ನಲ್ಲಿ ತಮ್ಮ ಮೊದಲ ಸಿನಿಮಾ ‘ಬಾಘಿ 4’ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ಟೈಗರ್ ಶ್ರಾಫ್ ಅಭಿನಯದ ಈ ಚಿತ್ರವು ಬಿಡುಗಡೆಯ ಮೊದಲ ದಿನವೇ ಭಾರಿ ಗಳಿಕೆ ಮಾಡಿದೆ. ಈ ಯಶಸ್ಸಿನ ಹಿಂದೆ ದಕ್ಷಿಣ ಭಾರತದ ಸಿನಿಮಾ ನಿರ್ಮಾಣ ಶೈಲಿಯ ಪ್ರಭಾವವಿದೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್​ನಲ್ಲಿ ಗೆದ್ದ ಎ.ಹರ್ಷ; ‘ಬಾಘಿ 4’ ಚಿತ್ರದ ಮೊದಲ ದಿನದ ಕಲೆಕ್ಷನ್ ಇಷ್ಟೊಂದಾ?
ಟೈಗರ್-ಹರ್ಷ

Updated on: Sep 06, 2025 | 3:06 PM

ಕನ್ನಡದ ನಿರ್ದೇಶಕ ಎ.ಹರ್ಷ (A Harsha) ಅವರು ಬಾಲಿವುಡ್​ಗೆ ಹೋಗಿ ಸದ್ದು ಮಾಡಿದ್ದಾರೆ. ಹೌದು, ಅವರ ನಿರ್ದೇಶನದ ‘ಬಾಘಿ 4’ ಸಿನಿಮಾ ಸೆಪ್ಟೆಂಬರ್ 5ರಂದು ರಿಲಿಸ್ ಆಗಿ ಮೆಚ್ಚುಗೆ ಪಡೆದಿದೆ. ನಟ ಟೈಗರ್ ಶ್ರಾಫ್ ಅವರು ಈ ಚಿತ್ರದ ಹೀರೋ. ಟೈಗರ್ ಸಿನಿಮಾ ಎಂದರೆ ಕೇವಲ ಫೈಟ್ ಹಾಗೂ ವೈಲೆನ್ಸ್​ಗಳು ಮಾತ್ರ ಇರುತ್ತಿದ್ದವು. ಆದರೆ, ಈ ಸಿನಿಮಾ ಭಿನ್ನವಾಗಿದೆ ಎಂಬ ಅಭಿಪ್ರಾಯ ಮೂಡಿ ಬಂದಿದೆ. ಈ ಸಿನಿಮಾ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ.

‘ಬಾಘಿ ’ ಸಿನಿಮಾ ಸರಣಿಯಲ್ಲಿ ಈಗಾಗಲೇ ನಾಲ್ಕು ಸಿನಿಮಾಗಳು ಬಂದು ಹೋಗಿವೆ. ಮೊದಲ ಪಾರ್ಟ್​ಗಿಂತ ಎರಡನೇ ಪಾರ್ಟ್​ ಚಾರ್ಮ್ ಕಳೆದುಕೊಂಡಿತ್ತು. ಮೂರನೇ ಪಾರ್ಟ್​ ಸಾಧಾರಣ ಎನಿಸಿಕೊಂಡಿತ್ತು. ಆದರೆ, ಬಿಸ್ನೆಸ್ ದೃಷ್ಟಿಯಿಂದ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಹೀಗಾಗಿ, ನಿರ್ಮಾಪಕರು ನಾಲ್ಕನೇ ಪಾರ್ಟ್ ಮಾಡಿದ್ದಾರೆ. ಇದಕ್ಕೆ ಕನ್ನಡದ ನಿರ್ದೇಶಕ ಎ. ಹರ್ಷ ಆ್ಯಕ್ಷನ್ ಹೇಳಿದ್ದಾರೆ. ಅವರು ಬಾಲಿವುಡ್​ನಲ್ಲಿ ಗೆದ್ದಿದ್ದಾರೆ.

‘ಬಾಘಿ 4’ ಸಿನಿಮಾ ಮೊದಲ ದಿನ ಬರೋಬ್ಬರಿ 12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕಿದೆ. ಬುಕ್ ಮೈ ಶೋನಲ್ಲಿ 8+ರೇಟಿಂಗ್ ಚಿತ್ರಕ್ಕೆ ಸಿಕ್ಕಿದೆ. ಹೀಗಾಗಿ, ಶನಿವಾರ ಹಾಗೂ ಭಾನುವಾರ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಚಿತ್ರ 100+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ ಹರ್ಷಗೆ ಬಾಲಿವುಡ್ ಆಫರ್ ಹೆಚ್ಚಲಿದೆ.

ಇದನ್ನೂ ಓದಿ
ಸೂರ್ಯವಂಶಿ ನಟ ನಿಧನ; ವಾಯು ಪಡೆಯಲ್ಲಿ ಸೇವೆ ಸಲ್ಲಿಸಿ ಚಿತ್ರರಂಗಕ್ಕೆ ಎಂಟ್ರಿ
SIIMA 2025 Telugu: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣಗೆ ಅವಾರ್ಡ್
ಸೈಮಾ 2025: ಸುದೀಪ್ ಅತ್ಯುತ್ತಮ ನಟ, ಸಂಪೂರ್ಣ ವಿನ್ನರ್ ಪಟ್ಟಿ
ಬಿಗ್ ಬಾಸ್​ಗೆ ನಿರ್ಮಾಣ ಆಗಿದೆ ಬೇರೆಯದೇ ಮನೆ; ಹೇಗಿದೆ ಈ ಬಾರಿಯ ಸೆಟ್?

ಇದನ್ನೂ ಓದಿ:  ಟೈಗರ್ ಶ್ರಾಫ್​ಗೆ ಸಿನಿಮಾ ನಿರ್ದೇಶಿಸಲಿರುವ ಕನ್ನಡದ ನಿರ್ದೇಶಕ

ದಕ್ಷಿಣ ನಿರ್ದೇಶಕರ ಸಿನಿಮಾ ಮೇಕಿಂಗ್ ಸ್ಟೈಲ್​ಗೂ ಬಾಲಿವುಡ್ ಸಿನಿಮಾ ನಿರ್ದೇಶಕರ ಶೈಲಿಗೂ ಸಾಕಷ್ಟು ವ್ಯತ್ಯಾಸ ಇದೆ. ಇಲ್ಲಿಯವರು ಸಿನಿಮಾಗಳನ್ನು ಸಖತ್ ಸ್ಪೈಸಿಯಾಗಿ ಮಾಡಬಲ್ಲರು ಎಂಬುದು ಬಾಲಿವುಡ್ ನಿರ್ಮಾಪಕರಿಗೆ ಅರ್ಥವಾಗಿದೆ. ಈ ಕಾರಣದಿಂದಲೇ ಸಾಕಷ್ಟು ಬಾಲಿವುಡ್ ನಿರ್ಮಾಪಕರು ದಕ್ಷಿಣದ ನಿರ್ದೇಶಕರನ್ನು ಕರೆಸುತ್ತಿದ್ದಾರೆ. ‘ಬಾಘಿ 4’ ಚಿತ್ರದ ನಿರ್ಮಾಪಕರು ಮಾಡಿದ್ದೂ ಅದನ್ನೇ. ಕಥೆ, ಸ್ಕ್ರಿಪ್ಟ್ ಎಲ್ಲವನ್ನೂ ನಿರ್ಮಾಪಕರೇ ನೀಡಿದ್ದರು. ಎ. ಹರ್ಷ ನಿರ್ದೇಶನದ ಜವಾಬ್ದಾರಿ ಮಾತ್ರ ಹೊತ್ತುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:03 pm, Sat, 6 September 25