ಹಿಂದುತ್ವಕ್ಕೆ ನಿಷ್ಠನಾಗಿದ್ದೇನೆ ಎಂಬುದನ್ನು ಸಾಬೀತು ಮಾಡಿದ್ರೆ ಮಾತ್ರ ನಟಿ ಸಾರಾಗೆ ಕೇದರನಾಥಕ್ಕೆ ಎಂಟ್ರಿ

ಚಾರ್ ಧಾಮ್ ಯಾತ್ರೆ 2026 ಏಪ್ರಿಲ್ 19ರಿಂದ ಆರಂಭವಾಗಲಿದ್ದು, ಕೇದಾರನಾಥ ಮತ್ತು ಬದರಿನಾಥ ದೇಗುಲಗಳಿಗೆ ಹೊಸ ನಿಯಮ ಜಾರಿಯಾಗಿದೆ. ಇನ್ನು ಮುಂದೆ ಹಿಂದೂಯೇತರ ಭಕ್ತರು "ನಾನು ಸನಾತನಿ" ಎಂದು ಅಫಿಡವಿಟ್ ನೀಡಿದ ನಂತರವೇ ಪ್ರವೇಶಿಸಬಹುದು. ನಟಿ ಸಾರಾ ಅಲಿ ಖಾನ್ ಸಹ ಈ ನಿಯಮಕ್ಕೆ ಒಳಪಡುತ್ತಾರೆ. ಸುರಕ್ಷತೆ ಕಾರಣದಿಂದ ಮೊಬೈಲ್ ಫೋನ್‌ಗಳಿಗೂ ನಿರ್ಬಂಧ ಹೇರಲಾಗಿದೆ.

ಹಿಂದುತ್ವಕ್ಕೆ ನಿಷ್ಠನಾಗಿದ್ದೇನೆ ಎಂಬುದನ್ನು ಸಾಬೀತು ಮಾಡಿದ್ರೆ ಮಾತ್ರ ನಟಿ ಸಾರಾಗೆ ಕೇದರನಾಥಕ್ಕೆ ಎಂಟ್ರಿ
ಸಾರಾ ಅಲಿ ಖಾನ್

Updated on: Mar 18, 2026 | 11:39 AM

ಚಾರ್ ಧಾಮ್ ಯಾತ್ರೆ 2026 ಇನ್ನೇನು ಆರಂಭ ಆಗಲಿದೆ. ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಅವರು ಪ್ರತಿ ವರ್ಷವೂ ಅಲ್ಲಿಗೆ ತೆರಳುತ್ತಾರೆ. ಈ ಬಾರಿಯೂ ಅವರು ದೇವಸ್ಥಾನಕ್ಕೆ ಹೋಗುವ ಆಲೋಚನೆಯಲ್ಲಿ ಇದ್ದರು ಎನ್ನಲಾಗಿದೆ. ಅದಕ್ಕೂ ಮೊದಲೇ ದೇವಸ್ಥಾನದಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದೆ. ವಿಶೇಷವಾಗಿ ಹಿಂದೂಯೇತರ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ ಮಾಡಲಾಗಿದೆ.

ಬದರಿನಾಥ ಮತ್ತು ಕೇದಾರನಾಥಕ್ಕೆ ಬರುವ ಸನಾತನಿಗಳಲ್ಲದವರು ದೇವಾಲಯವನ್ನು ಪ್ರವೇಶಿಸಲು ಅಫಿಡವಿಟ್ ನೀಡಬೇಕಾಗುತ್ತದೆ ಎಂದು ಕೇದಾರನಾಥ ದೇವಾಲಯ ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ಹೇಳಿದ್ದಾರೆ. ಈ ಅಫಿಡವಿಟ್‌ನಲ್ಲಿ, ‘ನಾನು ಸನಾತನಿ’ ಎಂದು ಹೇಳುವುದು ಅಗತ್ಯವಾಗಿರುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ದೇವಾಲಯ ಸಮಿತಿಯೇ ಮಾಡುತ್ತದೆ ಎಂದು ಹೇಳಿದ್ದಾರೆ.

ಈ ವೇಳೆ ಸಾರಾ ಅಲಿ ಖಾನ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಲಾಗಿದೆ. ‘ದರ್ಶನಕ್ಕಾಗಿ ದೇವಸ್ಥಾನಕ್ಕೆ ಭೇಟಿ ನೀಡಲು ಅವರು ಬಯಸಿದರೆ ಅಫಿಡವಿಟ್ ಸಲ್ಲಿಕೆ ಮಾಡಬೇಕು. ಆಗ ನಾವು ಅವರನ್ನು ದೇವಸ್ಥಾನಕ್ಕೆ ಬಿಟ್ಟುಕೊಳ್ಳುತ್ತೇವೆ’ ಎಂದು ಮಾಹಿತಿ ನೀಡಲಾಗಿದೆ. 2026ರ ಚಾರ್‌ಧಾಮ್ ಯಾತ್ರೆ ಏಪ್ರಿಲ್ 19 ರಿಂದ ಪ್ರಾರಂಭವಾಗಲಿದ್ದು, ಈ ವರ್ಷ ಯಾತ್ರೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಯಾತ್ರೆಯ ಸುರಕ್ಷತೆ ಮತ್ತು ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ದೇವಾಲಯದ ಆವರಣದಲ್ಲಿ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದರ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಭಕ್ತರಿಗೆ ವಿಶೇಷ ರೂಮ್ ವ್ಯವಸ್ಥೆ ಮಾಡಲಾಗುವುದು. ಅಲ್ಲಿ ಮೊಬೈಲ್ ಫೋನ್‌ಗಳನ್ನು ಇಡಬೇಕಾಗುತ್ತದೆ. ಗಮನಾರ್ಹವಾಗಿ, ಈ ನಿಯಮವು ವಿಐಪಿಗಳಿಗೂ ಅನ್ವಯಿಸುತ್ತದೆ.

ಇದನ್ನೂ ಓದಿ: ‘ಮೆಟ್ರೊ’ ಪ್ರಚಾರ ಹೇಗಿತ್ತು? ಸಾರಾ ಅಲಿ ಖಾನ್​ ವಿಡಿಯೋ ನೋಡಿ

ಸಾರಾ ಅಲಿ ಖಾನ್ ಅವರು ಮೊದಲ ಬಾರಿಗೆ ಕೇದಾರನಾಥ್​ಗೆ ಭೇಟಿ ನೀಡಿದ್ದು 2017ರಲ್ಲಿ. ‘ಕೇದರಾನಾಥ್’ ಸಿನಿಮಾ ಶೂಟ್​​ಗಾಗಿ ಅವರು ಅಲ್ಲಿ ತೆರಳಿದ್ದರು. ಅದಾದ ಬಳಿಕ ಅವರು ಪ್ರತಿವರ್ಷವೂ ಇಲ್ಲಿಗೆ ಭೇಟಿ ಕೊಡುತ್ತಿದ್ದರು. ಈಗ ಅವರು ಹಿಂದುತ್ವ ಸಾಬೀತು ಮಾಡಿ ಇಲ್ಲಿಗೆ ಬೇಟಿ ಕೊಡಬೇಕಾದ ಪರಿಸ್ಥಿತಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us