ಇನ್ಸ್ಟಾಗ್ರಾಮ್ಗೆ ಕಾಲಿಟ್ಟ ಕಾಲಿವುಡ್ ಚೆಲುವೆ ನಯನತಾರಾ; ಮಾಡಿದ ಮೊದಲ ಪೋಸ್ಟ್ ಏನು?
ಕಾಲಿವುಡ್ ಚೆಲುವೆ ನಯನತಾರಾ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಖಾತೆ ತೆರೆದಿದ್ದಾರೆ. ಅಕೌಂಟ್ ಓಪನ್ ಮಾಡಿ ಒಂದು ಗಂಟೆಯೊಳಗೆ 3.50 ಲಕ್ಷ ಹಿಂಬಾಲಕರನ್ನು ಪಡೆದಿದ್ದಾರೆ. ಇದರೊಂದಿಗೆ ‘ಜವಾನ್’ ಚಿತ್ರದ ಟ್ರೇಲರ್ ಅನ್ನು ಹಂಚಿಕೊಂಡು ‘ನನ್ನ ನೆಚ್ಚಿನ ನಟನೊಂದಿಗೆ ಮೊದಲ ಸಿನಿಮಾ’ ಎಂದು ಅವರು ಬರೆದುಕೊಂಡಿದ್ದಾರೆ.
‘ಲೇಡಿ ಸೂಪರ್ ಸ್ಟಾರ್’ ನಯನತಾರಾ (Nayanthara) ಒಳ್ಳೆಯ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಾರೆ. ಖಾಸಗಿ ಬದುಕು ಹಾಗೂ ನಟನೆಯನ್ನು ಬೇರೆ ಬೇರೇ ತಕ್ಕಡಿಯಿಂದ ತೂಗುತ್ತಾರೆ. ನಟನೆ ಹಾಗೂ ಖಾಸಗಿ ಬದುಕಿನಿಂದ ಸಾಕಷ್ಟು ಅಂತರವನ್ನೂ ಕಾಯ್ದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ನಟಿ, ತಮ್ಮ ವೈಯಕ್ತಿಕ ಬದುಕಿನ ಕ್ಷಣಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಆದರೆ ಈಗ ನಯನತಾರಾ ಅವರು ತಮ್ಮ ಹಳೇ ನಿಯಮಗಳನ್ನೆಲ್ಲ ಮುರಿದ ಸೋಶಿಯಲ್ ಮೀಡಿಯಾಗೆ ಎಂಟ್ರಿ ನೀಡಿದ್ದಾರೆ. ಆಗಸ್ಟ್ 31ರಂದು ಇನ್ಸ್ಟಾಗ್ರಾಮ್ನಲ್ಲಿ ಅವರು ಅಕೌಂಟ್ ಓಪನ್ ಮಾಡಿದ್ದಾರೆ. @nayanthara ಹೆಸರಿನಲ್ಲಿ ಅವರು (Nayanthara Instagram) ಖಾತೆ ತೆರೆದಿದ್ದಾರೆ. ಸ್ವಲ್ಪ ಸಮಯದಲ್ಲೇ ಅವರು 4.38 ಲಕ್ಷ ಹಿಂಬಾಲಕರನ್ನು ಪಡೆದಿದ್ದಾರೆ.
ನಯನತಾರಾ ಅವರು ಇನ್ಸ್ಟಾಗ್ರಾಮ್ ಖಾತೆ ತೆರೆಯುತ್ತಿದ್ದಂತೆಯೇ ಮೂರು ಪೋಸ್ಟ್ ಮಾಡಿದ್ದಾರೆ. ‘ಜೈಲರ್’ ಸಿನಿಮಾದ ಮ್ಯೂಸಿಕ್ಗೆ ಮಕ್ಕಳನ್ನು ಎತ್ತಿಕೊಂಡು ಬರುತ್ತಿರುವ ದೃಶ್ಯದ ರೀಲ್ಸ್ ಮಾಡಿದ್ದಾರೆ. ‘Naan vandhutaen nu sollu…’ ಎಂಬ ‘ಕಬಾಲಿ’ ಸಿನಿಮಾದ ಡೈಲಾಗ್ ಅನ್ನು ಕ್ಯಾಪ್ಶನ್ನಲ್ಲಿ ಬರೆದುಕೊಂಡಿದ್ದಾರೆ. ಇವರ ಈ ಪೋಸ್ಟ್ಗೆ ನಯನತಾರ ಗಂಡ ವಿಘ್ನೇಶ್ ಶಿವನ್ ಕಮೆಂಟ್ ಮಾಡಿ, ‘ಇನ್ಸ್ಟಾಗ್ರಾಮ್ಗೆ ಸ್ವಾಗತ’ ಎಂದಿದ್ದಾರೆ. ನಯನತಾರಾ ಅವರು ‘ಜವಾನ್’ ಚಿತ್ರದ ಟ್ರೇಲರ್ ಅನ್ನು ಹಂಚಿಕೊಂಡ ‘ನನ್ನ ನೆಚ್ಚಿನ ನಟನೊಂದಿಗೆ ಮೊದಲ ಸಿನಿಮಾ’ ಎಂದು ಬರೆದುಕೊಂಡಿದ್ದಾರೆ.
View this post on Instagram
ಈವರೆಗೆ ನಯನತಾರಾ ಇನ್ಸ್ಟಾಗ್ರಾಮ್ನಲ್ಲಿ 5 ಜನರನ್ನು ಹಿಂಬಾಲಿಸುತ್ತಿದ್ದಾರೆ. ವಿಘ್ನೇಶ್ ಶಿವನ್, ಶಾರುಖ್ ಖಾನ್, ನಿರ್ಮಾಣ ಸಂಸ್ಥೆಯಾದ ರೌಡಿ ಪಿಕ್ಚರ್ಸ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್, ಮಿಷೆಲ್ ಒಬಾಮಾ ಈ ಪಟ್ಟಿಯಲ್ಲಿದ್ದಾರೆ. ಇನ್ಸ್ಟಾಗ್ರಾಮ್ ಅಕೌಂಟ್ ಒಪನ್ ಮಾಡಿ ಒಂದು ಗಂಟೆಯೊಳಗೆ 3.50 ಲಕ್ಷ ಹಿಂಬಾಲಕರನ್ನು ನಯನತಾರಾ ಪಡೆದಿದ್ದಾರೆ.
ಇದನ್ನೂ ಓದಿ: Nayanthara: ಮಕ್ಕಳ ಜೊತೆ ಓಣಂ ಸಂಭ್ರಮ: ಫೋಟೋ ಹಂಚಿಕೊಂಡ ನಯನತಾರಾ
ಈವರೆಗೂ ಸಾಮಾಜಿಕ ಜಾಲತಾಣಗಳಿಂದ ದೂರವೇ ಇದ್ದ ನಯನತಾರಾ ಅವರು ಈಗ ಇನ್ಸ್ಟಾಗ್ರಾಮ್ನಲ್ಲಿ ಅಕೌಂಟ್ ಓಪನ್ ಮಾಡಿರುವುದನ್ನು ನೋಡಿ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಮೊದಲು ಅವರ ಪತಿ ವಿಘ್ನೇಶ್ ಶಿವನ್ ಅವರು ನಯನತಾರಾ ಬಗೆಗಿನ ಕೆಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಹಿಂದೆ ಕೆಲವು ಸಂದರ್ಶನಗಳಲ್ಲಿ ಶಾರುಖ್ ಖಾನ್ ತಮ್ಮ ನೆಚ್ಚಿನ ಹೀರೋ ಎಂದು ನಯನತಾರಾ ಹೇಳಿದ್ದರು. ‘ಕಭಿ ಖುಷಿ ಕಭಿ ಗಮ್’, ‘ಕುಚ್ ಕುಚ್ ಹೊತಾ ಹೇ’ ತಮ್ಮ ನೆಚ್ಚಿನ ಸಿನಿಮಾಗಳು ಎಂದು ಅವರು ತಿಳಿಸಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.