ಬಾಲಿವುಡ್ನಲ್ಲಿ ವಿಶಿಷ್ಟ ಪಾತ್ರಗಳ ಮುಖಾಂತರ ಗುರುತಿಸಿಕೊಂಡಿರುವ ನಟ ರಾಜ್ಕುಮಾರ್ ರಾವ್ ಮತ್ತು ನಟಿ ಪತ್ರಲೇಖಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತೆರೆಯ ಮೇಲೆ ದಂಪತಿಯಾಗಿ ಬಣ್ಣಹಚ್ಚಿದ್ದ ಈ ಜೋಡಿ ಈಗ ರಿಯಲ್ ಲೈಫ್ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಶನಿವಾರ ಆಪ್ತರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಈ ತಾರಾ ಜೋಡಿ ಮದುವೆಗೆ ಪರಸ್ಪರ ಒಪ್ಪಿಗೆಯನ್ನು ಕೇಳಿ, ರಿಂಗ್ ವಿನಿಮಯ ಮಾಡಿಕೊಂಡಿದ್ದಾರೆ. ಚಂಡೀಗಡದ ಸುಖ್ವಿಲ್ಸ್ ಸ್ಪಾ ರೆಸಾರ್ಟ್ನಲ್ಲಿ ನಡೆದ ಕಾರ್ಯಕ್ರಮದ ವಿಡಿಯೋ ಹಾಗೂ ಚಿತ್ರಗಳು ಪ್ರಸ್ತುತ ಆನ್ಲೈನ್ನಲ್ಲಿ ವೈರಲ್ ಆಗಿವೆ. ರಾಜ್ಕುಮಾರ್ ರಾವ್ ಗೆಳತಿಯ ಮುಂದೆ ಮಂಡಿಯೂರಿ ಕುಳಿತು, ‘ಪತ್ರಲೇಖಾ, ನನ್ನನ್ನು ಮದುವೆಯಾಗುತ್ತೀರಾ?’ ಎಂದು ಕೇಳುವಾಗ, ಪತ್ರಲೇಖಾ ಕೂಡಾ ಮಂಡಿಯೂರಿ ಕುಳಿತು, ‘ರಾಜ್ಕುಮಾರ್ ರಾವ್, ನನ್ನನ್ನು ಮದುವೆಯಾಗುತ್ತೀರಾ?’ ಎಂದು ಕೇಳಿದ್ದಾರೆ. ಪರಸ್ಪರ ಸಂತಸದಿಂದ ಇಬ್ಬರೂ ರಿಂಗ್ ಬದಲಾಯಿಸಿಕೊಂಡಿದ್ದಾರೆ.
ರಾಜ್ಕುಮಾರ್ ರಾವ್ ಹಾಗೂ ಪತ್ರಲೇಖಾ ಬಿಳಿ ಬಣ್ಣದ ಮ್ಯಾಚಿಂಗ್ ದಿರಿಸನ್ನು ಧರಿಸಿದ್ದು, ವಿಶೇಷವಾಗಿತ್ತು. ಅವರ ಎಂಗೇಜ್ಮೆಂಟ್ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ರಿಂಗ್ ಬದಲಾಯಿಸಿಕೊಂಡ ನಂತರ ಇಬ್ಬರೂ ತಮ್ಮ ಪ್ರಿಯವಾದ ಹಾಡಿಗೆ ನೃತ್ಯ ಮಾಡಿದ್ದಾರೆ.
ರಾಜ್ಕುಮಾರ್ ರಾವ್ ಹಾಗೂ ಪತ್ರಲೇಖಾ ಎಂಗೇಜ್ಮೆಂಟ್ ಸಂದರ್ಭದ ವಿಡಿಯೋ ಇಲ್ಲಿದೆ:
ಸಾಮಾಜಿಕ ಜಾಲತಾಣಗಳಲ್ಲಿ ಎಂಗೇಜ್ಮೆಂಟ್ ಆದ ಹೋಟೆಲ್ ಹಾಗೂ ಅತಿಥಿಗಳ ಚಿತ್ರಗಳನ್ನು ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ನಟ ಸಾಕಿಬ್ ಸಲೀಮ್ ಹಾಗೂ ನಿರ್ದೇಶಕಿ ಫರಾ ಖಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಚಿತ್ರಗಳು ಇಲ್ಲಿವೆ:
‘ಸಿಟಿಲೈಟ್ಸ್’ ಚಿತ್ರದಲ್ಲಿ ರಾಜ್ಕುಮಾರ್ ರಾವ್ ಹಾಗೂ ಪತ್ರಲೇಖಾ ತೆರೆಯ ಮೇಲೆ ದಂಪತಿಯಾಗಿ ಕಾಣಿಸಿಕೊಂಡಿದ್ದರು. ನಂತರ ಇಬ್ಬರೂ ‘ಬೋಸ್: ಡೆಡ್/ ಅಲೈವ್’ ವೆಬ್ ಸೀರೀಸ್ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಕಪಿಲ್ ಶರ್ಮಾ ಶೋನಲ್ಲಿ ಮಾತನಾಡುತ್ತಾ ರಾಜ್ಕುಮಾರ್ ರಾವ್, ಪತ್ರಲೇಖಾರ ಮೇಲೆ ಪ್ರೀತಿಯಾಗಿದ್ದನ್ನು ಹಂಚಿಕೊಂಡಿದ್ದರು. ‘ಅವರನ್ನು ಮೊದಲ ಬಾರಿ ನೋಡಿದಾಗಲೇ ಎಷ್ಟು ಒಳ್ಳೆಯ ಹುಡುಗಿ. ಅವಳನ್ನು ಮದುವೆಯಾಗಬೇಕು’ ಎಂದುಕೊಂಡಿದ್ದರಂತೆ. ಕಳೆದ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ರಾಜ್ಕುಮಾರ್ ರಾವ್ ಪತ್ರಲೇಖಾರಿಗೆ ಬರೆದ ಪ್ರೇಮ ಪತ್ರ ವೈರಲ್ ಆಗಿತ್ತು. ಈರ್ವರೂ ಕೆಲಕಾಲದಿಂದ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಎಂಗೇಜ್ಮೆಂಟ್ ಮೂಲಕ ಸಂಬಂಧವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ಇದನ್ನೂ ಓದಿ:
ರಶ್ಮಿಕಾ ಕೈ ಚರ್ಮದ ಬಣ್ಣ ಚೇಂಜ್ ಆಗಿದ್ದೇಕೆ? ಪರದೆ ಹಿಂದಿನ ಕಹಾನಿ ಬಿಚ್ಚಿಟ್ಟ ಒಂದು ಫೋಟೋ
Salman Khan: ವಿಕ್ಕಿ- ಕತ್ರಿನಾ ಕಲ್ಯಾಣ; ಅತಿಥಿಗಳ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಸಲ್ಮಾನ್ ಭಾಗಿಯಾಗಲಿದ್ದಾರಂತೆ!