ರಣಬೀರ್-ಆಲಿಯಾ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ ಫಿಕ್ಸ್; ಇಲ್ಲಿದೆ ವಿವರ
‘ಬ್ರಹ್ಮಾಸ್ತ್ರ’ ಸಿನಿಮಾದ ಕೆಲಸಗಳು ಆರಂಭ ಆಗಿ ಹಲವು ವರ್ಷಗಳೇ ಕಳೆದಿದ್ದವು. ಈ ಚಿತ್ರದ ಸೆಟ್ನಲ್ಲೇ ಆಲಿಯಾ-ರಣಬೀರ್ ಮಧ್ಯೆ ಪ್ರೀತಿ ಹುಟ್ಟಿತ್ತು. ಅವರ ಮದುವೆ ಆಗಿ, ಆಲಿಯಾ ಪ್ರೆಗ್ನೆಂಟ್ ಆದರೂ ಸಿನಿಮಾ ರಿಲೀಸ್ ಆಗಿಲ್ಲ ಎಂದು ಕೆಲವರು ಟೀಕೆ ಮಾಡಿದ್ದರು.
ಈ ವರ್ಷ ಬಾಲಿವುಡ್ನಲ್ಲಿ ಭರ್ಜರಿ ಕಮಾಯಿ ಮಾಡಿದ ಕೆಲವೇ ಸಿನಿಮಾಗಳ ಪೈಕಿ ‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ಕೂಡ ಒಂದು. ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ ನಟನೆಯ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಗೆದ್ದಿತ್ತು. ಈ ಚಿತ್ರದ ಗ್ರಾಫಿಕ್ಸ್ ಬಗ್ಗೆ ಕೆಲವರು ಟೀಕೆ ವ್ಯಕ್ತಪಡಿಸಿದರೂ ಅದು ಚಿತ್ರದ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಈಗ ಈ ಚಿತ್ರ ಒಟಿಟಿಗೆ ಕಾಲಿಡೋಕೆ ರೆಡಿ ಆಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲೇ ಸಿನಿಮಾ ಬಿಡುಗಡೆ ಆಗುತ್ತಿದೆ.
‘ಬ್ರಹ್ಮಾಸ್ತ್ರ’ ಸಿನಿಮಾದ ಕೆಲಸಗಳು ಆರಂಭ ಆಗಿ ಹಲವು ವರ್ಷಗಳೇ ಕಳೆದಿದ್ದವು. ಈ ಚಿತ್ರದ ಸೆಟ್ನಲ್ಲೇ ಆಲಿಯಾ-ರಣಬೀರ್ ಮಧ್ಯೆ ಪ್ರೀತಿ ಮುಟ್ಟಿತ್ತು. ಅವರ ಮದುವೆ ಆಗಿ, ಆಲಿಯಾ ಪ್ರೆಗ್ನೆಂಟ್ ಆದರೂ ಸಿನಿಮಾ ರಿಲೀಸ್ ಆಗಿಲ್ಲ ಎಂದು ಕೆಲವರು ಟೀಕೆ ಮಾಡಿದ್ದರು. ಆದರೆ, ಚಿತ್ರತಂಡ ಇದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. ಸಾಕಷ್ಟು ಕಾಳಜಿವಹಿಸಿ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿತ್ತು ತಂಡ. 3ಡಿಯಲ್ಲಿ ಮೂಡಿ ಬಂದ ಈ ಚಿತ್ರವನ್ನು ಜನರು ಮೆಚ್ಚಿಕೊಂಡರು.
ಈಗ ‘ಬ್ರಹ್ಮಾಸ್ತ್ರ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಅಕ್ಟೋಬರ್ 23ಕ್ಕೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಮೂಲಕ ಚಿತ್ರ ಬಿಡುಗಡೆ ಆಗಲಿದೆ ಎನ್ನಲಾಗಿದೆ. ನವೆಂಬರ್ 4ರಂದು ಈ ಚಿತ್ರ ಒಟಿಟಿ ಪ್ರವೇಶಿಸಲಿದೆ ಎಂದು ಕೆಲ ವರದಿಗಳು ಹೇಳಿವೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಬ್ರಹ್ಮಾಸ್ತ್ರ’ ಎರಡನೇ ಪಾರ್ಟ್ನಲ್ಲಿ ಆರ್ಯನ್ ಖಾನ್? ವೈರಲ್ ಆಯ್ತು ನಕಲಿ ಪೋಸ್ಟರ್
‘ಬ್ರಹ್ಮಾಸ್ತ್ರ’ ಸಿನಿಮಾಗೆ ‘ರಾಷ್ಟ್ರೀಯ ಸಿನಿಮಾ ದಿನ’ ವರದಾನಾವಾಗಿತ್ತು. 75 ರೂಪಾಯಿ ಟಿಕೆಟ್ ದರ ನಿಗದಿ ಆದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಈ ಚಿತ್ರವನ್ನು ಅಂದು ಕಣ್ತುಂಬಿಕೊಂಡರು. ಈಗ ಬೇರೆ ಚಿತ್ರಗಳ ಅಬ್ಬರ ಜೋರಾಗಿದೆ. ಹೀಗಾಗಿ, ‘ಬ್ರಹ್ಮಾಸ್ತ್ರ’ ಸಿನಿಮಾ ಥಿಯೇಟ್ನಿಂದ ಕಾಲ್ಕಿತ್ತಿದೆ. ಹೀಗಾಗಿ, ಒಟಿಟಿ ರಿಲೀಸ್ಗೆ ಇದು ಸೂಕ್ತ ಸಮಯ ಎಂಬುದು ತಂಡದ ನಿರ್ಧಾರ. ಚಿತ್ರಮಂದಿರದಲ್ಲಿ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.