ಈ ಚಿತ್ರದಲ್ಲಿರೋ ಯುವ ನಟಿ ಯಾರು? ಸ್ಟಾರ್ ಹೀರೋನ ಮಗಳು

| Updated By: ರಾಜೇಶ್ ದುಗ್ಗುಮನೆ

Updated on: Sep 10, 2023 | 3:20 PM

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಆ್ಯಕ್ಟೀವ್ ಆಗಿರುತ್ತಾರೆ. ಅಭಿಮಾನಿಗಳಿಗಾಗಿ ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಫೋಟೋಗಳು ಫ್ಯಾನ್ಸ್ ವಲಯದಲ್ಲಿ ವೈರಲ್ ಆಗುತ್ತವೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಯುವ ನಟಿಯೊಬ್ಬರ ಫೋಟೋ ವೈರಲ್ ಆಗಿದೆ. ಇವರು ಸ್ಟಾರ್ ಹೀರೋನ ಮಗಳು.

ಈ ಚಿತ್ರದಲ್ಲಿರೋ ಯುವ ನಟಿ ಯಾರು? ಸ್ಟಾರ್ ಹೀರೋನ ಮಗಳು
ಯುವ ನಟಿಯ ಬಾಲ್ಯದ ಫೋಟೋ
Follow us on

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಆ್ಯಕ್ಟೀವ್ ಆಗಿರುತ್ತಾರೆ. ಅಭಿಮಾನಿಗಳಿಗಾಗಿ ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಫೋಟೋಗಳು ಫ್ಯಾನ್ಸ್ ವಲಯದಲ್ಲಿ ವೈರಲ್ ಆಗುತ್ತವೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಯುವ ನಟಿಯೊಬ್ಬರ ಫೋಟೋ ವೈರಲ್ ಆಗಿದೆ. ಇವರು ಸ್ಟಾರ್ ಹೀರೋನ ಮಗಳು. ಈಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಬೇರಾರೂ ಅಲ್ಲ ನಟಿ ಸಾರಾ ಅಲಿ ಖಾನ್ (Sara Ali Khan). ಅವರು ಇನ್​ಸ್ಟಾಗ್ರಾಮ್​ನಲ್ಲಿ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ಸಾರಾ ಅಲಿ ಖಾನ್ ಅವರು ಈ ಮೊದಲು ತುಂಬಾನೇ ದಪ್ಪ ಇದ್ದರು. ಇದನ್ನು ಅವರು ಚಾಲೆಂಜ್ ಆಗಿ ತೆಗೆದುಕೊಂಡರು. ನಂತರ ಜಿಮ್​ನಲ್ಲಿ ವರ್ಕೌಟ್ ಮಾಡಿ ತೆಳ್ಳಗಾದರು. ಈಗ ಸಾರಾ ಅಲಿ ಖಾನ್ ಅವರು ಸಖತ್ ಫಿಟ್ ಆಗಿದ್ದಾರೆ. ಈಗ ಅವರು ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು ಇತ್ತೀಚೆಗೆ ಬಾಲ್ಯದ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ನಟಿ ಸಾರಾ ಅಲಿ ಖಾನ್ ಅವರು ಕೈ ಊರಿ ಕುಳಿತಿರುವ ಫೋಟೋ ಹಂಚಿಕೊಂಡಿದ್ದಾರೆ. ಅದೇ ಪೋಸ್ಟ್​ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಕೂಡ ಇದೆ. ಈ ಫೋಸ್ಟ್​ಗೆ ಅವರು ‘ಬಾಲ್ಯದಿಂದಲೇ ಕೈಗಳು ಗಟ್ಟಿ ಇದ್ದವು’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಅವರ ಬಾಲ್ಯದ ಕ್ಯೂಟ್​ನೆಸ್ ಬಗ್ಗೆ ಮಾತನಾಡಿದ್ದಾರೆ. ‘ನಿಮ್ಮ ಈ ಕ್ಯೂಟ್​ನೆಸ್​ನ ಹೃದಯ ತಡೆದುಕೊಳ್ಳುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಕ್ಯೂಟ್ ಗರ್ಲ್​ ಈಗ ಹಾರ್ಡ್ ವರ್ಕಿಂಗ್ ಗರ್ಲ್ ಆಗಿದ್ದಾರೆ’ ಎಂದು ಕಮೆಂಟ್ ಮಾಡಿದ್ದಾರೆ.

ಸಾರಾ ಅಲಿ ಖಾನ್ ಅವರು ಈ ಮೊದಲು ಕೂಡ ಅನೇಕ ಬಾರಿ ಬಾಲ್ಯದ ಫೋಟೋ ಹಂಚಿಕೊಂಡಿದ್ದರು. ಈ ಫೋಟೋಗಳನ್ನು ಫ್ಯಾನ್ಸ್ ಇಷ್ಟಪಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಸಾರಾ ವಿವಿಧ ಬಗೆಯ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ. ವರ್ಕೌಟ್ ಹಾಗೂ ಟ್ರಿಪ್​ನ ಸಂದರ್ಭದ ಫೋಟೋ ಪೋಸ್ಟ್ ಮಾಡುತ್ತಿರುತ್ತಾರೆ.

ಇದನ್ನೂ ಓದಿ: ಸಾರಾ ಅಲಿ ಖಾನ್​ಗೆ ಜನ್ಮದಿನದ ಸಂಭ್ರಮ; ಇಲ್ಲಿದೆ ಖಾನ್​ ಫ್ಯಾಮಿಲಿ ಟ್ರೀ

ಸಾರಾ ಅಲಿ ಖಾನ್ ಅವರು ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರ ಮಗಳು. 2018ರ ‘ಕೇದಾರ್​ನಾಥ್’ ಸಿನಿಮಾ ಮೂಲಕ ಬಣ್ಣದ ಲೋಕ್ಕೆ ಕಾಲಿಟ್ಟರು. ‘ಸಿಂಬಾ’ ಚಿತ್ರದಲ್ಲೂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಅವರ ನಟನೆಯ ‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರ ಒಳ್ಳೆಯ ಕಮಾಯಿ ಮಾಡಿ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:15 pm, Sun, 10 September 23