‘ಶಾರ್ಜಾ’ದಲ್ಲಿ ಪ್ರಶಸ್ತಿ ಸ್ವೀಕರಿಸಿದ ಕಿಂಗ್​ ಖಾನ್​ ಶಾರುಖ್

ಶಾರುಖ್​ ಖಾನ್​ (shah rukh khan)ಶಾರ್ಜಾ ಇಂಟರ್ನ್ಯಾಷನಲ್​ ಬುಕ್​ ಫೇರ್(SIBF)-2022ರಲ್ಲಿ ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಐಕಾನ್​ ಆಗಿ ಸಿನಿಮಾ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಳಿಗಾಗಿ ಅವರಿಗೆ ಗ್ಲೋಬಲ್​ ಐಕಾನ್​ ಆಫ್​ ಸಿನಿಮಾ ಮತ್ತು ಕಲ್ಚರಲ್​ ನಿರೂಪಣೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

‘ಶಾರ್ಜಾ'ದಲ್ಲಿ ಪ್ರಶಸ್ತಿ ಸ್ವೀಕರಿಸಿದ ಕಿಂಗ್​ ಖಾನ್​ ಶಾರುಖ್
ಶಾರುಖ್​ ಖಾನ್
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 12, 2022 | 1:46 PM

ನಟ ಶಾರುಖ್​ ಖಾನ್​(shah rukh khan)ಅವರು ಮತ್ತೊಂದು ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಯುಎಇ(UAE)ಯ ಶಾರ್ಜಾದಲ್ಲಿರುವ ಎಕ್ಸ್​ಪೋ ಸೆಂಟರ್​ನಲ್ಲಿ ಶಾರ್ಜಾ ಇಂಟರ್​ನ್ಯಾಷನಲ್​ ಬುಕ್​ ಫೇರ್(SIBF) 2022 ರ 41 ನೇ ಆವೃತ್ತಿಯಲ್ಲಿ ಅವರಿಗೆ ಶುಕ್ರವಾರ(ನವೆಂಬರ್ 11) ಗ್ಲೋಬಲ್​ ಐಕಾನ್​ ಆಫ್​ ಸಿನಿಮಾ ಮತ್ತು ಕಲ್ಚರಲ್​ ನಿರೂಪಣೆ ಪ್ರಶಸ್ತಿಯನ್ನು ನೀಡಲಾಗಿದ್ದು, ಈ ಇವೆಂಟ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಕಾಣಿಸಿಕೊಂಡಿದ್ದರು. ಇದರ ವಿಡಿಯೋಗಳು ಹಾಗೂ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಇನ್ನು ಶಾರುಖ್​ ಅವರು ಕಾರ್ಯಕ್ರಮದಲ್ಲಿ ನಾವು ಎಲ್ಲೇ ವಾಸಿಸುತ್ತಿದ್ದರೂ, ನಾವು ಯಾವ ಬಣ್ಣದಲ್ಲಿದ್ದರೂ, ನಾವು ಯಾವ ಧರ್ಮವನ್ನು ಅನುಸರಿಸುತ್ತಿದ್ದೇವೆ, ಯಾವ ಹಾಡಿಗೆ ಡ್ಯಾನ್ಸ್​ ಮಾಡುತ್ತೇವೆ ಇವೆಲ್ಲ ಮುಖ್ಯವಲ್ಲ, ‘ನಾವೆಲ್ಲರೂ ಪ್ರೀತಿ, ಶಾಂತಿ, ಸಂಸ್ಕೃತಿಯಿಂದ ಬೆಳೆಯಬೇಕು ಅದನ್ನು ರೂಢಿಸಿಕೊಳ್ಳಬೇಕು’ ಎಂದಿದ್ದಾರೆ. ವೇದಿಕೆಯಲ್ಲಿ ಅವರು ತಮ್ಮ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾದಲ್ಲಿನ ಸೀನ್​ನಂತೆ ಕೈ ತೋಳುಗಳನ್ನ ಚಾಚುವ ಮೂಲಕ ಮತ್ತೊಮ್ಮೆ ಅದನ್ನು ಮರುಸೃಷ್ಟಿಸಿದರು.

ಇದನ್ನೂ ಓದಿ:Pathaan Teaser: ಧೂಳೆಬ್ಬಿಸುತ್ತಿದೆ ‘ಪಠಾಣ್​’ ಟೀಸರ್​; ಶಾರುಖ್​ ಖಾನ್​ ಅವತಾರ ಕಂಡು ಫ್ಯಾನ್ಸ್​ ಫಿದಾ

ಈ ಸಮಾರಂಭದಲ್ಲಿ ಶಾರುಖ್​ ಕಪ್ಪು ಅವತಾರದಲ್ಲಿ ಕಾಣಿಸಿಕೊಂಡಿದ್ದರು, ತಮ್ಮ ‘ಓಂ ಶಾಂತಿ ಓಂ’ ಸಿನಿಮಾದ ಜೊತೆ ಬಾಜಿಗರ್​ನ ಡೈಲಾಗ್​ಗಳಿಂದ ಅಭಿಮಾನಿಗಳನ್ನ ರಂಜಿಸಿದರು. ಇನ್ನು ಅವರ ಅಭಿಮಾನಿಯೊಬ್ಬರು ಈ ಇವೆಂಟ್​ನ ಎಲ್ಲಾ ದೃಶ್ಯಗಳಿಗೆ ‘ಅವರು ಎಲ್ಲಾ ಪ್ರಶಸ್ತಿಗೆ ಅರ್ಹರು’ ಎಂದು ಟ್ವಿಟರ್​ನಲ್ಲಿ ಬರೆದಿದ್ದಾರೆ. ಮತ್ತೊಬ್ಬರು ‘ಜಸ್ಟ್ ಕಿಂಗ್​ ಬೀಯಿಂಗ್​ ಕಿಂಗ್​’ ಎಂದು ಹೇಳಿದ್ದಾರೆ.

ಇನ್ನು ಶಾರುಖ್​ ಖಾನ್​ ಅವರು ನಾಲ್ಕು ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದರು, ಈಗ ‘ಪಠಾಣ್’ ಸಿನಿಮಾದ ಮೂಲಕ ಕಂಬ್ಯಾಕ್​ ಮಾಡಲಿದ್ದಾರೆ. ಈ ಚಿತ್ರದ ಟೀಸರ್​ನಲ್ಲಿ ಶಾರುಖ್ ಸಿಕ್ಸ್​ಪ್ಯಾಕ್​ನೊಂದಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಈ ಸಿನಿಮಾವು ಜನವರಿ 25 ರಂದು ರಿಲೀಸ್​ ಆಗಲಿದ್ದು ದೊಡ್ಡ ಮಟ್ಟದ ಸಕ್ಸಸ್ ಕಾಣುವ ನಿರೀಕ್ಷೆಯಲ್ಲಿದೆ ಚಿತ್ರತಂಡ.

ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:44 pm, Sat, 12 November 22