‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ರಿಲೀಸ್ಗೆ ಕ್ಷಣಗಣನೆ ಆರಂಭ ಆಗಿದೆ. ಸೆಪ್ಟೆಂಬರ್ 9ರಂದು ವಿಶ್ವಾದ್ಯಂತ ರಿಲೀಸ್ ಆಗಲಿರುವ ಈ ಚಿತ್ರದಲ್ಲಿ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ಈ ಸಿನಿಮಾದ ಟ್ರೇಲರ್ನಲ್ಲಿ ಕಳಪೆ ಗ್ರಾಫಿಕ್ಸ್ ನೋಡಿ ಅನೇಕರು ಚಿತ್ರದ ಬಗ್ಗೆ ಟೀಕೆ ಮಾಡಿದ್ದರು. ಈ ಕಾರಣಕ್ಕೆ ಉಳಿದ ಬಾಲಿವುಡ್ ಸಿನಿಮಾಗಳಂತೆ ಈ ಚಿತ್ರವೂ ಸೋಲಲಿದೆ ಎಂದು ಕೆಲವರು ವಾದ ಮುಂದಿಟ್ಟಿದ್ದಾರೆ. ಆದರೆ, ಅಡ್ವಾನ್ಸ್ ಬುಕಿಂಗ್ನಲ್ಲಿ ಸಿನಿಮಾ ಒಳ್ಳೆಯ ಪರ್ಫಾರ್ಮೆನ್ಸ್ ತೋರಿಸುತ್ತಿದೆ. ಹೀಗಾಗಿ, ಸಿನಿಮಾ ಉತ್ತಮ ರೀತಿಯಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆ ಆಗಿದ್ದಾರೆ. ಅವರು ಮಗುವಿನ ನಿರೀಕ್ಷೆಯಲ್ಲೂ ಇದ್ದಾರೆ. ಈ ಸಂದರ್ಭದಲ್ಲೇ ಅವರು ಒಟ್ಟಾಗಿ ನಟಿಸಿರುವ ಮೊದಲ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಒಂದು ವರ್ಗದ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಾಗಿ, ಮುಂಗಡವಾಗಿ ಟಿಕೆಟ್ ಕಾಯ್ದಿರಿಸಲು ಕೆಲವರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.
ಬುಧವರಾ (ಸೆಪ್ಟೆಂಬರ್ 7) ರಾತ್ರಿ ವೇಳೆಗೆ ‘ಬ್ರಹ್ಮಾಸ್ತ್ರ’ ಅಡ್ವಾನ್ಸ್ ಬುಕಿಂಗ್ನಿಂದ 23 ಕೋಟಿ ರೂಪಾಯಿ ಹರಿದು ಬಂದಿದೆ. ಸೆಪ್ಟೆಂಬರ್ 9ರ ಶೋನ 11 ಕೋಟಿ ರೂಪಾಯಿ ಬೆಲೆಯ ಟಿಕೆಟ್ಗಳು ಮಾರಾಟ ಆಗಿದೆ. ಶನಿವಾರ ಹಾಗೂ ಭಾನುವಾರ ಅಡ್ವಾನ್ಸ್ ಬುಕಿಂಗ್ನಿಂದ 10 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ‘ಆರ್ಆರ್ಆರ್’ ಹಿಂದಿ ವರ್ಷನ್ನ ಅಡ್ವಾನ್ಸ್ ಬುಕಿಂಗ್ನಿಂದ ಮೊದಲ ದಿನ 7 ಕೋಟಿ ರೂಪಾಯಿ ಕಮಾಯಿ ಆಗಿತ್ತು.
‘ಬ್ರಹ್ಮಾಸ್ತ್ರ’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಬಿಸ್ನೆಸ್ ಕೂಡ ಉತ್ತಮವಾಗಿ ಮಾಡುತ್ತಿದೆ. ಆದರೆ, ಯಶ್ ನಟನೆಯ ‘ಕೆಜಿಎಫ್ 2’ ದಾಖಲೆ ಮುರಿಯಲು ರಣಬೀರ್ ಕಪೂರ್ ಸಿನಿಮಾಗೆ ಸಾಧ್ಯವಾಗಿಲ್ಲ ಮತ್ತು ಆಗುವುದೂ ಇಲ್ಲ ಎಂದು ಸಿನಿ ಪಂಡಿತರು ಹೇಳಿದ್ದಾರೆ. ‘ಕೆಜಿಎಫ್ 2’ ಹಿಂದಿ ವರ್ಷನ್ ಅಡ್ವಾನ್ಸ್ ಬುಕಿಂಗ್ನಿಂದ ಮೊದಲ ದಿನ 40 ಕೋಟಿ ರೂಪಾಯಿ ಹಾಗೂ ಒಟ್ಟಾರೆ 80 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು.
ಇದನ್ನೂ ಓದಿ: ಸೆ.9ಕ್ಕೆ ‘ಲಕ್ಕಿ ಮ್ಯಾನ್’ ವರ್ಸಸ್ ‘ಬ್ರಹ್ಮಾಸ್ತ್ರ’: ಬುಕ್ ಮೈ ಶೋನಲ್ಲಿ ಹೇಗಿದೆ ಬಲಾಬಲ?
ಇತ್ತೀಚೆಗೆ ಬಾಲಿವುಡ್ ಮಂಕಾಗಿದೆ. ಹೇಳಿಕೊಳ್ಳುವಂತಹ ಕಲೆಕ್ಷನ್ ಯಾವ ಚಿತ್ರದಿಂದಲೂ ಆಗುತ್ತಿಲ್ಲ. ಈಗ ‘ಬ್ರಹ್ಮಾಸ್ತ್ರ’ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಯಾವ ರೀತಿಯಲ್ಲಿ ಬಿಸ್ನೆಸ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.