‘ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್’ನ ಮೂರನೇ ಸೀಸನ್ ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿದೆ. ಬಾಲಿವುಡ್‌ನ ಸೆಲೆಬ್ರಿಟಿಗಳ ಪತ್ನಿಯರ ಐಷಾರಾಮಿ ಜೀವನವನ್ನು ತೋರಿಸುವ ಈ ಸರಣಿಯಲ್ಲಿ ಮೂವರು ಹೊಸ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಅವರಲ್ಲಿ ನಟಿ ನೀತು ಕಪೂರ್ ಅವರ ಮಗಳು ಮತ್ತು ರಣಬೀರ್ ಕಪೂರ್ ಅವರ ಸಹೋದರಿ ರಿದ್ಧಿಮಾ ಕಪೂರ್ ಸಾಹ್ನಿ ಕೂಡ ಇದ್ದಾರೆ. ರಿದ್ಧಿಮಾ ಜೊತೆಗೆ, ನಟ ಸಂಜಯ್ ಕಪೂರ್ ಅವರ ಪತ್ನಿ ಮಹೀಪ್ ಕಪೂರ್, ಸಮೀರ್ ಸೋನಿ ಅವರ ಪತ್ನಿ ನೀಲಂ ಕೊಠಾರಿ, ಚಂಕಿ ಪಾಂಡೆ ಅವರ ಪತ್ನಿ ಭಾವನಾ ಪಾಂಡೆ ಮತ್ತು ಸೋಹೈಲ್ ಖಾನ್ ಅವರ ಮಾಜಿ ಪತ್ನಿ ಸೀಮಾ ಸಜ್ದೆ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ತಮಗಿಂತ 15 ವರ್ಷ ಹಿರಿಯ ನಟನ ಮೇಲೆ ತನಗೆ ಕ್ರಶ್ ಇದೆ ಎಂದು ರಿದ್ಧಿಮಾ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.
ಮಹೀಪ್ ಕಪೂರ್ ಅವರ ಪತಿ ಸಂಜಯ್ ಕಪೂರ್ ಮೇಲೆ ರಿದ್ಧಿಮಾಗೆ ಕ್ರಶ್ ಇದೆಯಂತೆ. ಒಂದು ಕಾಲದಲ್ಲಿ ಅಂಕಲ್ ಎಂದು ಸಂಜಯ್ ಅವರನ್ನು ರಿದ್ಧಿಮಾ ಕರೆಯುತ್ತಿದ್ದರು. ಈಗ ಅವರ ಮೇಲೆ ಕ್ರಶ್ ಆಗಿದೆ ಎಂದರೆ ಹೇಗನ್ನಿಸಬೇಡ ಹೇಳಿ.
‘ಮಹೀಪ್, ನಿಮಗೆ ಗೊತ್ತಾ? ನಾನು ಬೆಳೆಯುತ್ತಿರುವಾಗ ಸಂಜಯ್‌ನನ್ನು ತುಂಬಾ ಇಷ್ಟಪಡುತ್ತಿದ್ದೆ’ ಎಂದಿದ್ದಾರೆ ರಿದ್ಧಿಮಾ. ಇದನ್ನು ಕೇಳಿದ ನೀಲಂ ಕೊಠಾರಿ ಆಶ್ಚರ್ಯಚಕಿತರಾದರು. ‘ನೀವು ಏನು ಹೇಳುತ್ತಿದ್ದೀರಿ’ ಎಂದು ಅಚ್ಚರಿ ಹೊರಹಾಕಿದರು. ‘ನಾನು ಸತ್ಯವನ್ನು ಹೇಳುತ್ತಿದ್ದೇನೆ, ನನಗೆ ಸಂಜಯ್ ಕಪೂರ್ ಮೇಲೆ ಅಪಾರ ಕ್ರಶ್ ಇದೆ. ಆ ಸಮಯದಲ್ಲಿ ನಾನು ಅವರನ್ನು ಅಂಕಲ್ (ಚಿಕ್ಕಪ್ಪ) ಎಂದು ಕರೆಯುತ್ತಿದ್ದೆ. ಆದರೆ ನಾನು ಈಗ ಅವರನ್ನು ಏನೆಂದು ಕರೆಯಲಿ’ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ‘ರಾಜಮೌಳಿ ಬೇಡ, ಈ ನಿರ್ದೇಶಕ ಬೇಕು’; ರಣಬೀರ್ ಕಪೂರ್ ಅಚ್ಚರಿಯ ಆಯ್ಕೆ
‘ನನ್ನನ್ನು ಆಂಟಿ ಎಂದು ಕರೆಯಬೇಡಿ. ಅದೇನೇ ಇರಲಿ, ನಿಮಗೆ ಒಳ್ಳೆಯ ಟೇಸ್ಟ್ ಇದೆ’ ಎಂದು ಮಹೀಪ್ ಅವರು ರಿದ್ಧಿಮಾಗೆ ಹೇಳಿದರು. ಈ ಮೂಲಕ ತಮ್ಮ ಪತಿಯನ್ನು ಪರೋಕ್ಷವಾಗಿ ಹೊಗಳಿದರು ಮಹೀಪ್ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.