ಬಾಲಿವುಡ್ನ ಖ್ಯಾತ ನಟಿ ರವೀನಾ ಟಂಡನ್ (Raveena Tandon) ಅವರು ಶನಿವಾರ ರಾತ್ರಿ ಹಲ್ಲೆಗೆ ಒಳಗಾಗಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ರವೀನಾ ಟಂಡನ್ ಅವರ ಕಾರು ಚಾಲಕನ ಮೇಲೂ ಜನರು ಹಲ್ಲೆ (Assault) ಮಾಡಿದ್ದಾರೆ. ಈ ಗಲಾಟೆಯಲ್ಲಿ ರವೀನಾ ಟಂಡನ್ ಕೂಡ ಮಹಿಳೆಯರ ಮೇಲೆ ಕೈ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಈ ಘಟನೆಯ ವಿಡಿಯೋ (Raveena Tandon Viral Video) ವೈರಲ್ ಆಗಿದೆ. ರವೀನಾ ಟಂಡನ್ ಅವರ ಕಾರು ಚಾಲಕ ರಿವರ್ಸ್ ತೆಗೆಯುವ ವೇಳೆ ಪಾದಚಾರಿಗಳ ಜೊತೆ ಕಿರಿಕ್ ಆಗಿದೆ ಎನ್ನಲಾಗಿದೆ.
‘ದಯವಿಟ್ಟು ನನಗೆ ಹೊಡೆಯಬೇಡಿ. ನನ್ನನ್ನು ತಳ್ಳಬೇಡಿ..’ ಎಂದು ರವೀನಾ ಟಂಡನ್ ಅವರು ಬೇಡಿಕೊಂಡಿದ್ದಾರೆ. ತುಂಬ ಗಾಬರಿಯಲ್ಲಿದ್ದ ಅವರನ್ನು ಜನರು ತಳ್ಳಾಡಿದ್ದಾರೆ. ಕೂದಲು ಹಿಡಿದು ಎಳೆದಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಘಟನೆಗೆ ಸಂಬಂಧಿಸಿದಂತೆ ಇನ್ನೂ ದೂರು ದಾಖಲಾಗಿಲ್ಲ ಎಂದು ವರದಿ ಆಗಿದೆ. ಈ ಬಗ್ಗೆ ಸರಿಯಾದ ಚಿತ್ರಣ ಸಿಗುವುದು ಬಾಕಿಯಿದೆ. ನಟಿಯ ಕಡೆಯಿಂದ ಸ್ಪಷ್ಟನೆ ಹೊರ ಬರಬೇಕಿದೆ.
ಇದನ್ನೂ ಓದಿ: ಮಹಿಳೆ ಮೇಲೆ ರವೀನಾ ಟಂಡನ್ ಹಲ್ಲೆ ಆರೋಪ: ವಿಡಿಯೋ ವೈರಲ್
ವೈರಲ್ ವಿಡಿಯೋದಲ್ಲಿ ಮೊಹಮ್ಮದ್ ಎಂಬ ವ್ಯಕ್ತಿಯು ರವೀನಾ ಟಂಡನ್ ಮೇಲೆ ಆರೋಪ ಹೊರಿಸಿದ್ದಾರೆ. ‘ನನ್ನ ಹೆಸರು ಮೊಹಮ್ಮದ್. ನಾನು ಬಾಂದ್ರಾ ನಿವಾಸಿ. ನನ್ನ ತಾಯಿ, ಸಹೋದರಿ ಮುಂತಾದವರ ಜೊತೆ ನಾವು ಹೊರಗೆ ಹೋಗಿದ್ದೆವು. ಅಲ್ಲಿಂದ ವಾಪಸ್ ಬರುವಾಗ, ರವೀನಾ ಟಂಡನ್ ಮನೆಯ ಬಳಿ ನನ್ನ ತಾಯಿ ಮೇಲೆ ಅವರ ಚಾಲಕ ಕಾರು ಹತ್ತಿಸಿದ್ದಾನೆ. ಅದನ್ನು ಪ್ರಶ್ನಿಸಿದ್ದಕ್ಕೆ ಆತ ನಮ್ಮ ಮೇಲೆ ಹಲ್ಲೆ ಮಾಡಿದ’ ಎಂದು ಮೊಹಮ್ಮದ್ ಹೇಳಿದ್ದಾರೆ.
Allegations of Assault by #RaveenaTandon & her driver on elderly Woman Incident near Rizvi law college, family Claims that @TandonRaveena was under influence of Alcohol, women have got head injuries, Family is at Khar Police station @MumbaiPolice @CPMumbaiPolice @mieknathshinde pic.twitter.com/eZ0YQxvW3g
— Mohsin shaikh 🇮🇳 (@mohsinofficail) June 1, 2024
‘ರವೀನಾ ಟಂಡನ್ ಅವರ ಕಾರು ಚಾಲಕ ನನ್ನ ತಾಯಿಗೆ ಹೊಡೆದಿದ್ದಾನೆ. ಅದಾದ ಬಳಿಕ ಕುಡಿದ ನಶೆಯಲ್ಲಿದ್ದ ರವೀನಾ ಟಂಡನ್ ಅವರು ಕೂಡ ಹೊರಬಂದು ನನ್ನ ತಾಯಿ ಮೇಲೆ ಹಲ್ಲೆ ಮಾಡಿದರು. ತಾಯಿ ತಲೆಗೆ ಪೆಟ್ಟಾಗಿದೆ. ನಾವು ಇಲ್ಲಿ ಪೊಲೀಸ್ ಠಾಣೆ ಎದುರು ನಾಲ್ಕು ಗಂಟೆಯಿಂದ ನಿಂತಿದ್ದೇವೆ. ನನ್ನನ್ನು ಯಾರೂ ಕೇಳುತ್ತಿಲ್ಲ. ನಮ್ಮ ದೂರನ್ನು ಯಾರೂ ಪಡೆಯುತ್ತಿಲ್ಲ. ರಾಜಿ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ನಾವು ಯಾಕೆ ರಾಜಿ ಮಾಡಿಕೊಳ್ಳಬೇಕು? ನಮಗೆ ನ್ಯಾಯ ಬೇಕು’ ಎಂದು ವೈರಲ್ ವಿಡಿಯೋದಲ್ಲಿ ಮೊಹಮ್ಮದ್ ಹೇಳಿಕೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.