ಬಿಗ್ ಬಾಸ್ ಸ್ಪರ್ಧಿಗೆ ಸಾರ್ವಜನಿಕವಾಗಿಯೇ ಕಿಸ್ ಕೊಟ್ಟ ಅಭಿಮಾನಿ; ಶಾಕ್ ಆದ ನಟಿ

| Updated By: ರಾಜೇಶ್ ದುಗ್ಗುಮನೆ

Updated on: Aug 13, 2021 | 6:21 PM

ಜಾಸ್ಮಿನ್​ ಮಾಸ್ಕ್​ ಧರಿಸಿ ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದರು. ಈ ವೇಳೆ ಅಭಿಮಾನಿಯೋರ್ವಳು ಜಾಸ್ಮಿನ್​ ಅವರನ್ನು ಗುರುತಿಸಿದ್ದಾರೆ. ಅಲ್ಲದೆ, ಸೆಲ್ಫಿ ತೆಗೆದುಕೊಳ್ಳೋಕೆ ಅನುಮತಿ ಕೇಳಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗೆ ಸಾರ್ವಜನಿಕವಾಗಿಯೇ ಕಿಸ್ ಕೊಟ್ಟ ಅಭಿಮಾನಿ; ಶಾಕ್ ಆದ ನಟಿ
ಬಿಗ್​ ಬಾಸ್​ ಸ್ಪರ್ಧಿಗೆ ಸಾರ್ವಜನಿಕವಾಗಿಯೇ ಕಿಸ್​ ಕೊಟ್ಟ ಅಭಿಮಾನಿ; ಶಾಕ್​ ಆದ ನಟಿ
Follow us on

ಅಭಿಮಾನಿಗಳು ತಮ್ಮಿಷ್ಟದ ನಟ-ನಟಿಯರನ್ನು ಕಂಡರೆ ಸೆಲ್ಫಿಗೆ ಮುಗಿಬೀಳುತ್ತಾರೆ. ಅನೇಕ ಕಲಾವಿದರಿಗೆ ಇದು ಇಷ್ಟವಾಗುವುದಿಲ್ಲ. ಸೆಲ್ಫಿ ತೆಗೆದುಕೊಳ್ಳುವ ವೇಳೆ ಕೆಲವೊಮ್ಮೆ ಮುಜುಗರ ಆಗುವಂತಹ ಘಟನೆ ನಡೆದ ಉದಾಹರಣೆ ಕೂಡ ಸಾಕಷ್ಟಿದೆ. ಈಗ ಬಿಗ್​ ಬಾಸ್​ ಸೀಸನ್​ 14ರ ಸ್ಪರ್ಧಿ ಜಾಸ್ಮಿನ್​ ಭಾಸಿನ್​ಗೆ ಅಭಿಮಾನಿಯೊಬ್ಬಳು ಕಿಸ್​ ಮಾಡಿದ್ದಾಳೆ. ಈ ವಿಡಿಯೋ ಈಗ ಸಾಕಷ್ಟು ವೈರಲ್​ ಆಗುತ್ತಿದೆ.

ಜಾಸ್ಮಿನ್​ ಮಾಸ್ಕ್​ ಧರಿಸಿ ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದರು. ಈ ವೇಳೆ ಅಭಿಮಾನಿಯೋರ್ವಳು ಜಾಸ್ಮಿನ್​ ಅವರನ್ನು ಗುರುತಿಸಿದ್ದಾರೆ. ಅಲ್ಲದೆ, ಸೆಲ್ಫಿ ತೆಗೆದುಕೊಳ್ಳೋಕೆ ಅನುಮತಿ ಕೇಳಿದ್ದಾರೆ. ಆಗ ಜಾಸ್ಮಿನ್​ ಇದಕ್ಕೆ ಬೇಡ ಎನ್ನಲಿಲ್ಲ. ಸೆಲ್ಫಿ ತೆಗೆದುಕೊಳ್ಳೋಕೆ ಅವರು ಅವಕಾಶ ನೀಡಿದ್ದಾರೆ. ಜಾಸ್ಮಿನ್​ ಜತೆ ನಿಂತ ಅಭಿಮಾನಿ ಸೆಲ್ಫಿ ತೆಗೆದುಕೊಂಡಿದ್ದಾಳೆ. ಹೊರಡುವಾಗ ಜಾಸ್ಮಿನ್​ಗೆ ಕಿಸ್​ ಮಾಡಿ ತೆರಳಿದ್ದಾಳೆ ಯುವತಿ. ಇದು ಜಾಸ್ಮಿನ್​ಗೆ ಇರಿಸುಮುರುಸು ಉಂಟು ಮಾಡಿದೆ.

ಈ ವಿಡಿಯೋಗೆ ಸಾಕಷ್ಟು ಜನರು ಕಮೆಂಟ್​ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ‘ಅವರು ಕೂಡ ಮನುಷ್ಯರೇ. ಯಾರೋ ಬಂದು ಕಿಸ್​ ಮಾಡಿ ಹೋದರೆ ಅವರಿಗೆ ಹೇಗನ್ನಿಸಬೇಡ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ಅಸೂಯೆಪಟ್ಟುಕೊಂಡಿದ್ದಾರೆ. ‘ನನ್ನ ಜಾಸ್​ ಒಪ್ಪಿಗೆ ಇಲ್ಲದೆ ನೀವು ಅದೇಗೆ ಕಿಸ್​ ಮಾಡುತ್ತೀರಿ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಜಾಸ್ಮಿನ್​ ಅವರು ಬಿಗ್​ ಬಾಸ್​ ಸೀಸನ್​ 14ರಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ‘ಬಿಗ್​ ಬಾಸ್​ 14’ ಪೂರ್ಣಗೊಂಡಿತ್ತು. ಜಾಸ್ಮಿನ್​ ಬಾಯ್​ಫ್ರೆಂಡ್​ ಅಲಿ ಗೋನಿ ಕೂಡ ಬಿಗ್​ ಬಾಸ್​ಗೆ ಎಂಟ್ರಿ ಕೊಟ್ಟಿದ್ದರು. ಮನೆ ಒಳಗೆ ಹೋಗುವುದಕ್ಕೂ ಮೊದಲು ಇವರು ತಮ್ಮ ರಿಲೇಶನ್​ಶಿಪ್​ ಬಗ್ಗೆ ಹೇಳಿಕೊಂಡಿರಲಿಲ್ಲ. ಆದರೆ, ಮನೆ ಒಳಗೆ ತೆರಳಿದ ನಂತರದಲ್ಲಿ ಇಬ್ಬರೂ ತುಂಬಾನೇ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದರು.

ಇನ್ನು, ಮದುವೆ ವಿಚಾರದ ಬಗ್ಗೆ ಸಾಕಷ್ಟು ಬಾರಿ ಜಾಸ್ಮಿನ್​ ಮಾತನಾಡಿದ್ದರು. ‘ಈಗಂತು ಮದುವೆ ಸಾಧ್ಯವಿಲ್ಲ. ನಾವು ಕೂಡ ಚರ್ಚಿಸಿಲ್ಲ. ಇದು ಹೊಸ ಹೊಸ ಪ್ರಣಯ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ‘ಬೇರೆ ವಿಚಾರಗಳಲ್ಲಿ ಮನಸ್ತಾಪ ಬೇಡ’; ಬಿಗ್​ ಬಾಸ್​ ಮುಗಿದ್ಮೇಲೆ ಮೊದಲ ಬಾರಿಗೆ ಅಭಿಮಾನಿಗಳೆದರು ಬಂದ ಅರವಿಂದ್​