252 ಕೋಟಿ ರೂ. ಡ್ರಗ್ ಕೇಸ್ನಲ್ಲಿ ಶ್ರದ್ಧಾ ಕಪೂರ್ ಹೆಸರು; ಇದೆ ದಾವೂದ್ ಲಿಂಕ್
Drug Case: ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ 252 ಕೋಟಿ ರೂ. ಡ್ರಗ್ಸ್ ಪ್ರಕರಣದಲ್ಲಿ ನಟಿ ಶ್ರದ್ಧಾ ಕಪೂರ್, ಸಿದ್ಧಾಂತ್ ಕಪೂರ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳ ಹೆಸರು ತಳುಕು ಹಾಕಿಕೊಂಡಿದೆ. ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ಶೀಘ್ರ ಶ್ರದ್ಧಾ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. 2022ರ 122 ಕೆಜಿ ಎಂಡಿ ಡ್ರಗ್ಸ್ ವಶ ಪ್ರಕರಣದಿಂದ ಈ ಜಾಲ ಬಯಲಾಗಿದೆ.

ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂಗೆ (Dawood Ibrahim) ಸಂಬಂಧಿಸಿದ 252 ಕೋಟಿ ರೂಪಾಯಿ ಡ್ರಗ್ ಕೇಸ್ನಲ್ಲಿ ನಟಿ ಶ್ರದ್ಧಾ ಕಪೂರ್, ಅವರ ಸಹೋದರ ಸಿದ್ಧಾಂತ್ ಕಪೂರ್ ಸೇರಿದಂತೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳ ಹೆಸರು ತಳುಕು ಹಾಕಿಕೊಂಡಿದೆ. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಘ್ರವೇ ಶ್ರದ್ಧಾ ಅವರನ್ನು ಕರೆಸಿ ವಿಚಾರಣೆ ನಡೆಸೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ.
ಬಾಲಿವುಡ್ ಖ್ಯಾತ ನಟಿ ನೋರಾ ಫತೇಹಿ, ಇನ್ಫ್ಲ್ಯುಯೆನ್ಸರ್ ಓರಿ, ನಿರ್ದೇಶಕರಾದ ಅಬ್ಬಾಸ್-ಮುಸ್ತಾನ್, ಇತ್ತೀಚೆಗೆ ಹತ್ಯೆಗೆ ಒಳಗಾದ ಬಾಬಾ ಸಿದ್ಧಿಕಿ ಅವರ ಪುತ್ರ ಜೇಶನ್ ಸಿದ್ದಿಕಿ ತನಿಖೆಗೆ ಒಳಪಡಬೇಕಿದೆ. ತನಿಖಾಧಿಕಾರಿಗಳ ಪ್ರಕಾರ, ಮುಂಬೈ ಮತ್ತು ದುಬೈನಲ್ಲಿ ಸಲೀಂ ಸೋಹಿಲ್ ಶೇಖ್ ಪಾರ್ಟಿಗಳನ್ನು ಆಯೋಜನೆ ಮಾಡಿದ್ದ. ಈತ ಪರಾರಿಯಾಗಿರುವ ಕಳ್ಳಸಾಗಣೆದಾರ ಸಲೀಂ ಡೋಲಾನ ಆಪ್ತ ಎಂದು ನಂಬಲಾಗಿದೆ. ಸಲೀಂ, ದಾವೂದ್‌ನ ಪ್ರಮುಖ ಸಹಚರರಲ್ಲಿ ಒಬ್ಬ.
ಇತ್ತೀಚೆಗೆ ಮಾದಕ ನಿಗ್ರಹ ದಳದವರು ಕೋರ್ಟ್ಗೆ ಈ ಬಗ್ಗೆ ರಿಮಾಂಡ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅವರು ಡ್ರಗ್ ಪಾರ್ಟಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪಾರ್ಟಿಗಳಲ್ಲಿ ದಾವೂದ್ ಇಬ್ರಾಹಿಂ ಸಹೋದರಿ ದಿವಂಗತ ಹಸೀನಾ ಪಾರ್ಕರ್ ಮಗ ಆಲಿಶ್ ಪಾರ್ಕರ್ ಇದರಲ್ಲಿ ಭಾಗವಹಿಸುತ್ತಿದ್ದ.
ಶೇಖ್ ಹೇಳಿಕೆಗಳನ್ನು ಇನ್ನೂ ಪರಿಶೀಲಿಸಲಾಗಿಲ್ಲ. ಈ ತನಿಖೆ ಪ್ರಾಥಮಿಕ ಹಂತದಲ್ಲಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗತ್ಯವಿದ್ದರೆ ಮಾತ್ರ ಹೆಸರಿಸಲಾದ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಲೀಂ ಸೋಹಿಲ್ ಶೇಖ್ ವಿಚಾರಣೆಯಿಂದ ಮತ್ತಷ್ಟು ಸ್ಫೋಟಕ ಮಾಹಿತಿ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಈ ನಟಿಯರ ಮೇಲಿತ್ತು ದಾವೂದ್ ಇಬ್ರಾಹಿಂ ಕಣ್ಣು; ಕೆಲವರು ಕಾಣೆಯೇ ಆದರು..
2022ರಲ್ಲಿ ಮುಂಬೈ ಕ್ರೈಮ್ ಬ್ರ್ಯಾಂಚ್ ಮುಂಬೈ ಸಮೀಪ 122 ಕೆಜಿ ಎಂಡಿ (ಮೆಫೆಡ್ರೋನ್ ಡ್ರಗ್) ವಶಕ್ಕೆ ಪಡೆದಿತ್ತು. ಇದರ ಬೆಲೆ 252 ಕೋಟಿ ರೂಪಾಯಿ ಎನ್ನಲಾಗಿದೆ. ಈ ಪ್ರಕರಣದ ಬೆನ್ನು ಹತ್ತಿದಾಗ ಸಾಕಷ್ಟು ವಿಚಾರಗಳು, ಸಾಕಷ್ಟು ಸೆಲೆಬ್ರಿಟಿಗಳ ಹೆಸರು ತಳುಕು ಹಾಕಿಕೊಂಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




