ರಣವೀರ್ ಅಲ್ಲಾಬಾಡಿಯ ಅವರ ಜನಪ್ರಿಯ ಟಾಕ್ ಶೋ ರಣ್ವೀರ್ ಶೋದಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ತಾವು ಕಾಲೇಜಿಗೆ ಹೋಗುವ ದಿನಗಳಲ್ಲಿ ತಮ್ಮ ಕುಟುಂಬ ಎದುರಿಸುತ್ತಿದ್ದ ಆರ್ಥಿಕ ಪರಿಸ್ಥಿಯ ಬಗ್ಗೆ ಹಾಗೂ ತಾವು ಅರ್ಧದಲ್ಲೇ ಕಾಲೇಜು ತೊರೆದುದರ ಬಗ್ಗೆ ಮಾತನಾಡಿದ್ದಾರೆ. ನಾನು ಕಾಲೇಜಿಗೆ ಹೋಗಬೇಕಾದರೆ ನನ್ನ ತಂದೆ ಅವರ ಸಿಬ್ಬಂದಿಯಿಂದ ಹಣವನ್ನು ಸಾಲವಾಗಿ ಪಡೆದು ನನ್ನನ್ನು ಓದಿಸುತ್ತಿದ್ದರು. ಹೀಗಾಗಿ ನಾನು ಕಾಲೇಜು ತೊರೆದು ಅಪ್ಪನೊಂದಿಗೆ ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕೆಂದು ನಿರ್ಧರಿಸಿದೆ ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಅಭಿಷೇಕ್ ಬಚ್ಚನ್ ಅವರು ಸ್ವಿಡ್ಜರ್ಲ್ಯಾಂಡ್ನ ಐಗ್ಲಾನ್ ಕಾಲೇಜ್ ಎಂಬ ಬೋರ್ಡಿಂಗ್ ಸ್ಕೂಲ್ನಲ್ಲಿ ಓದಿದ ಬಳಿಕ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಈ ಸಮಯದಲ್ಲಿ ಅಮಿತಾಬ್ ಬಚ್ಚನ್ ಅವರು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರು. ಆದ್ದರಿಂದ ಅಮಿತಾಬ್ ಅವರು ತಮ್ಮ ಸಿಬ್ಬಂದಿಯ ಬಳಿ ಹಣವನ್ನು ಪಡೆದು ಅಭಿಷೇಕ್ ಅವರನ್ನು ಓದಿಸುತ್ತಿದ್ದರು. ಮುಂದುವರೆದು ಮಾತನಾಡಿದ ಅಭಿಷೇಕ್ ಬಚ್ಚನ್ ನನ್ನ ಕುಟುಂಬ ಹಣದ ಕೊರತೆಯನ್ನು ಎದುರಿಸುತ್ತಿದೆ ಎಂದು ತಿಳಿದ ಮೇಲೆ ನಾನು ಕಾಲೇಜು ತೊರೆದು ತಂದೆಯೊಂದಿಗೆ ಇರಲು ಬಯಸಿದೆ. ಇದಕ್ಕಾಗಿ ತಂದೆಯ ಬಳಿಯೇ ನಾನು ನಿಮ್ಮೊಂದಿಗೆ ಇರಲು ಬಯಸುತ್ತೇನೆ. ಮಗನಾಗಿ ನಿಮ್ಮ ಕಷ್ಟದ ದಿನಗಳಲ್ಲಿ ನಾನು ನಿಲ್ಲುತ್ತೇನೆ ಎಂದು ಕಾಲೇಜು ತೊರೆದು ತಂದೆಯ ಪರವಾಗಿ ನಿಂತಿದ್ದೆ ಎಂದು ಹೇಳಿದ್ದಾರೆ.
1995ರಲ್ಲಿ ಅಮಿತಾಬ್ ಬಚ್ಚನ್ ಅವರು ಕಾರ್ಪೋರೇಷನ್ ಲಿಮಿಟೆಡ್ ಅಥವಾ ಎಬಿಸಿಎಲ್ ವ್ಯಾಪಾರ ಉದ್ಯಮವನ್ನು ಆರಂಭಿಸಿದ್ದರು. ಆದರೆ ಉದ್ಯಮದಲ್ಲಿ ನಷ್ಟ ಅನುಭವಿಸಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು. ಇದೇ ವೇಳೆಯಲ್ಲಿ ಅಭಿಷೇಕ್ ಬಚ್ಚನ್ ಕಾಲೇಜು ದಿನಗಳಿದ್ದರು. 1995-1997 ವೇಳೆಗೆ ಅಭಿಷೇಕ್ ಬಚ್ಚನ್ ಅವರು ಕಾಲೇಜು ತೊರೆದು ಭಾರತಕ್ಕೆ ಮರಳಿ ತಂದೆಯೊಂದಿಗೆ ಸೇರಿಕೊಂಡಿದ್ದರು. ಈ ಕುರಿತು ಚಿಟ್ ಚಾಟ್ ಶೋನಲ್ಲಿ ತನ್ನ ಕುಟುಂಬ ಆರ್ಥಿಕ ಮುಗ್ಗಟ್ಟನ್ನು ಎದುರಿಸಿದ ಕುರಿತು ಅಭಿಷೆಕ್ ಬಚ್ಚನ್ ಮಾತನಾಡಿದ್ದಾರೆ. ಅಭಿಷೇಕ್ ಬಚ್ಚನ್ ಅವರು 2000ರಲ್ಲಿ ಜೆಪಿ ದತ್ತಾ ಅವರ ರೆಪ್ಯೂಜಿ ಸಿನಿಮಾ ಮೂಲಕ ಬಾಲಿವುಡ್ ಗೆ ನಟನಾಗಿ ವೃತ್ತಿ ಆರಂಭಿಸಿದ್ದರು. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಅವರಿಗೆ ಕರೀನಾ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
2000ರ ನಂತರ ಬಿಗ್ ಬಿ ಫ್ಯಾಮಿಲಿ ಆರ್ಥಿಕ ಮುಗ್ಗಟ್ಟಿನಿಂದ ಚೇತರಿಸಿಕೊಂಡಿತ್ತು. ಅಮಿತಾಬ್ ಬಚ್ಚನ್ ಕೂಡ ಕೌನ್ ಬನೇಗಾ ಕರೊಡ್ಪತಿ ಕಾರ್ಯಕ್ರಮದ ನಿರೂಪಣೆಯನ್ನು ಆರಂಭಿಸಿದರು. ಜತೆಗೆ ಅಭಿಷೇಕ್ ಬಚ್ಚನ್ ಕೂಡ ತಮ್ಮ ಸಿನಿಮಾ ವೃತ್ತಿಯಲ್ಲಿ ಹೆಚ್ಚು ಪಾತ್ರಗಳನ್ನು ಪಡೆದುಕೊಂಡರು.
ಇದನ್ನೂ ಓದಿ:
RRR Trailer: ದೃಶ್ಯ ವೈಭವಕ್ಕೆ ಸಾಕ್ಷಿಯಾದ ‘ಆರ್ಆರ್ಆರ್’ ಟ್ರೇಲರ್; ಕೌತುಕ ಹೆಚ್ಚಿಸಿದ ರಾಜಮೌಳಿ
ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮೆಹಂದಿ ಕಾರ್ಯಕ್ರಮದ ಫೋಟೋ ಲೀಕ್? ಫ್ಯಾಕ್ಟ್ ಚೆಕ್ನಲ್ಲಿ ಏನಿದೆ?