ನಟಿ ದೀಪಿಕಾ ಪಡುಕೋಣೆ ಅವರಿಗೆ ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಇದೆ. ಹಾಗಂತ ಅವರು ತಮ್ಮ ಪಾಲಿಗೆ ಬಂದ ಎಲ್ಲ ಆಫರ್ಗಳನ್ನೂ ಒಪ್ಪಿಕೊಳ್ಳುತ್ತಿಲ್ಲ. ಕಥೆ ಮತ್ತು ಪಾತ್ರವನ್ನು ಅವರು ಅಳೆದು-ತೂಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇಂದು (ಜ.5) ಅವರ ಜನ್ಮದಿನ. ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಆಪ್ತರು ದೀಪಿಕಾಗೆ ಶುಭ ಕೂರುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿ ಕೇಳಿಬಂದಿದೆ. ದೀಪಿಕಾ ನಟಿಸಿರುವ ‘ಗೆಹರಾಯಿಯಾ’ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿದೆ. ಅದಕ್ಕಿಂತಲೂ ಹೆಚ್ಚು ಚರ್ಚೆಗೆ ಕಾರಣ ಆಗಿರುವುದು ಅವರ ಕಿಸ್ಸಿಂಗ್ ಪೋಸ್ಟರ್! ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.
ಜ.25ರಂದು ‘ಗೆಹರಾಯಿಯಾ’ ಸಿನಿಮಾ ತೆರೆಕಾಣಲಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಈಗ ಆ ಚಿತ್ರದ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ. ಜ.25ರ ಬದಲಿಗೆ, ಫೆ.11ರಂದು ‘ಗೆಹರಾಯಿಯಾ’ ರಿಲೀಸ್ ಆಗಲಿದೆ. ಬಿಡುಗಡೆ ದಿನಾಂಕ ತಡವಾಗಿದ್ದಕ್ಕೆ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರ ಆಗಿದೆ. ದೀಪಿಕಾ ಪಡುಕೋಣೆ ಬರ್ತ್ಡೇ ಪ್ರಯುಕ್ತ ಹಾಗೂ ಹೊಸ ರಿಲೀಸ್ ಡೇಟ್ ತಿಳಿಸುವ ಸಲುವಾಗಿ ಚಿತ್ರತಂಡದಿಂದ ಒಂದಷ್ಟು ಫೋಸ್ಟರ್ಗಳನ್ನು ಬಿಡುಗಡೆ ಮಾಡಲಾಗಿದೆ. ಆ ಪೈಕಿ ದೀಪಿಕಾ ಮತ್ತು ಸಿದ್ಧಾಂತ್ ಚತುರ್ವೇದಿ ಅವರು ಕಿಸ್ ಮಾಡುತ್ತಿರುವ ಪೋಸ್ಟರ್ ಹೆಚ್ಚು ವೈರಲ್ ಆಗಿದೆ.
‘ನನಗೆ ನೀವು ತೋರಿದ ಪ್ರೀತಿ ಮತ್ತು ತಾಳ್ಮೆಗಾಗಿ ಈ ವಿಶೇಷ ದಿನದ ಪ್ರಯುಕ್ತ ಉಡುಗೊರೆ ನೀಡುತ್ತಿದ್ದೇನೆ’ ಎಂದು ದೀಪಿಕಾ ಪಡುಕೋಣೆ ಅವರು ಈ ಪೋಸ್ಟ್ಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಪಾಲಿಗೆ ಗೆಹರಾಯಿಯಾ ಒಂದು ಸಿನಿಮಾ ಮಾತ್ರವಲ್ಲ. ಮಾನವ ಸಂಬಂಧದ ಸಂಕೀರ್ಣ ವಿವರಗಳ ಕಡೆಗಿನ ಪಯಣ ಇದು. ಆಧುನಿಕ ಜಗತ್ತಿನಲ್ಲಿ ಸಂಬಂಧಗಳಿಗೆ ಹಿಡಿದ ಕನ್ನಡಿ ಈ ಸಿನಿಮಾ’ ಎಂದು ನಿರ್ದೇಶಕ ಶಕುನ್ ಬಾತ್ರ ಹೇಳಿದ್ದಾರೆ.
‘ಗೆಹರಾಯಿಯಾ’ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ನೇರವಾಗಿ ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ಈ ಚಿತ್ರ ರಿಲೀಸ್ ಆಗಲಿದೆ. ಈ ಸಿನಿಮಾ ತುಂಬ ರೊಮ್ಯಾಂಟಿಕ್ ಆದಂತಹ ಕಥೆಯನ್ನು ಒಳಗೊಂಡಿದೆ ಎಂಬುದಕ್ಕೆ ಟೀಸರ್ನಲ್ಲಿ ಸಾಕ್ಷಿ ಸಿಕ್ಕಿತ್ತು. ಈಗ ಹೊಸ ಪೋಸ್ಟರ್ಗಳು ಕೂಡ ಅದನ್ನೇ ಒತ್ತಿ ಹೇಳುತ್ತಿವೆ. ಈ ಸಿನಿಮಾವನ್ನು ಶಕುನ್ ಭಾತ್ರ ನಿರ್ದೇಶನ ಮಾಡಿದ್ದಾರೆ. ‘ಗೆಹರಾಯಿಯಾ’ ಬಗ್ಗೆ ದೀಪಿಕಾ ಪಡುಕೋಣೆ ಅವರಿಗೆ ವಿಶೇಷ ಪ್ರೀತಿ ಇದೆ. ನಟಿ ಅನನ್ಯಾ ಪಾಂಡೆ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.
ಇದನ್ನೂ ಓದಿ:
ಮದುವೆಗೂ ಮುನ್ನ ಬುರ್ಕಾ ಧರಿಸುತ್ತಿದ್ದ ದೀಪಿಕಾ; ಯಾರಿಗೂ ತಿಳಿದಿರದ ರಹಸ್ಯ ಈಗ ಬಯಲಾಯ್ತು
ಸುದೀಪ್ ಬಾಡಿಗಾರ್ಡ್ಗೆ ವಿಡಿಯೋ ಕಾಲ್ ಮಾಡಿ ಕನ್ನಡದಲ್ಲಿ ಮಾತಾಡಿದ ದೀಪಿಕಾ; ಇದಕ್ಕಿದೆ ವಿಶೇಷ ಕಾರಣ