ಬೆಚ್ಚಿ ಬೀಳಿಸುವ ‘ಸ್ತ್ರೀ 2’ ಸಿನಿಮಾದ ಟೀಸರ್ ಲೀಕ್; ತಮನ್ನಾ ನೋಡಿ ಎಲ್ಲರಿಗೂ ಶಾಕ್
ನಿರ್ದೇಶಕ ಅಮರ್ ಕೌಶಿಕ್ ಅವರು ‘ಸ್ತ್ರೀ 2’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್, ಪಂಕಜ್ ತ್ರಿಪಾಠಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆನ್ಲೈನ್ನಲ್ಲಿ ಈ ಸಿನಿಮಾದ ಟೀಸರ್ ಸೋರಿಕೆ ಆಗಿದೆ. ಅದರಲ್ಲಿ ತಮನ್ನಾ ಭಾಟಿಯಾ ಕೂಡ ನಟಿಸಿರುವುದು ಗೊತ್ತಾಗಿದೆ. ಇದರಿಂದಾಗಿ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿಯಾಗಿದೆ.
2018ರಲ್ಲಿ ಬಿಡುಗಡೆ ಆಗಿದ್ದ ‘ಸ್ತ್ರೀ’ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ರಾಜ್ಕುಮಾರ್ ರಾವ್ ಹಾಗೂ ಶ್ರದ್ಧಾ ಕಪೂರ್ (Shraddha Kapoor) ಜೋಡಿಯಾಗಿ ನಟಿಸಿದ್ದ ಆ ಸಿನಿಮಾಗೆ ಈಗ ಸೀಕ್ವೆಲ್ ಸಿದ್ಧವಾಗಿದೆ. ‘ಸ್ತ್ರೀ 2’ ಚಿತ್ರದ ಟೀಸರ್ (Stree 2 Teaser) ಈಗ ಲೀಕ್ ಆಗಿದೆ. ಅದರಲ್ಲಿ ನಟಿ ತಮನ್ನಾ ಭಾಟಿಯಾ ಅವರನ್ನು ನೋಡಿ ಪ್ರೇಕ್ಷಕರಿಗೆ ಅಚ್ಚರಿ ಆಗಿದೆ. ಈ ಸಿನಿಮಾದ ಪಾತ್ರವರ್ಗದಲ್ಲಿ ತಮನ್ನಾ ಭಾಟಿಯಾ (Tamannaah Bhatia)ಇರುವ ವಿಚಾರವನ್ನು ಚಿತ್ರತಂಡ ಬಹಿರಂಗಪಡಿಸಿರಲಿಲ್ಲ. ಈಗ ಟೀಸರ್ನಲ್ಲಿ ಅವರನ್ನು ನೋಡಿದ ಬಳಿಕ ‘ಸ್ತ್ರೀ 2’ ಮೇಲೆ ಜನರ ನಿರೀಕ್ಷೆ ಜಾಸ್ತಿ ಆಗಿದೆ.
ಅಷ್ಟಕ್ಕೂ ‘ಸ್ತ್ರೀ 2’ ಟೀಸರ್ ಲೀಕ್ ಆಗಿದ್ದು ಹೇಗೆ? ಹಾರರ್ ಕಥಾಹಂದರದ ‘ಮುಂಜ್ಯ’ ಸಿನಿಮಾ ಈಗ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಜೊತೆಗೆ ‘ಸ್ತ್ರೀ 2’ ಟೀಸರ್ ಬಿತ್ತರಿಸಲಾಗುತ್ತಿದೆ. ಆದರೆ ಆನ್ಲೈನ್ನಲ್ಲಿ ಟೀಸರ್ ಲಭ್ಯವಾಗಿಲ್ಲ. ಚಿತ್ರಮಂದಿರಗಳಲ್ಲಿ ಪ್ರದರ್ಶನವಾದ ಟೀಸರ್ ಅನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡ ಪ್ರೇಕ್ಷಕರು ಅದನ್ನು ಆನ್ಲೈನ್ನಲ್ಲಿ ಹರಿಬಿಟ್ಟಿದ್ದಾರೆ.
Horror Universe By Maddock 🔥#ShraddhaKapoor Confirm watching this for you 👻 💥#Stree2 pic.twitter.com/hIJv00lJmS
— ✎. Khushi 🎭 (@Khushi_TS) June 14, 2024
ಆಗಸ್ಟ್ನಲ್ಲಿ ‘ಸ್ತ್ರೀ 2’ ಸಿನಿಮಾ ರಿಲೀಸ್ ಆಗಲಿದೆ. ಶ್ರದ್ಧಾ ಕಪೂರ್ ಅವರು ದೆವ್ವದ ಗೆಟಪ್ನಲ್ಲಿ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಲು ಬರುತ್ತಿದ್ದಾರೆ. ಶ್ರದ್ಧಾ ಕಪೂರ್ ಜೊತೆ ರಾಜ್ಕುಮಾರ್ ರಾವ್ ಅವರ ಕಾಂಬಿನೇಷನ್ ಈ ಬಾರಿ ಹೇಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಮೊದಲ ಪಾರ್ಟ್ ರೀತಿಯೇ ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ, ಅಪಾರಶಕ್ತಿ ಖುರಾನಾ ಮುಂತಾದವರು ‘ಸ್ತ್ರೀ 2’ ಸಿನಿಮಾದ ಭಾಗವಾಗಿದ್ದಾರೆ.
ಇದನ್ನೂ ಓದಿ: ಭಾನುವಾರ ಸ್ನಾನ ಮಾಡಲ್ಲ ನಟಿ ತಮನ್ನಾ ಭಾಟಿಯಾ
ಅಮರ್ ಕೌಶಿಕ್ ಅವರು ‘ಸ್ತ್ರೀ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಆನ್ಲೈನ್ನಲ್ಲಿ ಲೀಕ್ ಆಗಿರುವ ಟೀಸರ್ ನೋಡಿದ ಬಳಿಕ ಅಭಿಮಾನಿಗಳ ಕೌತುಕ ಡಬಲ್ ಆಗಿದೆ. ಅಷ್ಟಕ್ಕೂ ತಮನ್ನಾ ಭಾಟಿಯಾ ಅವರ ಈ ಸಿನಿಮಾದ ಒಂದು ಸ್ಪೆಷಲ್ ಹಾಡಿನಲ್ಲಿ ಮಾತ್ರ ನಟಿಸಿದ್ದಾರಾ ಅಥವಾ ಅತಿಥಿ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಾರಾ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಅವರ ಎಂಟ್ರಿಯಿಂದಾಗಿ ಸಿನಿಮಾ ಮೇಲಿನ ಹೈಪ್ ಜಾಸ್ತಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.