AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿಂಗಂ ಅಗೇನ್’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್​ನಲ್ಲಿ ಸಿಂಹಪಾಲು; ಉಳಿದ ಸಿನಿಮಾಗಳಿಗೆ ಸಂಕಷ್ಟ

ದೀಪಾವಳಿ ಹಬ್ಬದಂದು ಅಜಯ್ ದೇವಗನ್ ಅಭಿನಯದ ‘ಸಿಂಗಂ ಅಗೇನ್’ ಮತ್ತು ಕಾರ್ತಿಕ್ ಆರ್ಯನ್ ಅಭಿನಯದ ‘ಭೂಲ್ ಭುಲಯ್ಯ 3’ ಚಿತ್ರಗಳು ತೆರೆಗೆ ಬರುತ್ತಿವೆ. ಪಿವಿಆರ್-ಐನಾಕ್ಸ್ 60% ಶೋಗಳನ್ನು ‘ಸಿಂಗಂ ಅಗೇನ್’ಗೆ ಮೀಸಲಿಟ್ಟಿದೆ. ಎರಡೂ ಚಿತ್ರಗಳು ಭಾರಿ ನಿರೀಕ್ಷೆಯನ್ನು ಹೊಂದಿದ್ದು, ಬಾಕ್ಸ್ ಆಫೀಸ್‌ನಲ್ಲಿ ಯಾವುದು ಗೆಲ್ಲಲಿದೆ ಎಂಬ ಕುತೂಹಲ ಮೂಡಿದೆ. ‘ಸಿಂಗಂ ಅಗೇನ್’ನಲ್ಲಿ ಆ್ಯಕ್ಷನ್-ಥ್ರಿಲ್ಲರ್ ಇದ್ದರೆ, ‘ಭೂಲ್ ಭುಲಯ್ಯ 3’ ಹಾರರ್ ಚಿತ್ರವಾಗಿದೆ.

‘ಸಿಂಗಂ ಅಗೇನ್’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್​ನಲ್ಲಿ ಸಿಂಹಪಾಲು; ಉಳಿದ ಸಿನಿಮಾಗಳಿಗೆ ಸಂಕಷ್ಟ
ಸಿಂಗಂ ಅಗೇನ್, ಭೂಲ್ ಭುಲಯ್ಯ 3
ಮದನ್​ ಕುಮಾರ್​
|

Updated on: Oct 27, 2024 | 6:46 PM

Share

ದೀಪಾವಳಿ ಹಬ್ಬದ ಪ್ರಯುಕ್ತ ಬಾಲಿವುಡ್​ನಲ್ಲಿ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗಲಿವೆ. ಅಜಯ್​ ದೇವಗನ್​ ನಟನೆಯ ‘ಸಿಂಗಂ ಅಗೇನ್’ ಸಿನಿಮಾ ನವೆಂಬರ್​ 1ರಂದು ತೆರೆಗೆ ಬರುತ್ತಿದೆ. ಅದೇ ದಿನ ಕಾರ್ತಿಕ್ ಆರ್ಯನ್ ನಟನೆಯ ‘ಭೂಲ್ ಭುಲಯ್ಯ 3’ ಸಿನಿಮಾ ಕೂಡ ರಿಲೀಸ್​ ಆಗುತ್ತಿದೆ. ಯಾವ ಸಿನಿಮಾಗೆ ಹೆಚ್ಚು ಕಲೆಕ್ಷನ್​ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಸಿನಿಪ್ರಿಯರಲ್ಲಿ ಮೂಡಿದೆ. ವರದಿಗಳ ಪ್ರಕಾರ, ಪಿವಿಆರ್​-ಐನಾಕ್ಸ್​ ಮಲ್ಟಿಪ್ಲೆಕ್ಸ್​ಗಳಲ್ಲಿ ಶೇ. 60 ಶೋಗಳನ್ನು ‘ಸಿಂಗಂ ಅಗೇನ್’ ಸಿನಿಮಾಗಾಗಿ ಮೀಸಲಿಡಲು ತೀರ್ಮಾನಿಸಲಾಗಿದೆ. ಇದರಿಂದ ಇನ್ನುಳಿದ ಸಿನಿಮಾಗಳಿಗೆ ಶೋ ಕೊರತೆ ಎದುರಾಗುವ ಸಾಧ್ಯತೆ ಇದೆ.

‘ಸಿಂಗಂ ಅಗೇನ್’ ಸಿನಿಮಾಗೆ ರೋಹಿತ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಆ್ಯಕ್ಷನ್​ ಥ್ರಿಲ್ಲರ್​ ಕಹಾನಿ ಇದೆ. ಅಜಯ್ ದೇವಗನ್, ಕರೀನಾ ಕಪೂರ್​ ಖಾನ್​, ಅರ್ಜುನ್​ ಕಪೂರ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಕ್ಷಯ್ ಕುಮಾರ್​, ದೀಪಿಕಾ ಪಡುಕೋಣೆ, ಟೈಗರ್​ ಶ್ರಾಫ್​, ಸಲ್ಮಾನ್​ ಖಾನ್, ರಣವೀರ್​ ಸಿಂಗ್​ ಮುಂತಾದವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಟ್ರೇಲರ್​ ಧೂಳೆಬ್ಬಿಸಿದೆ.

ಈ ಸಿನಿಮಾಗೆ ಪ್ರೇಕ್ಷಕರ ವಲಯದಿಂದ ಭಾರಿ ಡಿಮ್ಯಾಂಡ್​ ಇರುವ ಕಾರಣದಿಂದ ಶೇ. 60ರಷ್ಟು ಶೋಗಳನ್ನು ಮೀಸಲಿಡುವ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ. ಪಿವಿಆರ್​-ಐನಾಕ್ಸ್​ ಹೊರತುಪಡಿಸಿ ಇನ್ನುಳಿದ ಮಲ್ಟಿಪ್ಲೆಕ್ಸ್​ಗಳು ಯಾವ ರೀತಿ ನಿರ್ಧಾರ ತೆಗೆದುಕೊಳ್ಳಲಿವೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ. ಈ ಸಿನಿಮಾ ಭರ್ಜರಿ ನಿರೀಕ್ಷೆ ಸೃಷ್ಟಿ ಮಾಡಿದೆ. ಆದ್ದರಿಂದ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮೊತ್ತದ ಕಲೆಕ್ಷನ್​ ಆಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ‘ಸಿಂಗಂ ಅಗೇನ್’ ರಿಲೀಸ್​ಗೂ ಮೊದಲು ಬಿಡುಗಡೆ ಕಾಣ್ತಿದೆ ‘ಸಿಂಘಂ’ ಸಿನಿಮಾ

ಅದೇ ದಿನ ‘ಭೂಲ್​ ಭುಲಯ್ಯ 3’ ಸಿನಿಮಾ ತೆರೆ ಕಾಣಲಿದೆ. ಇದು ಹಾರರ್​ ಸಿನಿಮಾ. ಈ ವರ್ಷ ‘ಮುಂಜ್ಯ’, ‘ಸ್ತ್ರೀ 2’ ಮುಂತಾದ ಹಾರರ್​​ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಹಾಗಾಗಿ ‘ಭೂಲ್​ ಭುಲಯ್ಯ 3’ ಸಿನಿಮಾ ಮೇಲೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಾಧುರಿ ದೀಕ್ಷಿತ್, ವಿದ್ಯಾ ಬಾಲನ್, ತೃಪ್ತಿ ದಿಮ್ರಿ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಒಂದು ವೇಳೆ ‘ಸಿಂಗಂ ಅಗೇನ್​’ ಸಿನಿಮಾ ಎಲ್ಲ ಪರದೆಗಳನ್ನು ಆಕ್ರಮಿಸಿಕೊಂಡರೆ ಅದರಿಂದ ‘ಭೂಲ್ ಭುಲಯ್ಯ 3’ ಸಿನಿಮಾಗೆ ತೊಂದರೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್