ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರು ಒಂದು ಮದುವೆ ಆದ ನಂರವೂ ಶ್ರೀದೇವಿ ಜೊತೆ ಆಕರ್ಷಿತರಾಗಿದ್ದರು. ಅವರಿಗೆ ಆಗಲೇ ಮೋನಾ ಶೌರಿ ಕಪೂರ್ ಜೊತೆ ವಿವಾಹ ಆಗಿತ್ತು. ಅವರಿಗೆ ಶ್ರೀದೇವಿ ಬಗ್ಗೆ ಸಾಕಷ್ಟು ಪ್ರೀತಿ ಮೂಡಿತ್ತು. ಈ ಪ್ರೀತಿಯನ್ನು ಅವರು ವ್ಯಕ್ತಪಡಿಸಿ ಅವರನ್ನು ಮದುವೆ ಆದರು. ಈ ಬಗ್ಗೆ ಬೋನಿ ಕಪೂರ್ ಅವರು ಮಾತನಾಡಿದ್ದಾರೆ. ಈ ಮೊದಲು ಬೇರೆ ಮಹಿಳೆಯರಿಗೆ ಆಕರ್ಷಿತರಾಗುತ್ತಿದ್ದಾಗಿ ಒಪ್ಪಿಕೊಂಡಿರೋ ಅವರು, ಶ್ರೀದೇವಿ ಸಿಕ್ಕ ಬಳಿಕ ಬದುಕು ಬದಲಾಯಿತು ಎಂದು ಹೇಳಿದ್ದಾರೆ.
ಬೋನಿ ಕಪೂರ್ ಅವರು ಶ್ರೀದೇವಿಯನ್ನು 1996ರಲ್ಲಿ ಮದುವೆ ಆದರು. ಆ ಸಂದರ್ಭದಲ್ಲಿ ಅವರಿಗೆ ಮದುವೆ ಆಗಿತ್ತು. ಅಲ್ಲದೆ ಎರಡು ಮಗು ಕೂಡ ಇತ್ತು. ‘ನನಗೆ ಶ್ರೀದೇವಿ ಮೇಲೆ ಪ್ರೀತಿ ಮೂಡಿತ್ತು. ನನಗೆ ಅವಳ ಜೊತೆ ಪ್ರೀತಿ ಇದೆ. ಸಾಯುವವರೆಗೂ ಆ ಪ್ರೀತಿ ಹಾಗೆಯೇ ಇರುತ್ತದೆ. ಅವಳ ವ್ಯಕ್ತಿತ್ವವು ಇಡೀ ಜೀವನವನ್ನು ಅವಳ ಜೊತೆ ಕಳೆಯುವಂತೆ ಮಾಡಿತು. ನಾನು ಅವಳಿಗೆ ಯಾವಾಗಲೂ ಮೋಸ ಮಾಡಿಲ್ಲ. ಅವಳು ನನಗೆ ಎಲ್ಲವೂ’ ಎಂದಿದ್ದಾರೆ ಬೋನಿ ಕಪೂರ್.
‘ನನಗೆ ಈಗಲೂ ಗೆಳೆತಿಯರಿದ್ದಾರೆ. ನಾನು ಅವಳಿಗೆ ಆಕರ್ಷಿತರಾಗಬಹುದು. ಆದರೆ, ಶ್ರೀದೇವಿ ಮೇಲೆ ಇರುವ ಪ್ರೀತಿ ಎಂದಿಗೂ ಮಾಸುವಂಥದ್ದಲ್ಲ’ ಎಂದಿದ್ದಾರೆ ಅವರು. ಈ ಮೂಲಕ ಶ್ರೀದೇವಿ ಜೊತೆಗಿನ ಪ್ರಿತಿ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ.
‘ಪ್ರಯಾಣದಲ್ಲಿ ನೀವು ನಿಮ್ಮ ಪಾರ್ಟ್ನರ್ನಿಂದ ಸಾಕಷ್ಟು ವಿಚಾರಗಳನ್ನು ಕಲಿಯುತ್ತೀರ. ಅವಳಿಗೆ ಇಷ್ಟವಾಗದೆ ಇರುವ ವಿಚಾರವನ್ನು ನೀವು ಮಾಡಲ್ಲ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುತ್ತೀರಿ. ನಾನು ಪಂಜಾಬಿ. ಶ್ರೀದೇವಿ ದಕ್ಷಿಣದವಳು. ನಾನು ಅವಳಿಗಾಗಿ ಏನು ಮಾಡಲೂ ರೆಡಿ ಇದ್ದೆ’ ಎಂದಿದ್ದಾರೆ ಅವರು.
ಇದನ್ನು ಓದಿ:ದಿನದಿನಕ್ಕೂ ಸ್ಟೈಲಿಶ್ ಆಗುತ್ತಿರುವ ಶ್ರೀದೇವಿ ಪತಿ ಬೋನಿ ಕಪೂರ್
ಬೋನಿ ಕಪೂರ್ ಅವರು ಶ್ರೀದೇವಿಯನ್ನು ಅತಿಯಾಗಿ ಪ್ರೀತಿಸಿದ್ದರು. ಆದರೆ, ದುಬೈನಲ್ಲಿ ಶ್ರೀದೇವಿ ನಿಧನ ಹೊಂದಿದರು. ಬಾತ್ಟಬ್ನಲ್ಲಿ ಮುಳುಗಿ ಅವರು ನಿಧನ ಹೊಂದಿದ್ದರು. ಈ ಸಾವು ಸಾಕಷ್ಟು ಶಾಕಿಂಗ್ ಎನಿಸಿತ್ತು. ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಹೊರಹಾಕಲಾಗಿತ್ತು. 2018ರ ಫೆಬ್ರವರಿ 24ರಂದು ಈ ದುರ್ಘಟನೆ ಸಂಭವಿಸಿತ್ತು.
ಬೋನಿ ಕಪೂರ್ ಹಾಗೂ ಶ್ರೀದೇವಿನ ವಿವಾಹ ಆಗುವದಕ್ಕೂ ಮೊದಲು ಮೋನಾ ಕಪೂರ್ನ ವಿವಾಹ ಆಗಿದ್ದರು. ಆದರೆ, ವಿವಾಹ ಹೆಚ್ಚು ದಿನ ಬರಲೇ ಇಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ