AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜಾನ್​ ಅಬ್ರಹಾಂ ನನ್ನ ಮೊದಲ ಮತ್ತು ಏಕೈಕ ಆಯ್ಕೆ’; ಪಠಾಣ್​ ನಿರ್ದೇಶಕ ಸಿದ್ಧಾರ್ಥ ಆನಂದ್

‘ಪಠಾಣ್​' ಚಿತ್ರದಲ್ಲಿ ಶಾರುಖ್ ಖಾನ್​ ಎದುರು ವಿಲನ್ ಆಗಿ ಜಾನ್ ಅಬ್ರಹಾಂ ಕಾಣಿಸಿಕೊಂಡಿದ್ದಾರೆ. ‘ಜಾನ್​ ಅಬ್ರಹಾಂ ನನ್ನ ಮೊದಲ ಮತ್ತು ಏಕೈಕ ಆಯ್ಕೆ' ಎಂದು ಪಠಾಣ್​ ನಿರ್ದೇಶಕ ಸಿದ್ಧಾರ್ಥ ಆನಂದ್ ಹೇಳಿದ್ದಾರೆ.

‘ಜಾನ್​ ಅಬ್ರಹಾಂ ನನ್ನ ಮೊದಲ ಮತ್ತು ಏಕೈಕ ಆಯ್ಕೆ'; ಪಠಾಣ್​ ನಿರ್ದೇಶಕ ಸಿದ್ಧಾರ್ಥ ಆನಂದ್
ಜಾನ್​ ಅಬ್ರಹಾಂ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Nov 09, 2022 | 2:12 PM

Share

ಪಠಾಣ್(​pathan) ಚಿತ್ರದ ಟೀಸರ್​ ಈಗಾಗಲೇ ​ ರಿಲೀಸ್​ ಆಗಿದ್ದು . ಮಸ್ತ್​ ಆ್ಯಕ್ಷನ್​ನೊಂದಿಗೆ ಸಿಕ್ಸ್​ ಪ್ಯಾಕ್​ ಬಾಡಿಯೊಂದಿಗೆ ಶಾರುಖ್ ಖಾನ್​(shahrukh khan) ಕಾಣಿಸಿಕೊಂಡಿದ್ದಾರೆ.ಈ ಚಿತ್ರದ ಮೂಲಕ ಶಾರುಖ್ ಒಳ್ಳೆಯ ಕಮ್​ಬ್ಯಾಕ್​ ಮಾಡುವ ನಿರೀಕ್ಷೆಯಿದೆ. ಶಾರುಖ್​ ಜೊತೆಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಸಿನಿಮಾ ಪಾತ್ರಗಳ ಬಗ್ಗೆ ಮಾತನಾಡುತ್ತಾ ನಿರ್ದೇಶಕ ಸಿದ್ಧಾರ್ಥ ಆನಂದ್ ‘ಪಠಾಣ್​ಗೆ ಸಮಾನವಾದ ಎತ್ತರದ ವಿಲನ್​ ಬೇಕಾಗಿತ್ತು ಅದಕ್ಕೆ ಸೂಟ್​ ಆಗುವಂತಹ ವಿಲನ್​ ಜಾನ್ ಅಬ್ರಹಾಂ‘(john abraham)ನನ್ನು ತಲೆಯಲ್ಲಿಟ್ಟುಕೊಂಡು ವಿಲನ್​ ಪಾತ್ರವನ್ನ ಬರೆಯಲಾಗಿದೆ ಎಂದಿದ್ದಾರೆ.

ಪಠಾಣ್ ಚಿತ್ರಕ್ಕೆ ವಿಲನ್​ ರೋಲ್​ಗಾಗಿ ಜಾನ್​ ಅಬ್ರಹಾಂನನ್ನು ತೆಗೆದುಕೊಳ್ಳುವಾಗ ಜನರು ಜಾನ್​ಗೆ ಒಳ್ಳೆಯ ಪ್ರತಿಕ್ರಿಯೆ ನೀಡಿದರು. ಸಿನಿಮಾದಲ್ಲಿ ಅವರಿಬ್ಬರ ಫೈಟ್​​ ಸಿಕ್ವೇನ್ಸ್​ ತುಂಬಾ ಅದ್ಭುತವಾಗಿ ಮೂಡಿ ಬಂದಿದ್ದು ಪ್ರೇಕ್ಷಕರಿಗೆ ರೋಮಾಂಚಕವಾಗಲಿದೆ ಎಂದಿದ್ದಾರೆ. ಜನವರಿ 25 ರಂದು ಪಠಾಣ್​ ಸಿನಿಮಾವು ರಿಲೀಸ್ ಆಗುತ್ತಿದೆ. ಈ ಚಿತ್ರವು ಮೊದಲ ದಿನ ಎಷ್ಟು ಕಲೆಕ್ಷನ್​ ಮಾಡಬಹುದು ಎನ್ನುವ ಲೆಕ್ಕಾಚಾರದ ಬಗ್ಗೆ ಚರ್ಚೆ ಶುರುವಾಗಿದೆ.

ಇನ್ನಷ್ಟು ಓದಿ:

ಇನ್ನು ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅವರ 4ನೇ ಚಿತ್ರ ಇದಾಗಿದೆ. ದೀಪಿಕಾ 2007 ರಲ್ಲಿ ಶಾರುಖ್ ಜೊತೆಯಾಗಿ ‘ಓಂ ಶಾಂತಿ ಓಂಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. ಇದಾದ ಮೇಲೆ ‘ಹ್ಯಾಪಿ ನ್ಯೂ ಇಯರ್‘​ ಹಾಗೂ ‘ಚೆನ್ನೈ ಎಕ್ಸ್​ಪ್ರೆಸ್‘​ ಸಿನಿಮಾದಲ್ಲಿ ಇಬ್ಬರು ಜೊತೆಯಾಗಿ ನಟಿಸಿದ್ದು ಎಲ್ಲಾ 3 ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದವು, ಇನ್ನು ಜಾನ್​ ಅಬ್ರಹಾಂ ಇದೇ ಮೊದಲ ಬಾರಿಗೆ ಶಾರುಖ್​ ಖಾನ್​ನೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಹೆಚ್ಚಿನ ಮನರಂಜನಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ