AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್ ಸೂಪರ್ ಹಿಟ್ ಚಿತ್ರಗಳ ಪಟ್ಟಿ ನೋಡಿ; ಈ ಸಿನಿಮಾಗಳನ್ನು ನೋಡಿದೀರಾ?

ಸಲ್ಮಾನ್ ಖಾನ್ ಅವರ 59ನೇ ಜನ್ಮದಿನದಂದು, ಅವರ ಯಶಸ್ವಿ ಬಾಲಿವುಡ್ ವೃತ್ತಿಜೀವನದ ಬಗ್ಗೆ ನೋಡೋಣ. ಬಜರಂಗಿ ಭಾಯಿಜಾನ್, ಸುಲ್ತಾನ್, ಏಕ್ ಥಾ ಟೈಗರ್ ಮುಂತಾದ ಅವರ ಸೂಪರ್ ಹಿಟ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಿವೆ. ಅವರ ಭವಿಷ್ಯದ ಯೋಜನೆಗಳ ಬಗ್ಗೆಯೂ ಈ ಲೇಖನದಲ್ಲಿ ತಿಳಿಸಲಾಗಿದೆ.

ಸಲ್ಮಾನ್ ಖಾನ್ ಸೂಪರ್ ಹಿಟ್ ಚಿತ್ರಗಳ ಪಟ್ಟಿ ನೋಡಿ; ಈ ಸಿನಿಮಾಗಳನ್ನು ನೋಡಿದೀರಾ?
ಸಲ್ಮಾನ್ ಖಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 27, 2024 | 9:17 AM

Share

ಸಲ್ಮಾನ್ ಖಾನ್ ಅವರು ಬಾಲಿವುಡ್ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಗೆಲುವು ಕಂಡಿದ್ದಾರೆ. ಅವರಿಗೆ ಈಗ 59ನೇ ವರ್ಷದ ಜನ್ಮದಿನ. ಅವರು ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಈಗ ಅವರು ಬಾಲಿವುಡ್​ನ ಪ್ರಭಾವಿ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಸಲ್ಮಾನ್ ಖಾನ್ ಅವರ ವೃತ್ತಿ ಜೀವನದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಸಿನಿಮಾಗಳ ಬಗ್ಗೆ ಇಲ್ಲಿದೆ ವಿವರ.

‘ಬಜರಂಗಿ ಭಾಯಿಜಾನ್’

‘ಬಜರಂಗಿ ಭಾಯಿಜಾನ್’ ಸಿನಿಮಾನ ಕಬೀರ್ ಖಾನ್ ನಿರ್ದೇಶನ ಮಾಡಿದ್ದರು. ಕರೀನಾ ಕಪೂರ್, ನವಾಜುದ್ದೀನ್ ಸಿದ್ಧಿಕಿ, ಹರ್ಷಾಲಿ ಮಲ್ಹೋತ್ರಾ ಇದನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ 2015ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 422 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ಸುಲ್ತಾನ್

‘ಸುಲ್ತಾನ್’ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದರು. ಈ ಸಿನಿಮಾನ ಅಲಿ ಅಬ್ಬಾಸ್ ಜಫರ್ ನಿರ್ದೇಶನ ಮಾಡಿದ್ದರು. ಸಲ್ಲು ಜೊತೆ ಅನುಷ್ಕಾ ಶರ್ಮಾ, ಅಮಿತ್ ಸಧ್ ಮೊದಲಾದವರು ನಟಿಸಿದ್ದರು. ಈ ಚಿತ್ರ ಭಾರತದಲ್ಲಿ 414 ಕೋಟಿ ರೂಪಾಯಿ, ವಿಶ್ವ ಮಟ್ಟದಲ್ಲಿ 577 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ಟೈಗರ್ ಜಿಂದಾ ಹೇ

ಅಲಿ ಅಬ್ಬಾಸ್ ಜಫರ್ ಹಾಗೂ ಸಲ್ಮಾನ್ ಖಾನ್ ಒಟ್ಟಾಗಿ ಕೆಲಸ ಮಾಡಿದ ಮತ್ತೊಂದು ಸಿನಿಮಾ ಇದು. ಈ ಚಿತ್ರ 2017ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ 132 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಸಿನಿಮಾದಲ್ಲಿ ಸಲ್ಲು ರಾ ಏಜೆಂಟ್ ಮಾತ್ರ ಮಾಡಿದ್ದರು.

ಪ್ರೇಮ್ ರತನ್ ಧನ್ ಪಾಯೋ

ಸೂರಜ್ ಬಾರ್ಜತ್ಯ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದರು ಈ ಸಿನಿಮಾದಲ್ಲಿ ಸಲ್ಲುಗೆ ಜೊತೆಯಾಗಿ ಸೋನಂ ಕಪೂರ್ ನಟಿಸಿದ್ದರು. ಈ ಸಿನಿಮಾ 267 ಕೋಟಿ ರೂಪಾಯಿ ಬಾಚಿಕೊಂಡಿತ್ತು.

ಕಿಕ್

ರಿಮೇಕ್ ಸಿನಿಮಾ ಆಗಿ ಮೂಡಿ ಬಂದ ‘ಕಿಕ್’ ಚಿತ್ರದಲ್ಲಿ ಸಲ್ಮಾನ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್, ರಣದೀಪ್ ಹೂಡಾ, ನವಾಜುದ್ದೀನ್ ಸಿದ್ಧಿಕಿ ಮೊದಲಾದವರು ನಟಿಸಿದ್ದರು. ಈ ಸಿನಿಮಾದಲ್ಲಿ ದೇವಿ ಲಾಲ್ ಸಿಂಗ್ ಪಾತ್ರ ಮಾಡಿದ್ದರು. ಈ ಚಿತ್ರ 282 ಕೋಟಿ ರೂಪಾಯಿ ಗಳಿಸಿತ್ತು.

ಭಾರತ್

ಸಲ್ಮಾನ್ ಖಾನ್ ನಟನೆಯ ‘ಭಾರತ್’ ವಿಮರ್ಶೆಯಲ್ಲಿ ಸೋತಿದೆ. ಈ ಚಿತ್ರ ಗಳಿಕೆಯಲ್ಲಿ ಸಾಧಾರಣ ಎನಿಸಿಕೊಂಡಿದೆ. ಈ ಚಿತ್ರ ವಿಶ್ವ ಮಟ್ಟದಲ್ಲಿ 300 ಕೋಟಿ ರೂಪಾಯಿ ಗಳಿಸಿತ್ತು.

ಏಕ್ ಥಾ ಟೈಗರ್

ಏಕ್ ಥಾ ಟೈಗರ್ ಸಲ್ಲು ನಟನೆಯ ಯಶಸ್ವಿ ಸಿನಿಮಾಗಳಲ್ಲಿ ಒಂದು. ‘ಟೈಗರ್​’ ಫ್ರಾಂಚೈಸಿಗಳಲ್ಲಿ ಒಂದು. ಅವರು ರಾ ಏಜೆಂಟ್ ಪಾತ್ರ ಮಾಡಿದ್ದರು. ಈ ಸಿನಿಮಾ ವಿಶ್ವ ಮಟ್ಟದಲ್ಲಿ 308 ಕೋಟಿ ರೂಪಾಯಿ ಗಳಿಸಿದೆ.

ರೇಸ್ 3

ಸಲ್ಮಾನ್ ಖಾನ್, ಅನಿಲ್ ಕಪೂರ್, ಜಾಕ್ವೆಲಿನ್ ಫರ್ನಾಂಡಿಸ್, ಬಾಬಿ ಡಿಯೋಲ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ವಿಶ್ವ ಮಟ್ಟದಲ್ಲಿ 305 ಕೋಟಿ ರೂಪಾಯಿ ಗಳಿಸಿದೆ.

ದಬಾಂಗ್ 2

ಅರ್ಬಾಜ್ ಖಾನ್ ನಿರ್ದೇಶನದ ‘ದಬಾಂಗ್ 2’ ಸಿನಿಮಾ ಚುಲ್ಬುಲ್ ಪಾಂಡೆ ಪಾತ್ರ ಮಾಡಿದ್ದರು. ಈ ಚಿತ್ರಕ್ಕೆ ಸೋನಾಕ್ಷಿ ಸಿನ್ಹಾ ನಾಯಕಿ. ಈ ಸಿನಿಮಾ 249 ಕೋಟಿ ರೂಪಾಯಿ ಬಾಚಿಕೊಂಡಿತ್ತು.

ಬಾಡಿಗಾರ್ಡ್

ಕರೀನಾ ಕಪೂರ್ ನಟನೆಯ ‘ಬಾಡಿಗಾರ್ಡ್’ ಸಿನಿಮಾ 234 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಚಿತ್ರದ ಭಾರತದ ಕಲೆಕ್ಷನ್ 196 ಕೋಟಿ ರೂಪಾಯಿ ಗಳಿಕೆ ಆಗಿತ್ತು.

ಮುಂಬರುವ ಚಿತ್ರಗಳು

ಸಲ್ಮಾನ್ ಖಾನ್ ನಟನೆಯ ‘ಸಿಖಂದರ್’ ಸಿನಿಮಾ 2025ರ ಈದ್​ಗೆ ರಿಲೀಸ್ ಆಗಲಿದೆ. ಈ ಚಿತ್ರವನ್ನು ಎಆರ್​ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾ ಈ ಚಿತ್ರದ ನಾಯಕಿ.  ‘ಕಿಕ್ 2’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ‘ಟೈಗರ್ vs ಪಠಾಣ್’ ಸೆಟ್ಟೇರಲು ಸಮಯ ಬೇಕಿದೆ. ಅಟ್ಲೀ ಜೊತೆಯೂ ಸಿನಿಮಾ ಮಾಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.