ಭಾನುವಾರ ಒಂದೇ ದಿನ 82 ಕೋಟಿ ರೂಪಾಯಿ ಗಳಿಸಿದ ‘ಜವಾನ್’ ಸಿನಿಮಾ; ಒಟ್ಟೂ ಕಲೆಕ್ಷನ್ ಎಷ್ಟು?
Jawan Day 4 Collection: ಭಾನುವಾರ ‘ಜವಾನ್’ ಸಿನಿಮಾ 81 ಕೋಟಿ ರೂಪಾಯಿ ಬಾಚಿಕೊಂಡಿದೆ. ಹಿಂದಿ ವರ್ಷನ್ನಿಂದ 72 ಕೋಟಿ ರೂಪಾಯಿ ಹಾಗೂ ತಮಿಳು-ತೆಲುಗು ವರ್ಷನ್ನಿಂದ 9 ಕೋಟಿ ರೂಪಾಯಿ ಸಂಪಾದನೆ ಆಗಿದೆ. ಭಾರತದಲ್ಲಿ ಚಿತ್ರದ ಒಟ್ಟಾರೆ ಗಳಿಕೆ 287 ಕೋಟಿ ರೂಪಾಯಿ ಆಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಗಳಿಕೆ ಮಾಡಲಿದೆ.
‘ಜವಾನ್’ ಸಿನಿಮಾ (Jawan Movie) ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಭಾನುವಾರ (ಸೆಪ್ಟೆಂಬರ್ 10) ಈ ಚಿತ್ರ ಬರೋಬ್ಬರಿ 81 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾದ ಕಲೆಕ್ಷನ್ 287 ಕೋಟಿ ರೂಪಾಯಿ ಆಗಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ 500 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಶಾರುಖ್ ಖಾನ್ ಹೊಸ ದಾಖಲೆ ಬರೆದಿದ್ದಾರೆ. ಇನ್ನೂ ಹಲವು ವಾರ ಈ ಸಿನಿಮಾ ಅಬ್ಬರಿಸಲಿದೆ. ‘ಪಠಾಣ್’ ಬಳಿಕ ಶಾರುಖ್ ಖಾನ್ (Shah Rukh Khan) ಅವರು ಮತ್ತೊಂದು ಗೆಲುವು ಕಂಡಿದ್ದಾರೆ.
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ‘ಜವಾನ್’ ಸಿನಿಮಾ ಗುರುವಾರ (ಸೆಪ್ಟೆಂಬರ್ 7) ರಿಲೀಸ್ ಆಯಿತು. ಮೊದಲ ದಿನ ಈ ಚಿತ್ರ ಗಳಿಕೆ ಮಾಡಿದ್ದು ಬರೋಬ್ಬರಿ 75 ಕೋಟಿ ರೂಪಾಯಿ. ಹಿಂದಿಯಲ್ಲಿ 65 ಕೋಟಿ ರೂಪಾಯಿ ಹಾಗೂ ತಮಿಳು, ತೆಲುಗಿನಲ್ಲಿ 10 ಕೋಟಿ ರೂಪಾಯಿ ಹಣವನ್ನು ಚಿತ್ರ ಗಳಿಕೆ ಮಾಡಿಕೊಂಡಿತು. ಶುಕ್ರವಾರ (ಸೆಪ್ಟೆಂಬರ್ 8) 53.23 ಕೋಟಿ ರೂಪಾಯಿ ಹಾಗೂ ಶನಿವಾರ 77.83 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾನುವಾರ ಎಲ್ಲಾ ದಾಖಲೆಗಳನ್ನು ಸಿನಿಮಾ ಮುರಿದಿದೆ.
ಭಾನುವಾರ ‘ಜವಾನ್’ ಸಿನಿಮಾ 81 ಕೋಟಿ ರೂಪಾಯಿ ಬಾಚಿಕೊಂಡಿದೆ. ಹಿಂದಿ ವರ್ಷನ್ನಿಂದ 72 ಕೋಟಿ ರೂಪಾಯಿ ಹಾಗೂ ತಮಿಳು-ತೆಲುಗು ವರ್ಷನ್ನಿಂದ 9 ಕೋಟಿ ರೂಪಾಯಿ ಸಂಪಾದನೆ ಆಗಿದೆ. ಭಾರತದಲ್ಲಿ ಚಿತ್ರದ ಒಟ್ಟಾರೆ ಗಳಿಕೆ 287 ಕೋಟಿ ರೂಪಾಯಿ ಆಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಗಳಿಕೆ ಮಾಡಲಿದೆ. ‘ಜವಾನ್ ಇತಿಹಾಸ ಸೃಷ್ಟಿಸಿದೆ. ಭಾನುವಾರ 28,75,961 ಟಿಕೆಟ್ಗಳು ಮಾರಾಟ ಆಗಿವೆ’ ಎಂದು ಟ್ರೇಡ್ ವಿಶ್ಲೇಷಕ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ.
In 4 days, #Jawan joins the ₹ 500 Crs+ WW Grossers club! 🔥
— Ramesh Bala (@rameshlaus) September 11, 2023
ಇದನ್ನೂ ಓದಿ: ‘ಅಂಡರ್ವಲ್ಡ್ ಮುಂದೆ ಮಂಡಿಯೂರದ ಏಕೈಕ ಬಾಲಿವುಡ್ ಸ್ಟಾರ್ ಶಾರುಖ್ ಖಾನ್’
ಶಾರುಖ್ ಖಾನ್, ನಯನತಾರಾ ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರಿಯಾಮಣಿ, ಸಂಜಯ್ ದತ್, ಸಾನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್, ದೀಪಿಕಾ ಪಡುಕೋಣೆ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಅಟ್ಲಿ ಅವರ ನಿರ್ದೇಶನ ಚಿತ್ರಕ್ಕಿದೆ. ದಕ್ಷಿಣ ಭಾರತದ ಸ್ಟೈಲ್ನಲ್ಲಿ ಸಿನಿಮಾ ಮೂಡಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ