ಬ್ರಹ್ಮಾಸ್ತ್ರ ಸಿನಿಮಾ ಥಿಯೇಟರ್ಗಳಿಗೆ ಬಂದಾಗಿನಿಂದಲೂ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ(deepika padukone) ಅವರು ನಟಿಸಿದ್ದಾರೆ ಎನ್ನುವ ವದಂತಿಗಳು ಕೇಳಿಬರುತ್ತಿದ್ದು, ಇವತ್ತು ಇದಕ್ಕೆ ತೆರೆ ಎಳೆಯಲಾಗಿದೆ. ಸಿನಿಮಾವು ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ಹಿಟ್ ಆಗುತ್ತಿದ್ದಂತೆ ದೀಪಿಕಾ ರಣಬೀರ್ ಕಪೂರ್ ತಾಯಿಯಾಗಿ ನಟಿಸುತ್ತ್ತಿದ್ದಾರೆ ಎಂದು ಬಹಿರಂಗಪಡಿಸಲಾಗಿದೆ. ಬ್ರಹ್ಮಾಸ್ತ್ರ ಸಿನಿಮಾದ ದೀಪಿಕಾ ಅವರ ಕೆಲವು ವಿಡಿಯೋಗಳು ಹಾಗೂ ಫೋಟೋಗಳನ್ನ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಲಾಗಿದೆ.
ಈ ವರ್ಷ ಬಾಲಿವುಡ್ನಲ್ಲಿ ಭರ್ಜರಿ ಕಮಾಯಿ ಮಾಡಿದ ಕೆಲವೇ ಸಿನಿಮಾಗಳಲ್ಲಿ ಬ್ರಹ್ಮಾಸ್ತ್ರ ಸಿನಿಮಾವು ಒಂದು, ಈ ಚಿತ್ರವು ಅಯಾನ್ ಮುಖರ್ಜಿಯವರ ನಿರ್ದೇಶನದಲ್ಲಿ ಮೂಡಿ ಬಂದಿದೆ. ಅಯಾನ್ ಮುಖರ್ಜಿ ‘ನಾನು ಪಾತ್ರಗಳನ್ನು ಬರೆಯಲು ಪ್ರಾರಂಭಿಸಿದಾಗ, ಪ್ರತಿಯೊಂದು ಪಾತ್ರಗಳ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡಿದ್ದೆ, ಅದನ್ನು ಹೇಗೆ ತೆರೆಯ ಮೇಲೆ ತರಬೇಕು ಎನ್ನುವುದರ ಬಗ್ಗೆ ಅರಿತಿದ್ದೆ‘ ಎಂದಿದ್ದಾರೆ. ಇದರ ಜೊತೆಗೆ ರಣಬೀರ್ ಕಪೂರ್ ನಟನಾಗಿ, ನಿರ್ಮಾಪಕನಾಗಿ ನನಗೆ ಬೆಂಬಲವನ್ನು ನೀಡುತ್ತಾ ಬಂದಿದ್ದಾರೆ. ಇನ್ನು ದೇಶದ ಕೆಲವು ದೊಡ್ಡ ಪ್ರತಿಭೆಗಳು ಸಿನಿಮಾದ ಪಾತ್ರವನ್ನ ಮೆಚ್ಚಿಕೊಂಡಿದ್ದಾರೆ, ಅವರ ಬೆಂಬಲವೇ ಇಂದು ಬ್ರಹ್ಮಾಸ್ತ್ರ ಗೆಲುವಿಗೆ ಕಾರಣ ಎಂದಿದ್ದಾರೆ.
ಇದನ್ನೂ ಓದಿ:ರಣಬೀರ್-ಆಲಿಯಾ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ ಫಿಕ್ಸ್; ಇಲ್ಲಿದೆ ವಿವರ
ಬ್ರಹ್ಮಾಸ್ತ್ರ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಸಕ್ಸಸ್ ಕಂಡಿದ್ದು, ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ಗೆ ದೊಡ್ಡ ಗೆಲುವು ತಂದುಕೊಟ್ಟಿದೆ. ಇನ್ನು ಈ ಸಿನಿಮಾದಿಂದಲೇ ರಣಬೀರ್ ಹಾಗೂ ಆಲಿಯಾ ಮಧ್ಯೆ ಪ್ರೀತಿ ಹುಟ್ಟಿತ್ತು. ಇದೇ ವರ್ಷ ಎಪ್ರಿಲ್ 18 ರಂದು ಮದುವೆಯಾಗಿದ್ದರು, ಈಗ ಇವರಿಗೆ ಮದ್ದಾದ ಹೆಣ್ಣು ಮಗು ಜನಿಸಿದ್ದು ಖುಷಿಯನ್ನ ಇನ್ನಷ್ಟು ದುಪ್ಪಟ್ಟು ಮಾಡಿದೆ.
ಇನ್ನು ಹೆಚ್ಚಿನ ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ