ಈ ನಟಿಯ ಎರಡು ಸಿನಿಮಾ ಆಸ್ಕರ್​ಗೆ, ಅವಮಾನಗಳ ದಾಟಿ ಎದ್ದು ಬಂದ ನಟಿ ಈಕೆ

ಈ ನಟಿ ನಟಿಸಿರುವ ಎರಡು ಸಿನಿಮಾಗಳು ಒಂದೇ ಬಾರಿ ಆಸ್ಕರ್​ ಪ್ರವೇಶಿಸಿದೆ. ಅಂದಹಾಗೆ ಈ ನಟಿ ಹಲವು ಸಂಘರ್ಷಗಳನ್ನು ಎದುರಿಸಿ ನಟಿಯಾಗಿ ನೆಲೆ ನಿಂತವರು. ನಟಿಯ ಜರ್ನಿ ಬಗ್ಗೆ ಮಾಹಿತಿ ಇಲ್ಲಿದೆ.

ಈ ನಟಿಯ ಎರಡು ಸಿನಿಮಾ ಆಸ್ಕರ್​ಗೆ, ಅವಮಾನಗಳ ದಾಟಿ ಎದ್ದು ಬಂದ ನಟಿ ಈಕೆ
Follow us
|

Updated on: Oct 01, 2024 | 12:29 PM

ಭಾರತದಿಂದ ಪ್ರತಿ ವರ್ಷವೂ ಒಂದು ಸಿನಿಮಾ ಅಧಿಕೃತವಾಗಿ ಆಸ್ಕರ್​ಗೆ ಕಳಿಸಲಾಗುತ್ತದೆ. ಹೀಗೆ ಕಳಿಸಲ್ಪಟ್ಟ ಸಿನಿಮಾಗಳಲ್ಲಿ ಅತಿ ಹೆಚ್ಚು ಬಾರಿ ಕಳಿಸಲಾಗಿರುವುದು ಕಮಲ್ ಹಾಸನ್ ನಟಿಸಿರುವ ಸಿನಿಮಾಗಳನ್ನು, ಈ ವರೆಗೆ ಕಮಲ್ ನಟಿಸಿರುವ ಆರು ಸಿನಿಮಾಗಳನ್ನು ಆಸ್ಕರ್​ಗೆ ಕಳಿಸಲಾಗಿದೆ. ಆದರೆ ಈ ಬಾರಿ ಭಾರತದ ನಟಿಯೊಬ್ಬರು ಇಂಥಹಾ ಅಪರೂಪದ ಗೌರವಕ್ಕೆ ಭಾಜನರಾಗಿದ್ದಾರೆ. ಛಾಯಾ ಕದಮ್ ನಟಿಸಿರುವ ಎರಡು ಸಿನಿಮಾಗಳು ಒಂದೇ ಬಾರಿ ಆಸ್ಕರ್​ಗೆ ಕಳಿಸಲ್ಪಡುತ್ತಿವೆ. ಭಾರತದ ಒಬ್ಬರೇ ನಟರ ಎರಡು ಸಿನಿಮಾಗಳು ಒಂದೇ ಆಸ್ಕರ್​ಗೆ ಕಳಿಸಲ್ಪಟ್ಟಿರುವುದು ಬಹುಷಃ ಇದೇ ಮೊದಲೇನೊ? ಅಂದಹಾಗೆ ನಟಿ ಛಾಯಾ ಕದಮ್​ ತೀರಾ ಸಾಮಾನ್ಯ ಹಿನ್ನೆಲೆಯಿಂದ ಬಂದು ಈ ಮಟ್ಟಕ್ಕೆ ಏರಿದ ನಟಿ. ಒಂದು ಕಾಲದಲ್ಲಿ ದಿನಕ್ಕೆ 250 ರೂಪಾಯಿ ಸಂಬಳಕ್ಕಾಗಿ ದುಡಿಯುತ್ತಿದ್ದ ನಟಿ ಈಗ ಪ್ರತಿಷ್ಠಿತ ಆಸ್ಕರ್​ ಅಂಗಳಕ್ಕೆ ಹೋಗುತ್ತಿದ್ದಾರೆ.

ಛಾಯಾ ಕದಮ್, ಮೂಲತಃ ಮರಾಠಿ ನಟಿ. ಚಿತ್ರರಂಗದ ಪ್ರಕಾರ ನಾಯಕಿಗೆ ಇರಬೇಕಾದ ಯಾವ ಅಂಶಗಳೂ ಇಲ್ಲದ ಆದರೆ ನಟನೆ ಒಂದನ್ನೇ ನೆಚ್ಚಿಕೊಂಡು ಚಿತ್ರರಂಗಕ್ಕೆ ಕಾಲಿಟ್ಟವರು ಛಾಯಾ. ನಾಯಕಿಯರಿಂದ ಚಿತ್ರರಂಗ ನಿರೀಕ್ಷಿಸುವ ಬಿಳಿ ಚರ್ಮ್, ಗ್ಲಾಮರಸ್, ದೇಹದ ಅಂಕು-ಡೊಂಕು ಯಾವುದೂ ಇಲ್ಲದ ಆದರೆ ಕೇವಲ ನಟನೆ ಒಂದರಿಂದಲೇ ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಉಳಿದುಕೊಂಡು ಬಂದಿರುವ ನಟಿ ಛಾಯಾ ಕದಮ್. ಇವರ ನಟನೆಯ ‘ಲಾಪತಾ ಲೇಡೀಸ್’ ಮತ್ತು ‘ಆಲ್ ವಿ ಇಮ್ಯಾಜಿನ್ಡ್ ಆಸ್ ಲೈಟ್’ ಸಿನಿಮಾಗಳು ಆಸ್ಕರ್​ಗೆ ಕಳಿಸ್ಪಟ್ಟಿವೆ.

ಛಾಯಾ ಕದಮ್, ಮುಂಬೈನವರು. ಬಡ ಕುಟುಂಬದಲ್ಲಿ ಜನನ. ತಂದೆ ಮಿಲ್​ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ. ಬಡತನದಲ್ಲೇ ಬಾಲ್ಯ ಕಳೆದ ಛಾಯಾ ಕದಮ್​, ಶಾಲಾ ದಿನಗಳಲ್ಲಿ ಒಳ್ಳೆಯ ಕಬಡ್ಡಿ ಆಟಗಾರರಾಗಿದ್ದರು. ರಾಜ್ಯ ಮಟ್ಟದ ಆಟಗಾರ್ತಿಯಾಗಿದ್ದ ಛಾಯಾ, 12ನೇ ತರಗತಿಯಲ್ಲಿ ಫೇಲ್ ಆದ ಬಳಿಕ ಕಬಡ್ಡಿ ಆಟಕ್ಕೆ ಎಳ್ಳು ನೀರು ಬಿಡಬೇಕಾಯ್ತು. ಅದಾದ ಬಳಿಕ ಟೆಕ್ಸ್​ಟೈಲ್ಸ್ ಡಿಸೈನ್ ಕೋರ್ಸ್ ಸೇರಿಕೊಂಡರು. 2001 ರಲ್ಲಿ ಅವರ ಜೀವನದ ದೊಡ್ಡ ಆಘಾತ ಎದುರಾಯ್ತು. ಕೆಲವೇ ತಿಂಗಳ ಅವಧಿಯಲ್ಲಿ ಕುಟುಂಬಕ್ಕೆ ಆಧಾರವಾಗಿದ್ದ ತಂದೆ ಹಾಗೂ ಅಣ್ಣ ಇಬ್ಬರೂ ಸಾವನ್ನಪ್ಪಿದರು. ತೀವ್ರ ಆಘಾತದಲ್ಲಿದ್ದ ಛಾಯಾ, ಖಿನ್ನತೆಗೆ ಜಾರಿದ್ದರು. ಆಗೊಮ್ಮೆ ಅವರ ಕಣ್ಣಿಗೆ ನಟನಾ ತರಬೇತಿ ಶಿಬಿರವೊಂದರ ಜಾಹೀರಾತು ಕಣ್ಣಿಗೆ ಬಿತ್ತು. ಖಿನ್ನತೆಯಿಂದ ಹೊರಗೆ ಬರಲು ಶಿಬಿರಕ್ಕೆ ಸೇರಿದರು. ಅಲ್ಲಿಂದ ಅವರ ಹಾದಿ ಸ್ಪಷ್ಟವಾಯ್ತು.

ಇದನ್ನೂ ಓದಿ:ಮೊದಲ ಸಿನಿಮಾದಲ್ಲೇ ಆಸ್ಕರ್​ ಮೇಲೆ ಕಣ್ಣಿಟ್ಟ ‘ಲಾಪತಾ ಲೇಡೀಸ್​’ ನಟಿ ಪ್ರತಿಭಾ

ಶಿಬಿರದಲ್ಲಿ ಅವರಿಗೆ ಮರಾಠಿ ಸಾಹಿತ್ಯ ಹಾಗೂ ನಾಟಕಗಳ ಮೇಲೆ ಒಲವಾಯ್ತು, ನಾಟಕಗಳಲ್ಲಿ ನಟಿಸಲು ಆರಂಭಿಸಿದರು. ಆ ನಂತರ ಸಿನಿಮಾಗಳಿಗೆ ಬಂದಾಗ ತೀರ ಸಣ್ಣ ಪುಟ್ಟ ಪಾತ್ರಗಳಷ್ಟೆ ಅವರಿಗೆ ಸಿಗುತ್ತಿತ್ತಂತೆ. ದಿನಕ್ಕೆ 250 ರೂಪಾಯಿ ಸಂಬಳ. ಹಲವು ದಿನಗಳು ಕೆಲಸವೇ ಇಲ್ಲದೆ ಕಳೆದರಂತೆ ಛಾಯಾ. 2009 ರಲ್ಲಿ ಕೆಲ ಮರಾಠಿ ಕಿರುಚಿತ್ರಗಳಲ್ಲಿ ನಟಿಸಿ ಆತ್ಮವಿಶ್ವಾಸ ಗಿಟ್ಟಿಸಿಕೊಂಡ ಛಾಯಾ, ಸಿನಿಮಾಗಳಿಗೆ ಆಡಿಷನ್ ಕೊಡುತ್ತಿದ್ದರಂತೆ. 2010 ‘ಬೈಮಾನಸ್’ ಹೆಸರಿನ ಸಿನಿಮಾದಲ್ಲಿ ಅವಕಾಶ ಸಿಕ್ಕಿತಾದರೂ ಆ ಸಿನಿಮಾ ಬಿಡುಗಡೆ ಆಗಲೇ ಇಲ್ಲ. ಅದಾದ ಬಳಿಕ ಆಗೊಮ್ಮೆ ಈಗೊಮ್ಮೆ ಮರಾಠಿ ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರಿಗೆ ಹೆಸರು ತಂದುಕೊಟ್ಟಿದ್ದು, 2013 ರಲ್ಲಿ ಬಿಡುಗಡೆ ಆದ ನಾಗರಾಜ್ ಮಂಜುಳೆ ನಿರ್ದೇಶನದ ‘ಫೆಂಡ್ರಿ’ ಸಿನಿಮಾ.

‘ಫೆಂಡ್ರಿ’ ಸಿನಿಮಾದ ಬಳಿಕ ಛಾಯಾ ಅವರಿಗೆ ಸತತವಾಗಿ ಅವಕಾಶಗಳು ಸಿಗುತ್ತಲೇ ಹೋದವು. ‘ಸೈರಾಟ್’, ‘ಅಂಧಾದುನ್’, ‘ನೂಡ್’ ಸಿನಿಮಾದ ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಯ್ತು. ಆಲಿಯಾ ಭಟ್​ರ ‘ಗಂಗೂಬಾಯಿ ಕಾಠಿಯಾವಾಡಿ’, ಅಮಿತಾಬ್ ಬಚ್ಚನ್​ರ ‘ಝುಂಡ್’ ಹೀಗೆ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಛಾಯಾ, 2024 ರಲ್ಲಿ ‘ಲಾಪತಾ ಲೇಡೀಸ್’ ಹಾಗೂ ‘ಆಲ್ ವಿ ಇಮ್ಯಾಜಿನ್ಡ್ ಆಸ್ ಲೈಟ್’ ಸಿನಿಮಾಗಳಲ್ಲಿ ನಟಿಸಿದರು. ಈ ಎರಡೂ ಸಿನಿಮಾಗಳು ಈಗ ಆಸ್ಕರ್​ಗೆ ಕಳಿಸಲ್ಪಟ್ಟಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು