ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಬಾಕ್ಸ್ ಆಫೀಸ್‌ನಲ್ಲಿ ಇತ್ತೀಚೆಗೆ ಗೆಲುವು ಕಂಡಿಲ್ಲ. ಅವರಿಗೆ ದೊಡ್ಡ ಯಶಸ್ಸಿನ ಅಗತ್ಯವಿದೆ. ಅವರ ಬಳಿ ಈಗ 10ಕ್ಕೂ ಹೆಚ್ಚು ಸಿನಿಮಾಗಳಿವೆ. ವರ್ಷಕ್ಕೆ ನಾಲ್ಕೈದು ಸಿನಿಮಾಗಳು ರಿಲೀಸ್ ಆಗುತ್ತವೆ. ನಟ ‘ಸರ್ಫಿರಾ’ ಚಿತ್ರದೊಂದಿಗೆ ಪ್ರೇಕ್ಷಕರ ಎದುರು ಬರಲು ಅವರು ರೆಡಿ ಆಗಿದ್ದಾರೆ. ಈ ಚಿತ್ರದ ಬಗೆಗಿನ ವಿವರಗಳು ನಿರಂತರವಾಗಿ ಬರುತ್ತಲೇ ಇವೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಯಾವಾಗ ಬರಲಿದೆ ಎಂಬ ಅಧಿಕೃತ ಘೋಷಣೆ ಕೂಡ ಹೊರಬಿದ್ದಿದೆ. ಈ ವೇಳೆ ರಿಲೀಸ್ ದಿನಾಂಕದ ಬಗ್ಗೆಯೂ ಮಾಹಿತಿ ನೀಡಲಾಗಿದೆ.
‘ಸರ್ಫಿರಾ’ ಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಜೀವನದಲ್ಲಿ ದೊಡ್ಡ ಕನಸು ಕಾಣುವ ವ್ಯಕ್ತಿಯ ಕಥೆ’ ಎಂದು ಅಕ್ಷಯ್ ಬರೆದುಕೊಂಡಿದ್ದಾರೆ. ‘ನನಗೆ ಈ ರೀತಿಯ ಕಥೆ, ಚಿತ್ರ ಮತ್ತು ಪಾತ್ರವನ್ನು ಮಾಡುವ ಅವಕಾಶ ಸಿಗೋದು ಜೀವನದಲ್ಲಿ ಒಮ್ಮೆ ಮಾತ್ರ. ಜೂನ್ 18 ರಂದು ಸರ್ಫಿರಾ ಚಿತ್ರದ ಟ್ರೈಲರ್ ಬರಲಿದೆ. ನೀವು ಈ ಚಿತ್ರವನ್ನು ಜುಲೈ 12 ರಂದು ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದು’ ಎಂದು ಬರೆಯಲಾಗಿದೆ.
ಅಕ್ಷಯ್ ಕುಮಾರ್ ಅವರ ‘ಬಡೇ ಮಿಯಾ ಚೋಟೆ ಮಿಯಾ’ ಚಿತ್ರವು ಅಜಯ್ ದೇವಗನ್ ಅವರ ‘ಮೈದಾನ್’ ಚಿತ್ರದ ಎದುರು ರಿಲೀಸ್ ಆಗಿತ್ತು. ಆದರೆ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯನ್ನು ಮಾಡಲಿಲ್ಲ. ಎರಡೂ ಸಿನಿಮಾಗಳು ಸೋತಿವೆ. ಈಗ ಅಕ್ಷಯ್ ಕುಮಾರ್ ನೇರವಾಗಿ ಸೌತ್ ಸ್ಟಾರ್ ಕಮಲ್ ಹಾಸನ್ ಅವರನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ:ಒಂದೇ ತಿಂಗಳಲ್ಲಿ ಕಮಲ್ ಹಾಸನ್ ನಟನೆಯ ಎರಡು ಬಿಗ್ ಬಜೆಟ್ ಸಿನಿಮಾ ರಿಲೀಸ್
ಕಮಲ್ ಹಾಸನ್ ಅವರ ‘ಇಂಡಿಯನ್’ ಸಿನಿಮಾ ಬ್ಲಾಕ್ಬಸ್ಟರ್ ಎನಿಸಿಕೊಂಡಿತ್ತು. ಈಗ ಅದರ ಸೀಕ್ವೆಲ್ ಬರುತ್ತಿದೆ. ಜುಲೈ 12ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಚಿತ್ರದ ಬಜೆಟ್ 250 ಕೋಟಿ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಎದುರಿಸುವುದು ಯಾರಿಗೂ ಸುಲಭವಲ್ಲ. ಆದರೆ ಈಗ ಅಕ್ಷಯ್ ಕುಮಾರ್ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅವರ ನಟನೆಯ ‘ಸರ್ಫಿರಾ’ ಚಿತ್ರ ‘ಇಂಡಿಯನ್ 2’ ಎದುರು ರಿಲೀಸ್ ಆಗುತ್ತಿದೆ. ಸೌತ್ ಸೂಪರ್ ಸ್ಟಾರ್ ಸೂರ್ಯ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.