ಹೊಸ ಹೀರೋಗಳು ಚಿತ್ರರಂಗ ಹಾಳು ಮಾಡುತ್ತಿದ್ದಾರೆ: ನಿರ್ದೇಶಕ ರೋಹಿತ್

ಒಂದೆರಡು ಸಿನಿಮಾಗಳು ಹಿಟ್ ಆಗುತ್ತಿದ್ದಂತೆ ಹೊಸ ಹೀರೋಗಳು ತಮ್ಮ ಸಂಭಾವನೆಯನ್ನು ದೊಡ್ಡದಾಗಿ ಏರಿಸಿಕೊಳ್ಳುವುದಲ್ಲದೆ ಇಲ್ಲ-ಸಲ್ಲದ ಡಿಮ್ಯಾಂಡ್​ಗಳನ್ನು ಇಡುತ್ತಾರೆ, ಹೊಸ ಹೀರೋಗಳಿಂದ ಚಿತ್ರರಂಗ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಯಶಸ್ವಿ ನಿರ್ದೇಶಕರೊಬ್ಬರು.

ಹೊಸ ಹೀರೋಗಳು ಚಿತ್ರರಂಗ ಹಾಳು ಮಾಡುತ್ತಿದ್ದಾರೆ: ನಿರ್ದೇಶಕ ರೋಹಿತ್
Follow us
|

Updated on: Oct 27, 2024 | 10:19 AM

ಕೋವಿಡ್ ಬಳಿಕ ಭಾರತೀಯ ಚಿತ್ರರಂಗ ದೊಡ್ಡ ಹಂತದಲ್ಲಿ ಬೆಳೆಯುತ್ತಿದೆ. ಭಾರತೀಯ ಚಿತ್ರರಂಗ ಸಾವಿರಾರು ಕೋಟಿ ಉದ್ಯಮವಾಗಿದೆ. ಸಿನಿಮಾಗಳಿಗೆ ನೂರು ಕೋಟಿ ಎನ್ನುವುದು ಮಾಮೂಲಿ ವಿಷಯವಾಗಿದೆ. ಸಿನಿಮಾಗಳಿಂದ ಲಾಭ ಬರುವುದು ಹೆಚ್ಚಾದಂತೆ ನಟ-ನಟಿಯರ ಬೇಡಿಕೆಗಳೂ ಸಹ ಹೆಚ್ಚಾಗಿದೆ. ಕೆಲವು ನಿರ್ಮಾಪಕ, ನಿರ್ದೇಶಕರು ಈಗಾಗಲೇ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಸಿನಿಮಾ ನಟರು ತಮ್ಮ ಸಂಭಾವನೆ ತಗ್ಗಿಸಿಕೊಳ್ಳಬೇಕು ಎಂದಿದ್ದಾರೆ. ನಟ-ನಟಿಯರಿಂದ ಅನವಶ್ಯಕ ಖರ್ಚುಗಳಾಗುತ್ತಿವೆ ಎಂದಿದ್ದಾರೆ. ಇದೀಗ ಯಶಸ್ವಿ ನಿರ್ದೇಶಕರೊಬ್ಬರು ಹೊಸ ಹೀರೋಗಳಿಂದ ಚಿತ್ರರಂಗ ಹಾಳಾಗುತ್ತಿದೆ ಎಂದು ನೇರ ಆರೋಪ ಮಾಡಿದ್ದಾರೆ.

ಬಾಲಿವುಡ್​ನ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿರುವ ರೋಹಿತ್ ಶೆಟ್ಟಿ, ‘ಗೋಲ್​ಮಾಲ್’, ‘ಸಿಂಘಂ’, ‘ಸೂರ್ಯವಂಶಂ’ ಸರಣಿ ಸಿನಿಮಾಗಳ ಜೊತೆಗೆ ಇನ್ನೂ ಕೆಲವು ಸಿನಿಮಾಗಳನ್ನು ಮಾಡಿದ್ದು ಬಾಲಿವುಡ್​ನ ಮಾಸ್ ನಿರ್ದೇಶಕ ಎನಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ವಿವಾದಗಳಿಂದ ದೂರವೇ ಇರುವ ರೋಹಿತ್ ಶೆಟ್ಟಿ ಇತ್ತೀಚೆಗಿನ ತಮ್ಮ ಸಂದರ್ಶನವೊಂದರಲ್ಲಿ ಹೊಸ ನಾಯಕ ನಟರುಗಳಿಂದ ನಮ್ಮ ಚಿತ್ರರಂಗ ಹಾಳಾಗುತ್ತಿದೆ. ಅವರೇ ಚಿತ್ರರಂಗವನ್ನು ಕೆಡಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಬಾಲಿವುಡ್​ನಲ್ಲಿ ರಿಲೀಸ್ ಕ್ಲ್ಯಾಷ್, ರೋಹಿತ್ ಶೆಟ್ಟಿ ವಿರುದ್ಧ ಟಿ-ಸೀರೀಸ್ ದೂರು

‘ನಮ್ಮ ಹಿರಿಯರನ್ನು ಒಮ್ಮೆ ನೋಡಿ, ಸಲ್ಮಾನ್ ಖಾನ್, ಶಾರುಖ್ ಖಾನ್, ಅಜಯ್ ದೇವಗನ್ ಅವರ್ಯಾರೂ ಸಹ ಸಿನಿಮಾದ ನಂಬರ್​ಗಳ ಬಗ್ಗೆ ಮಾತನಾಡುವುದಿಲ್ಲ. ಅಜಯ್ ದೇವಗನ್ ನಟಿಸಿದ ‘ದೃಶ್ಯಂ 2’ ಸಿನಿಮಾ 200 ಕೋಟಿಗೂ ಹೆಚ್ಚು ಹಣ ಗಳಿಸಿತು. ಆದರೆ ಅವರು ಅದನ್ನು ಸೆಲೆಬ್ರೇಟ್ ಮಾಡಲಿಲ್ಲ. ನನ್ನ ಸಿನಿಮಾ ಇಷ್ಟು ಗಳಿಸಿದೆ ಎಂದು ಹೇಳಿಕೊಂಡು ಓಡಾಡುವುದಿಲ್ಲ. ಆದರೆ ಈಗಿನ ಕೆಲವು ನಾಯಕರು, ಒಂದು ಸಿನಿಮಾ ಹಿಟ್ ಆದರೆ ಸಾಕು ಸ್ಟಾರ್​ಗಳಂತೆ ವರ್ತಿಸುತ್ತಾರೆ. ಸಂಭಾವನೆಯನ್ನು ಥಟ್ಟನೆ ಹೆಚ್ಚಿಸಿಕೊಳ್ಳುತ್ತಾರೆ. ಮ್ಯಾನೇಜರ್​ಗಳ ಮೂಲಕ ಇಲ್ಲ-ಸಲ್ಲದ ಬೇಡಿಕೆಗಳನ್ನು ಇಡುತ್ತಾರೆ. ನಮ್ಮಂಥಹಾ ನಿರ್ದೇಶಕರು ಸಹ ಅವರೊಟ್ಟಿಗೆ ನೇರವಾಗಿ ಮಾತನಾಡಲು ಆಗಲ್ಲ, ಮ್ಯಾನೇಜರ್ ಮೂಲಕವೇ ಮಾತನಾಡಬೇಕು ಅಂಥಹಾ ಸ್ಥಿತಿ ನಿರ್ಮಾಣ ಆಗಿದೆ’ ಎಂದಿದ್ದಾರೆ.

‘ಇಂಥಹಾ ಹೊಸ ನಾಯಕ ನಟರೇ ಚಿತ್ರರಂಗವನ್ನು ಹಾಳು ಮಾಡುತ್ತಿದ್ದಾರೆ. ಒಂದೆರಡು ಸಿನಿಮಾ ಹಿಟ್ ಆದ ಕೂಡಲೇ ಸ್ಟಾರ್​ಗಳಂತೆ ವರ್ತಿಸುವುದನ್ನು ಬಿಡಬೇಕು’ ಎಂದಿದ್ದಾರೆ ರೋಹಿತ್ ಶೆಟ್ಟಿ. ಈ ಹಿಂದೆ ಕರಣ್ ಜೋಹರ್ ಸಹ ಇದೇ ವಿಷಯವನ್ನು ಹೇಳಿದ್ದರು. ಕಾರ್ತಿಕ್ ಆರ್ಯನ್ ಒಂದೆರಡು ಸಿನಿಮಾ ಹಿಟ್ ನೀಡಿ ಈಗ ಸುಮಾರು 50 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಕಾರ್ತಿಕ್ ಆರ್ಯನ್ ಮಾತ್ರವೇ ಅಲ್ಲದೆ ಇತ್ತೀಚೆಗೆ ಒಂದೂ ಹಿಟ್ ನೀಡದ ಟೈಗರ್ ಶ್ರಾಫ್ ಇನ್ನೂ ಕೆಲವು ನಟರು ಸಹ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ಕನಸಿನಲ್ಲಿ ಅಕ್ಷತೆ ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ
Daily Devotional: ಕನಸಿನಲ್ಲಿ ಅಕ್ಷತೆ ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ
ವಾರ ಭವಿಷ್ಯ: ಅಕ್ಟೋಬರ್ 28 ರಿಂದ ನವೆಂಬರ್​ 03ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ಅಕ್ಟೋಬರ್ 28 ರಿಂದ ನವೆಂಬರ್​ 03ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರು ಇಂದು ಆರ್ಥಿಕವಾಗಿ ಸಬಲರಾಗುತ್ತಾರೆ
Nithya Bhavishya: ಈ ರಾಶಿಯವರು ಇಂದು ಆರ್ಥಿಕವಾಗಿ ಸಬಲರಾಗುತ್ತಾರೆ
ಕರುವನ್ನು ಇಡಿಯಾಗಿ ನುಂಗಿದ ಹೆಬ್ಬಾವು; ಶಾಕಿಂಗ್ ವಿಡಿಯೋ ವೈರಲ್
ಕರುವನ್ನು ಇಡಿಯಾಗಿ ನುಂಗಿದ ಹೆಬ್ಬಾವು; ಶಾಕಿಂಗ್ ವಿಡಿಯೋ ವೈರಲ್
ಬಿಗ್ ಬಾಸ್​ನಲ್ಲಿ ಹನುಮಂತ ಸ್ಪರ್ಧಿಯೇ ಅಲ್ಲ? ಹಾಗಾದ್ರೆ ಮತ್ತಿನ್ನೇನು?
ಬಿಗ್ ಬಾಸ್​ನಲ್ಲಿ ಹನುಮಂತ ಸ್ಪರ್ಧಿಯೇ ಅಲ್ಲ? ಹಾಗಾದ್ರೆ ಮತ್ತಿನ್ನೇನು?
ಹರಿದ್ವಾರದ ಬೆಟ್ಟದಲ್ಲಿ ರೀಲ್ಸ್ ಮಾಡುವಾಗ ಆಳದ ಕಂದಕಕ್ಕೆ ಬಿದ್ದ ಮಹಿಳೆ
ಹರಿದ್ವಾರದ ಬೆಟ್ಟದಲ್ಲಿ ರೀಲ್ಸ್ ಮಾಡುವಾಗ ಆಳದ ಕಂದಕಕ್ಕೆ ಬಿದ್ದ ಮಹಿಳೆ
ಹನುಮಂತನ ಕಂಡ್ರೆ ಯೋಗರಾಜ್​ ಭಟ್​ಗೆ ವಿಶೇಷ ಪ್ರೀತಿ
ಹನುಮಂತನ ಕಂಡ್ರೆ ಯೋಗರಾಜ್​ ಭಟ್​ಗೆ ವಿಶೇಷ ಪ್ರೀತಿ
ಸಮನ್ವಯ ಸಭೆಯಲ್ಲಿ ಕಾಮರಾಡರೀ ಪ್ರದರ್ಶಿಸಿದ ವಿಜಯೇಂದ್ರ ಮತ್ತು ನಿಖಿಲ್
ಸಮನ್ವಯ ಸಭೆಯಲ್ಲಿ ಕಾಮರಾಡರೀ ಪ್ರದರ್ಶಿಸಿದ ವಿಜಯೇಂದ್ರ ಮತ್ತು ನಿಖಿಲ್
ಬಿಜೆಪಿ ಕಚೇರಿಗೆ ಬಂದ ನಿಖಿಲ್ ಕುಮಾರಸ್ವಾಮಿಗೆ ಸಿಕ್ಕಿತು ಅದ್ದೂರಿ ಸ್ವಾಗತ
ಬಿಜೆಪಿ ಕಚೇರಿಗೆ ಬಂದ ನಿಖಿಲ್ ಕುಮಾರಸ್ವಾಮಿಗೆ ಸಿಕ್ಕಿತು ಅದ್ದೂರಿ ಸ್ವಾಗತ
ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ
ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ