ದೀಪಿಕಾ ಪಡುಕೋಣೆ ಇಲ್ಲಿವರೆಗೆ ಸಾಕಷ್ಟು ಸಿನಿಮಾಗಳಲ್ಲಿ ಗ್ಲಾಮರಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಅವರು ಆ್ಯಕ್ಷನ್ ಅವತಾರ ತಾಳಲಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದಲ್ಲಿ ದೀಪಿಕಾ ಆ್ಯಕ್ಷನ್ ಮೆರೆಯಲಿದ್ದಾರೆ. ಇದಕ್ಕಾಗಿ ಅವರು ದೇಹವನ್ನು ಹುರಿಗೊಳಿಸಿಕೊಳ್ಳುತ್ತಿದ್ದಾರೆ.
2013ರಲ್ಲಿ ತೆರೆಗೆ ಬಂದಿದ್ದ ಶಾರುಖ್ ಖಾನ್ ನಟನೆಯ ಚೆನ್ನೈ ಎಕ್ಸ್ಪ್ರೆಸ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಹ್ಯಾಪಿ ನ್ಯೂ ಇಯರ್ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡಿದ್ದರೂ, ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಾದ ನಂತರ ತೆರೆಕಂಡ ಎಲ್ಲ ಚಿತ್ರಗಳೂ ನೆಲ ಕಚ್ಚಿದ್ದವು. ಈಗ ಶಾರುಖ್ ಪಠಾಣ್ ಸಿನಿಮಾ ಮೂಲಕ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ನಾಯಕಿ. ಈ ಸಿನಿಮಾದಲ್ಲಿ ಅವರೂ ಆ್ಯಕ್ಷನ್ ಮೆರೆಯುತ್ತಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿರುವ ‘ಪಠಾಣ್’ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳು ಇರಲಿವೆಯಂತೆ. ದೀಪಿಕಾ ಕೂಡ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ‘ಎಕ್ಸ್ಎಕ್ಸ್ಎಕ್ಸ್: ರಿಟರ್ನ್ ಆಫ್ ಕ್ಯಾಂಡರ್ ಕೇಜ್’ ಚಿತ್ರದಲ್ಲಿ ದೀಪಿಕಾ ಆ್ಯಕ್ಷನ್ ಮೆರೆದಿದ್ದರು. ಇದನ್ನು ನೋಡಿದ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದರು. ಈಗ ಅವರು ಮತ್ತೆ ಇದೇ ರೀತಿಯ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋಕೆ ರೆಡಿ ಆಗಿದ್ದಾರೆ. ಇದಕ್ಕಾಗಿ ಅವರು ಜಿಮ್ನಲ್ಲೂ ವರ್ಕೌಟ್ ಮಾಡುತ್ತಿದ್ದಾರೆ.
ನಟ ರಜನಿಕಾಂತ್ ಅವರ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಲ್ ಶೀಟ್ ಕೇಳಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ‘ಕೊಚಡಿಯನ್’ ಸಿನಿಮಾದಲ್ಲಿ ರಜನಿ ಹಾಗೂ ದೀಪಿಕಾ ಒಟ್ಟಾಗಿ ಕೆಲಸ ಮಾಡಿದ್ದರು. ಆದರೆ, ಇದು ಮೋಷನ್ ಕ್ಯಾಪ್ಚರ್ ಸಿನಿಮಾ ಆಗಿತ್ತು. ಒಂದೊಮ್ಮೆ ಈ ಹೊಸ ಚಿತ್ರದಲ್ಲಿ ದೀಪಿಕಾ ನಟಿಸೋಕೆ ಒಪ್ಪಿದರೆ ಇದೇ ಮೊದಲ ಬಾರಿಗೆ ರಜನಿ ಜತೆ ಅವರು ನೈಜವಾಗಿ ತೆರೆಹಂಚಿಕೊಂಡಂತಾಗಲಿದೆ ಈ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ.
ಇದನ್ನೂ ಓದಿ: ಶಾರುಖ್ ಖಾನ್ ಬಗ್ಗೆ ಹರಿದಾಡಿದ್ದ ಸುದ್ದಿ ಸುಳ್ಳು; ಆದರೂ ಬೇಸರಗೊಂಡ ಫ್ಯಾನ್ಸ್
ಶಾರುಖ್ ಪುತ್ರಿ ಸುಹಾನಾ ಖಾನ್ ಹಾಟ್ ಫೋಟೋಶೂಟ್ ವೈರಲ್; ಅಪ್ಪನ ಕಮೆಂಟ್ ಏನು?