ದಸರಾ ಬಳಿಕ ದೀಪಾವಳಿಗೆ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕ್ಲ್ಯಾಶ್

| Updated By: ರಾಜೇಶ್ ದುಗ್ಗುಮನೆ

Updated on: Oct 26, 2024 | 3:44 PM

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸ್ಪರ್ಧೆ ನಿರೀಕ್ಷಿಸಲಾಗಿದೆ. ಶ್ರೀಮುರಳಿ ಅಭಿನಯದ ‘ಬಘೀರ’, ‘ಭೂಲ್ ಭುಲಯ್ಯ 3’, ಮತ್ತು ಅಜಯ್ ದೇವಗನ್ ಅಭಿನಯದ ‘ಸಿಂಗಂ ಅಗೇನ್’ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯಾಗುತ್ತಿವೆ.

ದಸರಾ ಬಳಿಕ ದೀಪಾವಳಿಗೆ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕ್ಲ್ಯಾಶ್
ದಸರಾ ಬಳಿಕ ದೀಪಾವಳಿಗೆ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕ್ಲ್ಯಾಶ್
Follow us on

ದಸರಾ ಸಂದರ್ಭದಲ್ಲಿ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕ್ಲ್ಯಾಶ್ ಉಂಟಾದ ವಿಚಾರ ಗೊತ್ತೇ ಇದೆ. ತಮಿಳಿನಲ್ಲಿ ‘ವೆಟ್ಟೈಯಾನ್’,  ಕನ್ನಡದ ‘ಮಾರ್ಟಿನ್’, ಹಿಂದಿಯ ‘ಜಿಗ್ರಾ’ ಸಿನಿಮಾಗಳು ರಿಲೀಸ್ ಆಗಿತ್ತು. ಇದರಿಂದ ದೊಡ್ಡ ಕ್ಲ್ಯಾಶ್ ಉಂಟಾಗಿತ್ತು. ಯಾವ ಸಿನಿಮಾಗಳೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ವಿಫಲವಾದವು ಅನ್ನೋದು ಎರಡನೇ ವಿಚಾರ ಬಿಡಿ. ಈಗ ದಸರಾ ಬಳಿಕ ದೀಪಾವಳಿಗೆ ಮತ್ತೆ ದೊಡ್ಡ ಕ್ಲ್ಯಾಶ್ ಏರ್ಪಡುತ್ತಿದೆ. ಕನ್ನಡ, ಹಿಂದಿ, ತಮಿಳಿನಲ್ಲಿ ಸಿನಿಮಾಗಳು ಬಿಡುಗಡೆ ಕಾಣುತ್ತಿವೆ.

ಬಘೀರ

‘ಮಫ್ತಿ’ ಬಳಿಕ ನಟ ಶ್ರೀಮುರಳಿಗೆ ಬೇರೆಯದೇ ರೀತಿಯ ಮಾರುಕಟ್ಟೆ ಸೃಷ್ಟಿ ಆಗಿದೆ ಎನ್ನಬಹುದು. ಅವರನ್ನು ನೋಡುವ ದೃಷ್ಟಿ ಕೂಡ ಬದಲಾಗಿದೆ. ಈಗ ‘ಬಘೀರ’ ಚಿತ್ರದ ಮೂಲಕ ತೆರೆಮೇಲೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಎರಡು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಕರ್ನಾಟಕದ ಕ್ರಶ್ ಆಗಿರೋ ರುಕ್ಮಿಣಿ ವಸಂತ್ ಇದರಲ್ಲಿ ನಟಿಸಿದ್ದಾರೆ ಎಂಬುದು ಇಲ್ಲಿ ಮುಖ್ಯವಾಗಿದೆ.

‘ಭೂಲ್ ಭುಲಯ್ಯ 3’

‘ಭೂಲ್ ಭುಲಯ್ಯ’ ಸರಣಿಯಲ್ಲಿ ಮೂರನೇ ಸಿನಿಮಾ ಈಗ ತೆರೆಗೆ ಬರುತ್ತಿದೆ. ಮೊದಲ ಭಾಗಕ್ಕೆ ಅಕ್ಷಯ್ ಕುಮಾರ್ ಹೀರೋ ಆಗಿದ್ದರು. ಎರಡನೇ ಪಾರ್ಟ್​ಗೆ ಕಾರ್ತಿಕ್ ಆರ್ಯನ್ ಹೀರೋ ಆಗಿ ಗಮನ ಸೆಳೆದರು. ಈಗ ಈ ಚಿತ್ರಕ್ಕೆ ಮೂರನೇ ಭಾಗವು ಬರುತ್ತಿದೆ. ದೀಪಾವಳಿ ಪ್ರಯುಕ್ತ ನವೆಂಬರ್ 1ರಂದು ಸಿನಿಮಾ ರಿಲೀಸ್ ಆಗುತ್ತಿದೆ. ವಿದ್ಯಾ ಬಾಲನ್, ತೃಪ್ತಿ ದಿಮ್ರಿ, ಮಾಧುರಿ ದೀಕ್ಷಿತ್, ವಿಜಯ್ ರಾಜ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಸಿಂಗಂ ಅಗೇನ್

ರೋಹಿತ್ ಶೆಟ್ಟಿ ಸಿನಿಮಾಗಳು ಎಂದರೆ ಅಲ್ಲಿ ಧಾಂ ಧೂಂ ಇದ್ದೇ ಇರುತ್ತದೆ. ಅದೇ ರೀತಿ ‘ಸಿಂಗಂ ಅಗೇನ್’ ಚಿತ್ರದಲ್ಲಿಯೂ ಭರ್ಜರಿ ಕಥೆ ಇದೆ. ಈ ಸಿನಿಮಾದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಕಪೂರ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮೊದಲಾದವರು ನಟಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ನಲ್ಲಿ ರಿಲೀಸ್ ಕ್ಲ್ಯಾಷ್, ರೋಹಿತ್ ಶೆಟ್ಟಿ ವಿರುದ್ಧ ಟಿ-ಸೀರೀಸ್ ದೂರು 

ಉಳಿದಂತೆ..

ಶಿವ ಕಾರ್ತಿಕೇಯ ನಟನೆಯ ‘ಅಮರನ್’ ಚಿತ್ರವು ಅಕ್ಟೋಬರ್ 31ರಂದು ತೆರೆಗೆ ಬರುತ್ತಿದೆ. ಇದು ತಮಿಳಿನ ಸಿನಿಮಾ ಆಗಿದ್ದು, ಕನ್ನಡದಲ್ಲೂ ತೆರೆಗೆ ಬರುತ್ತಿದೆ. ದುಲ್ಕರ್ ಸಲ್ಮಾನ್ ನಟನೆಯ ‘ಲಕ್ಕಿ ಭಾಸ್ಕರ್’ ಚಿತ್ರ ಕೂಡ ಬಿಡುಗಡೆ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.