Priyanka Chopra: ವಿವಾದದ ಬೆನ್ನಲ್ಲೇ ಮುಂಬೈನಲ್ಲಿನ 7 ಕೋಟಿ ರೂಪಾಯಿ ಆಸ್ತಿ ಮಾರಿಕೊಂಡ ಪ್ರಿಯಾಂಕಾ ಚೋಪ್ರಾ

ಇಷ್ಟು ವರ್ಷಗಳ ಕಾಲ ಈ ಪ್ರಾಪರ್ಟಿಯನ್ನು ಪ್ರಿಯಾಂಕಾ ಚೋಪ್ರಾ ಅವರು ಬಾಡಿಗೆಗೆ ನೀಡಿದ್ದರು. ಆದರೆ ಈಗ ಮಾರಾಟ ಮಾಡಿದ್ದಾರೆ. ಅವರ ಪರವಾಗಿ ತಾಯಿ ಮಧು ಚೋಪ್ರಾ ಈ ವ್ಯವಹಾರ ನಡೆಸಿದ್ದಾರೆ.

Priyanka Chopra: ವಿವಾದದ ಬೆನ್ನಲ್ಲೇ ಮುಂಬೈನಲ್ಲಿನ 7 ಕೋಟಿ ರೂಪಾಯಿ ಆಸ್ತಿ ಮಾರಿಕೊಂಡ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್

Updated on: Apr 17, 2023 | 7:15 AM

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಇತ್ತೀಚಿನ ದಿನಗಳಲ್ಲಿ ವಿವಾದದ ಕಾರಣದಿಂದ ಸುದ್ದಿ ಆಗಿದ್ದಾರೆ. ತುಂಬ ವರ್ಷಗಳ ಹಿಂದೆ ಬಾಲಿವುಡ್​ನಲ್ಲಿ ತಾವು ಅನುಭವಿಸಿದ ಕಷ್ಟದ ಬಗ್ಗೆ ಈಗ ಮಾತನಾಡಿದ್ದಕ್ಕಾಗಿ ಅವರು ಟೀಕೆಗೆ ಒಳಗಾದರು. ಕೆಲವರು ಅವರಿಗೆ ಬೆಂಬಲ ಸೂಚಿಸಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದರು. ಈ ಎಲ್ಲ ಕಿರಿಕ್​ಗಳ ಬೆನ್ನಲ್ಲೇ ಅವರೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂಬೈನಲ್ಲಿ ತಮಗೆ ಸೇರಿದ ಆಸ್ತಿಯೊಂದನ್ನು ಅವರು ಮಾರಿದ್ದಾರೆ. ಬರೋಬ್ಬರಿ 7 ಕೋಟಿ ರೂಪಾಯಿ ಬೆಲೆ ಬಾಳುವ ಪ್ರಾಪರ್ಟಿಯನ್ನು ಅವರು ಮಾರಾಟ ಮಾಡಿದ್ದಾರೆ. ಈ ಮೂಲಕ ಅವರು ಶಾಶ್ವತವಾಗಿ ಮುಂಬೈ (Mumbai) ಜೊತೆಗಿನ ನಂಟಿಗೆ ವಿದಾಯ ಹೇಳುತ್ತಾರಾ ಎಂಬ ಅನುಮಾನ ಮೂಡಿದೆ. ಸದ್ಯ ಅವರು ಹಿಂದಿಯಲ್ಲಿ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅವರ ಸಂಪೂರ್ಣ ಗಮನ ಹಾಲಿವುಡ್​ ಮೇಲಿದೆ.

2018ರಲ್ಲಿ ನಿಕ್​ ಜೋನಸ್​ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕಕ್ಕೆ ಶಿಫ್ಟ್​ ಆದರು. ಈಗ ಅವರು ಅಲ್ಲಿಯೇ ಸೆಟ್ಲ್​ ಆಗಿದ್ದಾರೆ. ಹಾಲಿವುಡ್​ ಸಿನಿಮಾಗಳಿಂದ ಅವರಿಗೆ ಅವಕಾಶಗಳು ಸಿಗುತ್ತಿವೆ. ಈ ಸಂದರ್ಭದಲ್ಲಿ ಅವರು ಮುಂಬೈನಲ್ಲಿನ ಆಸ್ತಿ ಮಾರಿದ್ದಾರೆ. ಇಷ್ಟು ವರ್ಷಗಳ ಕಾಲ ಆ ಜಾಗವನ್ನು ಅವರು ಬಾಡಿಗೆಗೆ ನೀಡಿದ್ದರು. ಆದರೆ ಈಗ ಮಾರಾಟ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಪರವಾಗಿ ಅವರ ತಾಯಿ ಮಧು ಚೋಪ್ರಾ ಈ ವ್ಯವಹಾರ ನಡೆಸಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ರೀತಿ ಬ್ಯಾಕ್​ಲೆಸ್​ ಆಗಿ ನಟಿಸ್ತಾರಾ ಸಮಂತಾ ರುತ್​ ಪ್ರಭು?

ಇದನ್ನೂ ಓದಿ
Priyanka Chopra: ಫ್ಯಾನ್ಸ್​ ವಾವ್​ ಎನ್ನುವಂತೆ ಗ್ಲಾಮರ್​ ವೇಷ ಧರಿಸಿದ ಪ್ರಿಯಾಂಕಾ ಚೋಪ್ರಾ; ಇಲ್ಲಿವೆ ಫೋಟೋಗಳು
ಶಾಕಿಂಗ್​ ಸತ್ಯದ ಜತೆ ಮೊದಲ ಬಾರಿ ಮಗು ಫೋಟೋ ತೋರಿಸಿದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​
ಪ್ರಿಯಾಂಕಾ ಚೋಪ್ರಾ ಮಗಳ ಹೆಸರು ಮಾಲ್ತಿ ಮೇರಿ ಚೋಪ್ರಾ ಜೋನಸ್​; ಏನು ಇದರ ಅರ್ಥ?
ಕಪ್ಪು ಸೀರೆ ಧರಿಸಿ ‘ಪ್ರೀ ಆಸ್ಕರ್​ ಪಾರ್ಟಿ’ಯಲ್ಲಿ ಮಿಂಚಿದ ‘ದೇಸಿ ಗರ್ಲ್​’ ಪ್ರಿಯಾಂಕಾ ಚೋಪ್ರಾ

ಏನೇ ಎಂದರೂ ಪ್ರಿಯಾಂಕಾ ಚೋಪ್ರಾ ಅವರಿಗೆ ಮುಂಬೈ ನಗರದ ಜೊತೆ ವಿಶೇಷ ನಂಟು ಇದೆ. ಅವರಿಗೆ ಹೆಸರು ಮತ್ತು ಯಶಸ್ಸನ್ನು ತಂದುಕೊಟ್ಟ ನಗರ ಅದು. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ಸಲುವಾಗಿ ಮುಂಬೈಗೆ ಬಂದಿದ್ದ ಅವರು ಕೆಲವು ದಿನಗಳ ಕಾಲ ಇಲ್ಲಿಯೇ ಉಳಿದುಕೊಂಡಿದ್ದರು. ಮಗಳು ಮಾಲ್ತಿ ಮೇರಿ ಜೋನಸ್​ ಚೋಪ್ರಾ ಜೊತೆ ಅವರು ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ: Priyanka Chopra: ಮುಂಬೈನಲ್ಲಿ ಮಗಳ ಜೊತೆ ಗಣಪತಿ ದೇವರ ದರ್ಶನ ಪಡೆದ ನಟಿ ಪ್ರಿಯಾಂಕಾ ಚೋಪ್ರಾ; ಇಲ್ಲಿದೆ ಫೋಟೋ

ಹಿಂದಿ ಚಿತ್ರರಂಗದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಹಲವು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. 2002ರಲ್ಲಿ ಬಾಲಿವುಡ್​ಗೆ ಕಾಲಿಟ್ಟ ಅವರು ಸ್ಟಾರ್​ ನಟಿಯಾಗಿ ಮೆರೆದರು. ‘ಬಾಜಿ ರಾವ್​ ಮಸ್ತಾನಿ’ ರೀತಿಯ ಸೂಪರ್ ಹಿಟ್​ ಸಿನಿಮಾಗಳನ್ನು ನೀಡಿದರು. 2016ರಲ್ಲಿ ಬಂದ ‘ಜೈ ಗಂಗಾಜಲ್​’ ಸಿನಿಮಾವೇ ಕೊನೇ. ಆ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ಹಿಂದಿಯ ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ. ಅವರು ಮತ್ತೆ ಬಾಲಿವುಡ್​ಗೆ ಕಮ್​ಬ್ಯಾಕ್​ ಮಾಡಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ. ಆದರೆ ಅಭಿಮಾನಿಗಳ ಆಸೆ ಸದ್ಯಕ್ಕಂತೂ ಈಡೇರುವಂತೆ ಕಾಣುತ್ತಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.