ಸೀಕ್ರೆಟ್​ ಆಗಿ ಹಸೆಮಣೆ ಏರಿದ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ಗೆ ಬಾಲಿವುಡ್​ ಸೆಲೆಬ್ರಿಟಿಗಳು ವಿಶ್​ ಮಾಡಿದ್ದು ಹೇಗೆ?

| Updated By: ಮದನ್​ ಕುಮಾರ್​

Updated on: Dec 10, 2021 | 8:22 AM

Katrina Kaif Vicky Kaushal Wedding: ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಫೋಟೋಗಳನ್ನು ಕತ್ರಿನಾ ಕೈಫ್​ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಕೆಲವೇ ಗಂಟೆಗಳು ಕಳೆಯುವುದರೊಳಗೆ 77 ಲಕ್ಷಕ್ಕೂ ಅಧಿಕ ಮಂದಿ ಅವುಗಳನ್ನು ಲೈಕ್​ ಮಾಡಿದ್ದಾರೆ.

ಸೀಕ್ರೆಟ್​ ಆಗಿ ಹಸೆಮಣೆ ಏರಿದ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ಗೆ ಬಾಲಿವುಡ್​ ಸೆಲೆಬ್ರಿಟಿಗಳು ವಿಶ್​ ಮಾಡಿದ್ದು ಹೇಗೆ?
ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​
Follow us on

ಭಾರಿ ಗುಟ್ಟಾಗಿ ಕತ್ರಿನಾ ಕೈಫ್​ (Katrina Kaif ) ಮತ್ತು ವಿಕ್ಕಿ ಕೌಶಲ್​ (Vicky Kaushal) ಮದುವೆ ನಡೆದಿದೆ. ಕೆಲವೇ ಕೆಲವು ಮಂದಿಗೆ ಮಾತ್ರ ಈ ವಿವಾಹಕ್ಕೆ ಆಹ್ವಾನ ನೀಡಲಾಗಿತ್ತು. ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರು ತಾವು ಮದುವೆ ಆಗುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಒಂದೇ ಒಂದು ಹೇಳಿಕೆಯನ್ನೂ ನೀಡದೇ ಸಿಕ್ಕಾಪಟ್ಟೆ ಸೀಕ್ರೆಟ್​ ಮಾಡಿದ್ದರು. ಬಾಲಿವುಡ್​ನ ಇತರೆ ಸೆಲೆಬ್ರಿಟಿಗಳು ಕೂಡ ಇವರ ವಿವಾಹದ (Katrina Kaif Vicky Kaushal Marriage) ಬಗ್ಗೆ ಕಿಂಚಿತ್ತೂ ಮಾಹಿತಿ ಹಂಚಿಕೊಂಡಿರಲಿಲ್ಲ. ಗುರುವಾರ (ಡಿ.9) ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಈ ಮದುವೆ ನಡೆದಿದೆ. ಬಳಿಕ ಕತ್ರಿನಾ ಮತ್ತು ವಿಕ್ಕಿ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಹಲವಾರು ಸೆಲೆಬ್ರಿಟಿಗಳು ಮನಸಾರೆ ವಿಶ್​ ಮಾಡಿದ್ದಾರೆ.

ಕತ್ರಿನಾ ಕೈಫ್​ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡು ಕೆಲವೇ ಗಂಟೆಗಳು ಕಳೆಯುವುದರೊಳಗೆ 77 ಲಕ್ಷಕ್ಕೂ ಅಧಿಕ ಮಂದಿ ಅವುಗಳನ್ನು ಲೈಕ್​ ಮಾಡಿದ್ದಾರೆ. ವಿಕ್ಕಿ ಕೌಶಲ್​ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿನ ಫೋಟೋಗಳಿಗೆ 53 ಲಕ್ಷಕ್ಕೂ ಹೆಚ್ಚು ಜನರು ಲೈಕ್​ ಬಟನ್​ ಒತ್ತಿದ್ದಾರೆ.

ಬಾಲಿವುಡ್​ ಸೆಲೆಬ್ರಿಟಿಗಳಾದ ಟ್ವಿಂಕಲ್​ ಖನ್ನಾ, ಪರಿಣೀತಿ ಚೋಪ್ರಾ, ಹೃತಿಕ್​ ರೋಷನ್​, ಪ್ರಿಯಾಂಕಾ ಚೋಪ್ರಾ, ಸೋನಮ್​ ಕಪೂರ್, ನಿಕ್​ ಜೋನಸ್​, ಬಿಪಾಶಾ ಬಸು, ಇಶಾನ್​ ಕಟ್ಟರ್​, ಕರೀನಾ ಕಪೂರ್​ ಖಾನ್​, ಜಾನ್ವಿ ಕಪೂರ್​, ಆಲಿಯಾ ಭಟ್​, ದೀಪಿಕಾ ಪಡುಕೋಣೆ, ಗಾಯಕಿ ಪಲಕ್​ ಮುಚ್ಚಲ್​ ಸೇರಿದಂತೆ ಅನೇಕ ತಾರೆಯರು ಈ ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

‘ಜೀವನ ಪರ್ಯಂತ ನಿಮ್ಮಿಬ್ಬರ ನಡುವೆ ನಗು, ನಿಷ್ಠೆ, ಪ್ರೀತಿ, ಗೌರವ, ಸಹಬಾಳ್ವೆ ಇರಲಿ’ ಎಂದು ದೀಪಿಕಾ ಪಡುಕೋಣೆ ವಿಶ್​ ಮಾಡಿದ್ದಾರೆ. ‘ಓಹ್​ ಮೈ ಗಾಡ್​.. ನೀವಿಬ್ಬರು ಎಷ್ಟೊಂದು ಸುಂದರವಾಗಿ ಕಾಣುತ್ತಿದ್ದೀರಿ’ ಎಂದು ಆಲಿಯಾ ಭಟ್​ ಕಮೆಂಟ್​ ಮಾಡಿದ್ದಾರೆ. ಹತ್ತಾರು ಹಾರ್ಟ್​ ಎಮೋಜಿಗಳನ್ನು ಕಮೆಂಟ್​ ಬಾಕ್ಸ್​ನಲ್ಲಿ ಹಾಕುವ ಮೂಲಕ ಜಾನ್ವಿ ಕಪೂರ್​ ಪ್ರೀತಿ ತೋರಿಸಿದ್ದಾರೆ.

‘ನಿಮ್ಮಿಬ್ಬರನ್ನು ನೋಡಿ ತುಂಬ ಖುಷಿ ಆಗುತ್ತಿದೆ. ನನ್ನ ಸ್ನೇಹಿತೆಯ ಮದುವೆ. ಇಬ್ಬರಿಗೂ ಅಭಿನಂದನೆಗಳು. ನಿಮ್ಮದು ಪರ್ಫೆಕ್ಟ್​ ಜೋಡಿ’ ಎಂದು ಪ್ರಿಯಾಂಕಾ ಚೋಪ್ರಾ ಶುಭ ಕೋರಿದ್ದಾರೆ.

ಇದನ್ನೂ ಓದಿ:

Katrina Kaif Marriage Photos: ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆ ಫೋಟೋ ಆಲ್ಬಂ; ಅದ್ದೂರಿಯಾಗಿ ನಡೆಯಿತು ಸೆಲೆಬ್ರಿಟಿ ವಿವಾಹ

ಕತ್ರಿನಾ ಕೈಫ್​ಗಿದ್ದಾರೆ ಆರು ಜನ ಸಹೋದರಿಯರು, ಓರ್ವ ಸಹೋದರ: ಇಲ್ಲಿದೆ ನೋಡಿ ಕತ್ರಿನಾ ಒಡಹುಟ್ಟಿದವರ ಪರಿಚಯ