ಕೊರೊನಾದಿಂದ ಗುಣಮುಖರಾಗುತ್ತಿದ್ದಂತೆಯೇ ಮಾಲ್ಡೀವ್ಸ್ಗೆ ಹಾರಿದ ರಣಬೀರ್ ಮತ್ತು ಆಲಿಯಾ; ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೋಲ್
ದೇಶ ವಿದೇಶಗಳಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವಾಗಲೇ ರಜಾದಿನಗಳನ್ನು ಕಳೆಯಲೆಂದು ಆಲಿಯಾ ಮತ್ತು ರಣಬೀರ್ ಪ್ರವಾಸ ಕೈಗೊಳ್ಳುವುದು ಬೇಕಿತ್ತೇ? ಎಂಬುದು ಅಭಿಮಾನಿಗಳ ಆಕ್ರೋಶ.
ಇದೇ ತಿಂಗಳ ಆರಂಭದಲ್ಲಿ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ಗೆ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಇನ್ನೇನು ಕೊರೊನಾದಿಂದ ಗುಣಮುಖರಾಗಿತ್ತಿದ್ದಂತೆಯೇ ಬಾಲಿವುಡ್ನಲ್ಲಿ ಪ್ರೇಮ ಜೋಡಿಯೆಂದೇ ಮನೆ ಮಾತಾಗಿರುವ ಆಲಿಯಾ ಮತ್ತು ರಣಬೀರ್ ಇಬ್ಬರೂ ಮಾಲ್ಡೀವ್ಸ್ಗೆ ಒಟ್ಟಾಗಿ ಪ್ರಯಾಣ ಬೆಳೆಸಿದ್ದಾರೆ. ಆದರೆ, ಕೊರೊನಾ ಆತಂಕದ ನಡುವೆಯೂ ಸುತ್ತಾಡಲು ಹೋಗಿರುವ ಈ ಜೋಡಿಗೆ ಜನರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಸೆರೆಯಾದ ಇವರ ಫೋಟೋ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಕೊರೊನಾ ಪಾಸಿಟಿವ್ ವರದಿಯಿಂದ ರಣಬೀರ್ ಕಪೂರ್ ಮತ್ತು ಆಲಿಯಾ ಸುಧಾರಿಸಿಕೊಂಡಿದ್ದಾರೆ. ಆಗಲೇ ಮಾಲ್ಡೀವ್ಸ್ಗೆ ಪ್ರಯಾಣ ಬೆಳೆಸುತ್ತಿರುವ ಫೋಟೋ ಸಿಕ್ಕಿದ್ದು ಅವರ ಸಾಮಾಜಿಕ ಹೊಣೆಗಾರಿಕೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಮುಂಬೈನಲ್ಲಿ ವಿಪರೀತ ಕೊರೊನಾ ಹಾವಳಿ ಇದ್ದ ಕಾರಣ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ 15 ದಿಗಳ ಕಾಲ ಸಿನಿಮಾ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಆಲಿಯಾ ಮತ್ತು ರಣಬೀರ್ ಇಬ್ಬರೂ ರಜಾ ದಿನಗಳನ್ನು ಕಳೆಯಲು ಮಾಲ್ಡೀವ್ಸ್ಗೆ ಪ್ರಯಾಣ ಬೆಳೆಸಿದ್ದಾರೆ.
View this post on Instagram
ರಣಬೀರ್ ಕಪೂರ್ಗೆ ಮಾರ್ಚ್ ಮೊದಲನೇ ವಾರದಲ್ಲಿ ಕೊರೊನಾ ಸೋಂಕು ತಗುಲಿತ್ತು. ಮನೆಯಲ್ಲಿಯೇ ಕ್ವಾರಂಟೈನ್ ಆಗಿ ರಣಬೀರ್ ಗುಣಮುಖರಾಗಿದ್ದರು. ತದ ನಂತರ ಏಪ್ರಿಲ್ ತಿಂಗಳ ಎರಡನೇ ದಿನ ನಟಿ ಆಲಿಯಾಗೂ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಅವರೂ ಕೂಡಾ ಕ್ವಾರಂಟೈನ್ ಆಗಿ ಇತ್ತೀಚೆಗಷ್ಟೇ ಗುಣಮುಖರಾಗಿದ್ದರು. ಈಗ ಇಬ್ಬರಿಗೂ ನೆಗೆಟಿವ್ ವರದಿ ಬಂದ ನಾಲ್ಕೈದು ದಿನದೊಳಗೆ ವಿದೇಶ ಪ್ರವಾಸ ಬೆಳೆಸಿದ್ದಾರೆ. ಈ ಪೋಸ್ಟ್ ಕಂಡ ನೆಟ್ಟಿಗರು ಆಕ್ರೋಶವನ್ನೂ ಹೊರಹಾಕುತ್ತಿದ್ದಾರೆ.
ದೇಶ ವಿದೇಶಗಳಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವಾಗಲೇ ರಜಾದಿನಗಳನ್ನು ಕಳೆಯಲೆಂದು ಆಲಿಯಾ ಮತ್ತು ರಣಬೀರ್ ಪ್ರವಾಸ ಕೈಗೊಳ್ಳುವುದು ಬೇಕಿತ್ತೇ? ಎಂಬೆಲ್ಲಾ ಪ್ರಶ್ನೆಗಳು ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ಇಬ್ಬರೂ ವೈಟ್ ಆ್ಯಂಡ್ ವೈಟ್ ಉಡುಪು ತೊಟ್ಟು ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದು ಸಾಗುತ್ತಿರುವ ಫೋಟೋ ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನಟಿ ಆಲಿಯಾ ಭಟ್‌ಗೆ ಕೋವಿಡ್ ಪಾಸಿಟಿವ್
Published On - 12:27 pm, Tue, 20 April 21