ದೀಪಾವಳಿಗೆ ಬಾಲಿವುಡ್ ಹಾಗೂ ದಕ್ಷಿಣ ಚಿತ್ರಗಳ ಮಧ್ಯೆ ಏರ್ಪಡುತ್ತಿದೆ ದೊಡ್ಡ ಕ್ಲ್ಯಾಶ್
ಕಾರ್ತಿಕ್ ಆರ್ಯನ್ ಈಗಾಗಲೇ ತಮ್ಮ ‘ಭೂಲ್ ಭುಲೈಯಾ 3' ಅನ್ನು ದೀಪಾವಳಿಯಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ ನಡೆಯುತ್ತಿದೆ. ‘ಸಿಂಗಮ್ ಅಗೇನ್' ನಿರ್ಮಾಪಕರು ಕೂಡ ಈ ದಿನಾಂಕದ ಮೇಲೆ ಕಣ್ಣಿಟ್ಟಿದ್ದಾರೆ.
ಈ ವರ್ಷ ದಕ್ಷಿಣದ ಹಲವು ದೊಡ್ಡ ಚಿತ್ರಗಳು ಥಿಯೇಟರ್‌ಗೆ ಬರಲಿವೆ. ಬಾಲಿವುಡ್ (Bollywood) ಇಂಡಸ್ಟ್ರಿ ಕೂಡ ಹಿಂದೆ ಬಿದ್ದಿಲ್ಲ. ದೊಡ್ಡ ಸೂಪರ್‌ಸ್ಟಾರ್‌ಗಳು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಕಾಯುತ್ತಿದ್ದಾರೆ. ಹಲವು ಚಿತ್ರಗಳು ತಯಾರಾಗುತ್ತಿರುವುದರಿಂದ ಸೋಲೋ ರಿಲೀಸ್ ತುಂಬಾ ಕಷ್ಟ. ಸಿನಿಮಾ ಕೆಲಸ ಮುಗಿಯುವ ಮುನ್ನವೇ ಸಿನಿಮಾ ರಿಲೀಸ್ ದಿನಾಂಕ ಅನೌನ್ಸ್ ಮಾಡಲಾಗುತ್ತದೆ. ಕನ್ನಡದಲ್ಲಿ ಈ ವಾರ ನಾಲ್ಕು ಸಿನಿಮಾಗಳು ತೆರೆಗೆ ಬಂದಿವೆ. ಅದೇ ರೀತಿ ವಿಶೇಷ ದಿನದಂದು ದೊಡ್ಡ ದೊಡ್ಡ ಸಿನಿಮಾಗಳ ಮಧ್ಯೆ ಕ್ಲ್ಯಾಶ್ ಏರ್ಪಡುತ್ತದೆ. ಆಗಸ್ಟ್ 15ರಂದು ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದೇ ರೀತಿ ಈಗ ದೀಪಾವಳಿಯಲ್ಲೂ ಅಂತಹದ್ದೇ ಒಂದು ದೃಶ್ಯ ಕಾಣಿಸಲಿದೆ.
ಕಾರ್ತಿಕ್ ಆರ್ಯನ್ ಈಗಾಗಲೇ ತಮ್ಮ ‘ಭೂಲ್ ಭುಲೈಯಾ 3′ ಅನ್ನು ದೀಪಾವಳಿಯಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ ನಡೆಯುತ್ತಿದೆ. ‘ಸಿಂಗಮ್ ಅಗೇನ್’ ನಿರ್ಮಾಪಕರು ಕೂಡ ಈ ದಿನಾಂಕದ ಮೇಲೆ ಕಣ್ಣಿಟ್ಟಿದ್ದಾರೆ. ಅವರು ಈಗಾಗಲೇ ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಲ್ಲ ಎಂದಿದ್ದಾರೆ. ದೀಪಾವಳಿಯಂದು ಸಿನಿಮಾ ರಿಲೀಸ್ ಮಾಡಲು ಭರ್ಜರಿ ಪ್ಲಾನಿಂಗ್ ಮಾಡಲಾಗುತ್ತಿದೆ. ಇವುಗಳ ಜೊತೆ ದಕ್ಷಿಣದ ಸಿನಿಮಾಗಳು ಬಿಡುಗಡೆ ಆಗಲಿವೆ.
ಪ್ರತಿ ವರ್ಷ ವಿಶೇಷ ದಿನದಂದು ಹಲವಾರು ಚಿತ್ರಗಳ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಒಂದು ಚಿತ್ರಕ್ಕೆ ಅದರಿಂದ ಲಾಭವಾದರೆ ಇನ್ನೊಂದು ಚಿತ್ರಕ್ಕೆ ನಷ್ಟವಾಗುತ್ತದೆ. ಶೇಖರ್ ಕಮ್ಮುಲ ನಿರ್ದೇಶನದ ‘ಕುಬೇರ’ ಚಿತ್ರವೂ ದೀಪಾವಳಿಗೆ ಬರಲಿದೆ. ತಮಿಳಿನ ಸೂಪರ್ ಸ್ಟಾರ್ ಧನುಷ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಸದ್ಯ ಅವರು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದಲ್ಲಿ ನಾಗಾರ್ಜುನ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಇದನ್ನೂ ಓದಿ: ನಾನು ಮತ್ತು ಕಂಗನಾ ರಣಾವತ್ ಗಂಡ ಹೆಂಡತಿಯಂತೆ ಇದ್ದೆವು ಎಂದು ಹೇಳಿದ್ದ ಬಾಲಿವುಡ್ ಖ್ಯಾತ ನಟ
‘ಕುಬೇರ’ ನಿರ್ಮಾಪಕರು ದೀಪಾವಳಿಯಂದು ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸಿನಿಮಾವನ್ನು ಹಬ್ಬಕ್ಕೆ ರಿಲೀಸ್ ಮಾಡಿದರೆ ಲಾಭವಾಗುತ್ತದೆ ಎಂಬುದು ಅವರ ನಂಬಿಕೆ. ಇದೇ ಕಾರಣಕ್ಕೆ ಚಿತ್ರದ ಶೂಟಿಂಗ್ ಆದಷ್ಟು ಬೇಗ ಮುಗಿಸಲು ಪ್ಲ್ಯಾನ್ ನಡೆಯುತ್ತಿದೆ. ಸದ್ಯ ಹೈದರಾಬಾದ್‌ನಲ್ಲಿ ಆಕ್ಷನ್ ಸೀಕ್ವೆನ್ಸ್ ನಡೆಯುತ್ತಿದೆ. ಧನುಷ್ ಎದುರು ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ, ಧನುಷ್ ಅವರ ಚಿತ್ರ ಬಿಡುಗಡೆಯಾಯಿತು, ಅದು- ಕ್ಯಾಪ್ಟನ್ ಮಿಲ್ಲರ್. ಮಹೇಶ್ ಬಾಬು ಅಭಿನಯದ ‘ಗುಂಟೂರು ಖಾರಂ’ ಹಾಗೂ ತೇಜ ಸಜ್ಜಾ ಅವರ ‘ಹನುಮಾನ್’ ಚಿತ್ರಗಳ ಜೊತೆಗೆ ಈ ಚಿತ್ರವೂ ಬಿಡುಗಡೆಯಾಗಿದ್ದು, ಚಿತ್ರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.