ಬಾಲಿವುಡ್ (Bollywood) ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ಮುಳುಗುತ್ತಿದ್ದ ಬಾಲಿವುಡ್ಗೆ ಶಾರುಖ್ ಖಾನ್ರ (Shah Rukh Khan) ಪಠಾಣ್ ಸಿನಿಮಾ ಜೀವ ತುಂಬಿದೆ. ಅದರ ಬೆನ್ನಲ್ಲೆ ಕೆಲವು ಸಿನಿಮಾಗಳು ಸಾಧಾರಣಕ್ಕಿಂತಲೂ ಉತ್ತಮ ಕಲೆಕ್ಷನ್ ಮಾಡಿವೆ. ಬಾಲಿವುಡ್ ಏನೋ ಮರಳಿ ಹಳಿಗೆ ಮರಳುತ್ತಿದೆ ಆದರೆ ಬಾಲಿವುಡ್ನ ಸ್ಟಾರ್ ನಟರು ಕೆಲವರು ಹಳಿಗೆ ಮರಳುವುದು ಬಾಕಿ ಇದೆ ಅದರಲ್ಲಿ ಪ್ರಮುಖವಾದವರೆಂದರೆ ನಟ ಸಲ್ಮಾನ್ ಖಾನ್ (Salman Khan). ಸತತ ಸೋಲುಗಳನ್ನೇ ಕಾಣುತ್ತಿರುವ ಸಲ್ಮಾನ್ ಖಾನ್, ಒಂದೇ ಒಂದು ಸೂಪರ್ ಹಿಟ್ ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮೂವರು ಹಿಟ್ ನಿರ್ದೇಶಕರು ಸಲ್ಮಾನ್ ಖಾನ್ಗೆ ಕತೆ ಹೇಳಿದ್ದಾರೆ.
ಬಾಲಿವುಡ್ನ ಹಿಟ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಸಲ್ಮಾನ್ ಖಾನ್ಗೆ ಕತೆಯೊಂದನ್ನು ಹೇಳಿದ್ದಾರಂತೆ. ಸೈನ್ಯದ ಹಿನ್ನೆಲೆಯಲ್ಲಿನ ಈ ಕತೆ ಆಕ್ಷನ್ ಥ್ರಿಲ್ಲರ್ ಜಾನರ್ಗೆ ಸೇರಿದ್ದಾಗಿದ್ದು, ಸಿನಿಮಾವನ್ನು ಸ್ವತಃ ಕರಣ್ ಜೋಹರ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸಿನಿಮಾವನ್ನು ಕರಣ್ ಜೋಹರ್ ಅಥವಾ ವಿಷ್ಣು ವರ್ಧಾನ್ ನಿರ್ದೇಶನ ಮಾಡಲಿದ್ದಾರೆ.
ಬಾಲಿವುಡ್ನ ಬಡಾ ನಿರ್ಮಾಪಕರಲ್ಲಿ ಒಬ್ಬರಾಗಿರುವ ಸಾಜಿದ್ ನಾಡಿಯಾವಾಲಾ ಸಲ್ಮಾನ್ ಖಾನ್ಗಾಗಿ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದು ಕತೆಯೊಂದನ್ನು ಹೇಳಿದ್ದಾರಂತೆ. ಈ ಹಿಂದೆ ಸಲ್ಮಾನ್ ಖಾನ್ಗಾಗಿ ಕಿಕ್ ಸಿನಿಮಾವನ್ನು ಸಾಜಿದ್ ನಿರ್ದೇಶನ ಮಾಡಿದ್ದರು. ಇದೀಗ ಅದೇ ಸಿನಿಮಾದ ಎರಡನೇ ಭಾಗವನ್ನು ನಿರ್ದೇಶಿಸಲು ಸಾಜಿದ್ ಮುಂದಾಗಿದ್ದು ಕತೆಯನ್ನು ಸಲ್ಮಾನ್ ಖಾನ್ಗೆ ಹೇಳಿದ್ದಾರೆ. ಸಾಜಿದ್, ಪ್ರಸ್ತುತ ಹೌಸ್ಫುಲ್ 5 ಹಾಗೂ ಆನ್ ಸಿನಿಮಾಗಳ ನಿರ್ದೇಶನ ಮಾಡುತ್ತಿದ್ದಾರೆ. ಈ ಎರಡೂ ಸಿನಿಮಾಗಳ ಬಳಿಕ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ:19 ಅಂತಸ್ತಿನ ಐಷಾರಾಮಿ ಹೋಟೆಲ್ ನಿರ್ಮಿಸಲಿದ್ದಾರೆ ಸಲ್ಮಾನ್ ಖಾನ್? ಇಲ್ಲಿದೆ ಸಂಪೂರ್ಣ ವಿವರ
ಬಾಲಿವುಡ್ನ ಹಿರಿಯ ನಿರ್ದೇಶಕರಾಗಿರುವ ಸೂರಜ್ ಬರ್ಜಾತಿಯಾ ಸಹ ಸಲ್ಮಾನ್ ಖಾನ್ಗೆ ಕತೆ ಹೇಳಿದ್ದಾರೆ. ಈ ಹಿಂದೆ ಸಲ್ಮಾನ್ ಖಾನ್ಗಾಗಿ ಈ ವರೆಗೆ ನಾಲ್ಕು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸೂರಜ್ ಬರ್ಜಾತಿಯಾ ಇದೀಗ ಮತ್ತೊಮ್ಮೆ ಸಲ್ಮಾನ್ ಖಾನ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಲ್ಮಾನ್ ವೃತ್ತಿ ಬದುಕಿನ ಸೂಪರ್ ಹಿಟ್ ಸಿನಿಮಾ ಆಗಿರುವ ಹಮ್ ಆಪ್ಕೆ ಹೈ ಕೋನ್, ಮೈನೆ ಪ್ಯಾರ್ ಕಿಯಾ ಸಿನಿಮಾಗಳನ್ನು ಸೂಜರ್ ನಿರ್ದೇಶನ ಮಾಡಿದ್ದಾರೆ. ಇವುಗಳ ಜೊತೆಗೆ ಹಮ್ ಸಾಥ್ ಸಾಥ್ ಹೈ, ಪ್ರೇಮ್ ರತನ್ ಧನ್ ಪಾಯೋ ಸಿನಿಮಾವನ್ನು ಸಹ ಸೂರಜ್ ಭರ್ಜಾತಿಯಾ ನಿರ್ದೇಶನ ಮಾಡಿದ್ದಾರೆ. ಇದೀಗ ಸಲ್ಮಾನ್ ಖಾನ್ಗಾಗಿ ಮಧ್ಯವಯಸ್ಕರಿಬ್ಬರ ನಡುವೆ ಪ್ರೇಮಕತೆಯನ್ನು ಹೆಣೆದಿದ್ದಾರಂತೆ. ಮಾಸ್ ಇಮೇಜಿನ ಸಲ್ಮಾನ್ ಖಾನ್ ಈ ಸಿನಿಮಾವನ್ನು ಒಪ್ಪುತ್ತಾರೆಯೋ ಇಲ್ಲವೊ ಕಾದು ನೋಡಬೇಕಿದೆ.
ಸಲ್ಮಾನ್ ಖಾನ್ ಪ್ರಸ್ತುತ ಟೈಗರ್ 3 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದಿನ ಎರಡೂ ಟೈಗರ್ ಸರಣಿಯ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಹಾಗಾಗಿ ಈ ಸಿನಿಮಾದ ಮೇಲೆಯೂ ಸಲ್ಮಾನ್ ಖಾನ್ಗೆ ಭಾರಿ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:29 am, Fri, 2 June 23