AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಒಂದಾದ ‘ಧುರಂಧರ್’ ಜೋಡಿ; ಆದಿತ್ಯ ಧಾರ್ ಹೊಸ ಚಿತ್ರಕ್ಕೆ ರಣವೀರ್ ಹೀರೋ

ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ 'ಧುರಂಧರ್' ಸರಣಿಯ ಭಾರಿ ಯಶಸ್ಸಿನ ನಂತರ ಮತ್ತೆ ಒಂದಾಗುತ್ತಿದ್ದಾರೆ. 'ಧುರಂಧರ್ 2' ಚಿತ್ರ 'ಬಾಹುಬಲಿ 2' ದಾಖಲೆ ಮುರಿದಿದ್ದು, ಈ ಕಾಂಬಿನೇಷನ್ ಮೇಲೆ ಭಾರಿ ನಿರೀಕ್ಷೆ ಇದೆ. ಆದಿತ್ಯ ಧರ್ ಅವರ ಮುಂದಿನ ಚಿತ್ರಕ್ಕೆ ರಣವೀರ್ ಸೂಕ್ತ ಎಂದು ಅನಿಸಿದ್ದು, ಸ್ಕ್ರಿಪ್ಟ್ ಕೆಲಸಗಳು ಪ್ರಗತಿಯಲ್ಲಿವೆ. ಈ ಸಿನಿಮಾ 2027 ರಲ್ಲಿ ಸೆಟ್ಟೇರುವ ನಿರೀಕ್ಷೆ ಇದೆ.

ಮತ್ತೆ ಒಂದಾದ ‘ಧುರಂಧರ್’ ಜೋಡಿ; ಆದಿತ್ಯ ಧಾರ್ ಹೊಸ ಚಿತ್ರಕ್ಕೆ ರಣವೀರ್ ಹೀರೋ
ರಣವೀರ್-ಆದಿತ್ಯ
ರಾಜೇಶ್ ದುಗ್ಗುಮನೆ
|

Updated on: Apr 29, 2026 | 7:39 AM

Share

ಒಂದು ಹಿಟ್ ಕಾಂಬಿನೇಷನ್ ಸಿಕ್ಕರೆ ಸಾಕು ನಂತರದಲ್ಲಿ ಇದನ್ನೇ ಮುಂದುವರಿಸಿಕೊಂಡು ಹೋಗುವ ಪ್ರಯತ್ನವನ್ನು ಮಾಡಲಾಗುತ್ತದೆ. ಹೀಗೆ ಮಾಡೋದನ್ನು ಜನರು ಕೂಡ ಇಷ್ಟಪಡುತ್ತಾರೆ. ಈಗ ರಣವೀರ್ ಸಿಂಗ್ ಹಾಗೂ ನಿರ್ದೇಶಕ ಆದಿತ್ಯ ಧಾರ್ ಅವರು ಮತ್ತೊಮ್ಮೆ ಒಟ್ಟಿಗೆ ಬರಲು ರೆಡಿ ಆಗಿದ್ದಾರೆ. ಈ ಚಿತ್ರಕ್ಕೆ ಅಭಿಮಾನಿಗಳು ಕಾದಿದ್ದಾರೆ. ಹಾಗಂತ ಈ ಸಿನಿಮಾ ಈಗಲೇ ಸೆಟ್ಟೇರುವುದಿಲ್ಲ. ಇದಕ್ಕೆ ಸಾಕಷ್ಟು ಸಮಯದ ಅಗತ್ಯವಿದೆ.

ರಣವೀರ್ ಸಿಂಗ್ ಹಾಗೂ ಆದಿತ್ಯ ಧಾರ್ ಅವರು ಮೊದಲ ಬಾರಿಗೆ ಒಂದಾಗಿದ್ದು ‘ಧುರಂಧರ್’ ಸಿನಿಮಾದಲ್ಲಿ. ರಣವೀರ್ ಹಮ್ಜಾ ಅಲಿ ಮಜಾರಿ ಪಾತ್ರವನ್ನು ಸರಿಯಾಗಿ ನಿರ್ವಹಿಸಬಹುದು ಎಂಬ ನಂಬಿಕೆಯನ್ನು ಆದಿತ್ಯ ಧಾರ್ ಇಟ್ಟುಕೊಂಡಿದ್ದರು. ಅದೇ ರೀತಿಯಲ್ಲಿ ರಣವೀರ್ ಸಿಂಗ್ ಅವರು ಈ ನಂಬಿಕೆಯನ್ನು ಉಳಿಸಿಕೊಂಡರು. ಈಗ ಇಬ್ಬರೂ ಮತ್ತೊಮ್ಮೆ ಒಂದಾಗುತ್ತಿದ್ದಾರೆ.

ಆದಿತ್ಯ ಧಾರ್ ಅವರ ಮುಂದಿನ ಚಿತ್ರಕ್ಕೆ ಹೀರೋ ಯಾರು ಎಂಬ ಬಗ್ಗೆ ಚರ್ಚೆಗಳು ಈ ಮೊದಲಿನಿಂದಲೂ ನಡೆಯುತ್ತಲೇ ಇವೆ. ಇದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ. ಕೆಲವರು ಅಲ್ಲು ಅರ್ಜುನ್ ಹೆಸರು ಹೇಳಿದರೆ, ಇನ್ನೂ ಕೆಲವರು ಬೇರೆ ನಟರ ಹೆಸರನ್ನು ಹೇಳಿದ್ದಾರೆ. ಆದರೆ, ಈಗ ಸಿದ್ಧಪಡಿಸಿಕೊಂಡಿರುವ ಕಥೆಯ ಒಂದೆಳೆಗೆ ರಣವೀರ್ ಸಿಂಗ್ ಅವರೇ ಹೆಚ್ಚು ಸೂಕ್ತ ಎಂದು ಆದಿತ್ಯ ಧಾರ್ ಅವರಿಗೆ ಅನಿಸುತ್ತಿದೆ.

ಆದಿತ್ಯ ಧಾರ್ ಅವರು ‘ಧುರಂಧರ್ 2’ ಯಶಸ್ಸಿನ ಬಳಿಕ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಸಾಗುತ್ತಿವೆ.ಈ ಸಿನಿಮಾಗೆ ರಣವೀರ್ ಹೀರೋ ಆದರೆ, ವಿಲನ್ ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ ಎಂದು ವರದಿ ಆಗಿದೆ. ಈ ಸಿನಿಮಾ 2027ರಲ್ಲಿ ಸೆಟ್ಟೇರುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಬಾಹುಬಲಿ 2’ ದಾಖಲೆ ಉಡೀಸ್: ಹೊಸ ಇತಿಹಾಸ ಬರೆಯಲು ಸಜ್ಜಾದ ‘ಧುರಂಧರ್ 2’

‘ಧುರಂಧರ್ 2’ ಸಿನಿಮಾ ಈಗಾಗಲೇ ‘ಬಾಹುಬಲಿ 2’ ಚಿತ್ರದ ದಾಖಲೆಯನ್ನು ಮುರಿದಿದೆ. ಈ ಸಿನಿಮಾ ಇಷ್ಟು ದಾಖಲೆ ಮಾಡಲು ಕಾರಣ ‘ಧುರಂಧರ್’ ಸಿನಿಮಾದ ಯಶಸ್ಸು. ಈಗ ಈ ಎರಡೂ ಚಿತ್ರದ ಯಶಸ್ಸು ಆದಿತ್ಯ ಧಾರ್ ಅವರ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ