ಜಪಾನ್​ಗೆ ಲಗ್ಗೆ ಇಡಲು ರೆಡಿಯಾದ ‘ಧುರಂಧರ್’ ಸಿನಿಮಾ; ಹೆಚ್ಚಲಿದೆ ಗಳಿಕೆ

ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಈಗಾಗಲೇ ವಿಶ್ವದಾದ್ಯಂತ 1,328 ಕೋಟಿಗೂ ಹೆಚ್ಚು ಗಳಿಸಿ ದೊಡ್ಡ ಯಶಸ್ಸು ಕಂಡಿದೆ. ಈಗ ಈ ಚಿತ್ರ ಜುಲೈ 10ರಂದು ಜಪಾನ್‌ನಲ್ಲಿ ಜಪಾನಿ ಭಾಷೆಗೆ ಡಬ್ ಆಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಭಾರತೀಯ ಆಕ್ಷನ್ ಚಿತ್ರಗಳಿಗೆ ಜಪಾನ್‌ನಲ್ಲಿ ಉತ್ತಮ ಬೇಡಿಕೆಯಿದ್ದು, 'ಕೆಜಿಎಫ್' ಮತ್ತು 'ಆರ್‌ಆರ್‌ಆರ್' ಯಶಸ್ಸು ಇದಕ್ಕೆ ಸಾಕ್ಷಿ. ಜಪಾನ್‌ ಬಿಡುಗಡೆಯಿಂದ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಜಪಾನ್​ಗೆ ಲಗ್ಗೆ ಇಡಲು ರೆಡಿಯಾದ ‘ಧುರಂಧರ್’ ಸಿನಿಮಾ; ಹೆಚ್ಚಲಿದೆ ಗಳಿಕೆ
ರಣವೀರ್
Edited By:

Updated on: Apr 29, 2026 | 5:06 PM

ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಆದಿತ್ಯ ಧಾರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಸುನಾಮಿ ಎಬ್ಬಿಸಿತ್ತು. ಇದಾದ ಬಳಿಕ ಬಂದ ‘ಧುರಂಧರ್ 2’ ಚಿತ್ರವನ್ನು ಮತ್ತಷ್ಟು ಮೆಚ್ಚುಗೆ ಪಡೆಯಿತು. ಈ ಸಿನಿಮಾ ಅನೇಕ ದಾಖಲೆಗಳನ್ನು ಉಡೀಸ್ ಮಾಡಿದೆ. ಈಗ ‘ಧುರಂಧರ್’ ಚಿತ್ರ ಜುಲೈ 10ರಂದು, ಜಪಾನ್‌ನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿದೆ ಅನ್ನೋದು ವಿಶೇಷ.

ಜಪಾನ್ ಅಲ್ಲಿ ಭಾರತದ ಸಿನಿಮಾಗಳಿಗೆ ಬೇಡಿಕೆ ಇದೆ. ಅದರಲ್ಲೂ ಆ್ಯಕ್ಷನ್ ಹಾಗೂ ಫ್ಯಾಂಟಸಿ ಚಿತ್ರಗಳನ್ನು ಅಲ್ಲಿನ ಜನರು ಸಾಕಷ್ಟು ವೀಕ್ಷಣೆ ಮಾಡುತ್ತಾರೆ. ‘ಕೆಜಿಎಫ್’, ‘ಆರ್​​ಆರ್​​ಆರ್​​’ ರೀತಿಯ ಸಿನಿಮಾಗಳು ಜಪಾನ್ ಅಲ್ಲಿ ರಿಲೀಸ್​ ಆಗಿ ಮೆಚ್ಚುಗೆ ಪಡೆದಿವೆ. ಈಗ ‘ಧುರಂಧರ್’ ಚಿತ್ರದ ಸರದಿ.

ಈಗಾಗಲೇ ‘ಧುರಂಧರ್’ ಸಿನಿಮಾ ವಿಶ್ವದಾದ್ಯಂತ 1,328 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದೆ.
ಹಿಂದಿ ಚಿತ್ರರಂಗದ ಅತಿ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಜಪಾನ್ ರಿಲೀಸ್ ಬಳಿಕ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಉತ್ತರ ಅಮೆರಿಕದಲ್ಲಿ ಈ ಸಿನಿಮಾ ಸಾರ್ವಕಾಲಿಕ ನಂಬರ್ 1 ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ಮಾರುಕಟ್ಟೆಯಲ್ಲೂ ಈ ಚಿತ್ರವು ಭರ್ಜರಿ ಪ್ರದರ್ಶನ ಕಂಡು ಇತಿಹಾಸ ಸೃಷ್ಟಿಸಿದೆ. ಜಪಾನ್ ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಮತ್ತೆ ಒಂದಾದ ‘ಧುರಂಧರ್’ ಜೋಡಿ; ಆದಿತ್ಯ ಧಾರ್ ಹೊಸ ಚಿತ್ರಕ್ಕೆ ರಣವೀರ್ ಹೀರೋ

ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ಅವರಂತಹ ಬಲಿಷ್ಠ ತಾರಾಗಣವಿದೆ. ಆದಿತ್ಯ ಧಾರ್ ಅವರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸುವುದರ ಜೊತೆಗೆ ಲೊಕೇಶ್ ಧಾರ್ ಮತ್ತು ಜ್ಯೋತಿ ದೇಶಪಾಂಡೆ ಅವರೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಒಟ್ಟಾರೆಯಾಗಿ, ಜಪಾನ್‌ನಲ್ಲೂ ‘ಧುರಂಧರ್’ ತನ್ನ ಅಬ್ಬರವನ್ನು ಮುಂದುವರಿಸುತ್ತದೆಯೇ ಎಂಬುದು ಸದ್ಯದ ಕುತೂಹಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:11 pm, Wed, 29 April 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us