‘ಮಾರಕೆಶ್​’ ಫಿಲ್ಮ್​ ಫೆಸ್ಟಿವಲ್​ನಲ್ಲಿ ‘ಎಟೊಯಿಲ್​ ಡಿ ಒರ್’ ಪ್ರಶಸ್ತಿ ಪಡೆದ ರಣವೀರ್​ ಸಿಂಗ್​

ಮೊರಾಕೊದಲ್ಲಿ ಶನಿವಾರ (ನವೆಂಬರ್​ 12) ನಡೆದ ‘ಮಾರಕೆಶ್​​ ಅಂತರರಾಷ್ಟೀಯ ಫಿಲ್ಮ್​ ಫೆಸ್ಟಿವಲ್’​ನಲ್ಲಿ ರಣವೀರ್​ ಸಿಂಗ್​ ‘ಎಟೊಯಿಲ್​ ಡಿಒರ್’​ ಪ್ರಶಸ್ತಿ ಪಡೆದಿದ್ದು, ‘ಮಲ್ಹರಿ'ಯಲ್ಲಿ ಪವರ್​ ಫುಲ್​ ಡ್ಯಾನ್ಸ್​ ಮಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

‘ಮಾರಕೆಶ್​' ಫಿಲ್ಮ್​ ಫೆಸ್ಟಿವಲ್​ನಲ್ಲಿ ‘ಎಟೊಯಿಲ್​ ಡಿ ಒರ್’ ಪ್ರಶಸ್ತಿ ಪಡೆದ ರಣವೀರ್​ ಸಿಂಗ್​
ರಣವೀರ್​ ಸಿಂಗ್​
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 12, 2022 | 6:25 PM

ರಣವೀರ್​ ಸಿಂಗ್​ ಅವರು ಫುಲ್​ ಎನರ್ಜಿಟಿಕ್.​ ಹೋದಲ್ಲೆಲ್ಲಾ ರಣವೀರ್​ ತಮ್ಮ ಕಾಮಿಡಿಗಳು ಮತ್ತು ಡ್ಯಾನ್ಸ್​ ಮೂಲಕ ನೋಡುಗರನ್ನು ಮೋಡಿ ಮಾಡುತ್ತಾರೆ. ಮೊರಾಕೊದಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಮಾರಕೆಶ್​ ಇಂಟರ್ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್ (marrakech international film festival)​ನಲ್ಲಿ ರಣವೀರ್​ ಸಿಂಗ್​ ಅವರು ಎಟೊಯಿಲ್​ ಡಿ ಒರ್​ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಹಿಂದೆ ಈ ಅವಾರ್ಡ್​ನ್ನು ಅಮಿತಾಭ್​​ ಬಚ್ಚನ್​, ಶಾರುಖ್​ ಖಾನ್​, ಅಮೀರ್​ ಖಾನ್​ ಅವರಿಗೆ ನೀಡಲಾಗಿತ್ತು.

ಅವಾರ್ಡ್​ ಪಡೆದುಕೊಂಡ ರಣವೀರ್​ ಸಿಂಗ್​ ತಮ್ಮ ಫೈರಿಂಗ್​ ಡ್ಯಾನ್ಸ್​ ಮೂಲಕ ನೋಡುಗರನ್ನ ಮಂತ್ರ ಮುಗ್ದರನ್ನಾಗಿಸಿದ್ದಾರೆ. ‘ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸುತ್ತಿದ್ದೀರಿ. ಇದರ ಬಗ್ಗೆ ಏನು ಹೇಳುತ್ತಿರಿ’ ಎಂಬ ಪ್ರಶ್ನೆಗೆ ಉತ್ತರಿಸಿದ ರಣವೀರ್​ ಸಿಂಗ್​ ‘ಇದು ಭಾರತೀಯ ಚಿತ್ರರಂಗದ ಶಕ್ತಿಗೆ ಸಾಕ್ಷಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿದ್ದು, ಭಾರತೀಯ ಚಿತ್ರರಂಗದ ಭಾಗವಾಗಲು ಅವಕಾಶ ಸಿಕ್ಕಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ:Viral Video : ರಣವೀರ್ ಸಿಂಗ್ ಅಭಿನಯದ​ ‘ರಾಮ್​ಜೀ ಕೀ ಚಾಲ್​’ ಹಾಡಿಗೆ ದಕ್ಷಿಣ ಕೊರಿಯಾದ ಹೈಕಳ ಹೆಜ್ಜೆ

ರಣವೀರ್​ ಸಿಂಗ್​ ಹೊರತಾಗಿ ಸ್ಕಾಟಿಷ್​ನ ನಟಿ ಟಿಲ್ಡಾ ಸ್ವಿಂಟನ್, ಅಮೆರಿಕದ ಖ್ಯಾತ ಚಿತ್ರ ನಿರ್ಮಾಪಕ ಜೇಮ್ಸ್​ ಗ್ರೇ ಮತ್ತು ಮೊರೊಕನ್​ ಸಿನಿಮಾ ಪ್ರವರ್ತಕಿ ಹಾಗೂ ನಿರ್ದೇಶಕಿ ಫರಿದಾ ಬೆನ್ಲಿಯಾಜಿದ್​ ಈ ಗೌರವವನ್ನ ಪಡೆದಿದ್ದಾರೆ ಎಂದು ISNS ವರದಿ ಮಾಡಿದೆ.

ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ