ನಟಿ ಬಿಪಾಶಾ ಬಸು (Bipasha Basu) ಹಾಗೂ ಪತಿ ಕರಣ್ ಸಿಂಗ್ ಗ್ರೋವರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇಂದು (ನವೆಂಬರ್ 12) ಬಿಪಾಶಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ದಂಪತಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. 2016ರಲ್ಲಿ ಕರಣ್ ಸಿಂಗ್ ಗ್ರೋವರ್ (Karan Singh Grover ) ಜೊತೆ ಬಿಪಾಶಾ ಬಸು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವಿವಾಹ ನಡೆದ ಆರು ವರ್ಷಗಳ ಬಳಿಕ ಈ ದಂಪತಿ ಹೊಸ ಸದಸ್ಯೆಯನ್ನು ಸ್ವಾಗತಿಸಿದ್ದಾರೆ.
2022ರ ಆಗಸ್ಟ್ನಲ್ಲಿ ಬಿಪಾಶಾ ಬಸು ತಾವು ಪ್ರೆಗ್ನೆಂಟ್ ಎಂಬ ಸುದ್ದಿಯನ್ನು ಹಂಚಿಕೊಂಡರು. ಅವರಿಗೆ ಅಭಿಮಾನಿಗಳು ಹಾಗೂ ಸ್ಟಾರ್ಸ್ ಶುಭಾಶಯ ತಿಳಿಸಿದರು. ಅಲ್ಲಿಂದ ಈಚೆಗೆ ಹಲವು ಬಗೆಯಲ್ಲಿ ಅವರು ಬೇಬಿಬಂಪ್ ಫೋಟೋಶೂಟ್ ಮಾಡಿಸುತ್ತಾ ಬಂದಿದ್ದಾರೆ. ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ. ಈಗ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ. ಮಗುವಿನ ಫೋಟೋ ಹಂಚಿಕೊಳ್ಳುವಂತೆ ಫ್ಯಾನ್ಸ್ ಒತ್ತಾಯಿಸುತ್ತಿದ್ದಾರೆ.
ಬಾಲಿವುಡ್ನಲ್ಲಿ ಬಿಪಾಶಾ ಬಸು ಅವರಿಗೆ ಹಲವು ವರ್ಷಗಳ ಅನುಭವ ಇದೆ. ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2001ರಲ್ಲಿ ಬಿಪಾಶಾ ಚಿತ್ರರಂಗಕ್ಕೆ ಕಾಲಿಟ್ಟರು. ಹಲವು ಸೂಪರ್ಸ್ಟಾರ್ಸ್ ಜತೆ ಅವರು ತೆರೆ ಹಂಚಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಅವರು ಬಾಲಿವುಡ್ನಲ್ಲಿ ಮಾದಕ ನಟಿ ಎಂದೇ ಫೇಮಸ್ ಆಗಿದ್ದರು. ಅನೇಕ ಬೋಲ್ಡ್ ಪಾತ್ರಗಳನ್ನು ಮಾಡಿ ಬಿಪಾಶಾ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: Bipasha Basu: ಪ್ರೆಗ್ನೆನ್ಸಿ ಫೋಟೋ ಹಂಚಿಕೊಂಡ ಬಿಪಾಶಾ ಬಸು; ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ
2015ರಲ್ಲಿ ರಿಲೀಸ್ ಆದ ‘ಅಲೋನ್’ ಅವರ ಕೊನೆಯ ಸಿನಿಮಾ. ಈಚೆಗೆ ಬಿಪಾಶಾ ಬಸು ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸಂಸಾರದ ಕಡೆಗೆ ಅವರು ಗಮನ ಹರಿಸಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಕೌಟುಂಬಿಕ ವಿಚಾರದ ಬಗ್ಗೆ ಬಿಪಾಶಾ ಆಗಾಗ ಅಪ್ಡೇಟ್ ನೀಡುತ್ತಲೇ ಇರುತ್ತಾರೆ.