‘ಧುರಂಧರ್’ ನೋಡಿದ ಪ್ರೇಕ್ಷಕ ಹೇಳಿದ್ದೇನು? ಇಲ್ಲಿದೆ ವಿಮರ್ಶೆ

‘ಧುರಂಧರ್’ ಚಿತ್ರಕ್ಕೆ ದೊಡ್ಡ ಹಿನ್ನಡೆ ಎಂದರೆ ಅದು ಚಿತ್ರದ ಅವಧಿ. ಈ ಸಿನಿಮಾದ ಅವಧಿ 3 ಗಂಟೆ 36 ನಿಮಿಷ ಇದೆ. ಹೀಗಾಗಿ ಸಿನಿಮಾದ ಅವಧಿಯೇ ಚಿತ್ರಕ್ಕೆ ಹಿನ್ನಡೆ ಆಗಿದೆ. ಮೊದಲಾರ್ಧದಲ್ಲಿ ಲವ್ ಸ್ಟೋರಿ ಸೇರಿದಂತೆ ಅನೇಕ ವಿಷಯಗಳನ್ನು ಡ್ರ್ಯಾಗ್ ಮಾಡಲಾಗಿದೆಯಂತೆ. ಹೀಗಾಗಿ, ಸಿನಿಮಾದ ಮೊದಲಾರ್ಧದ ಅವಧಿ 2 ಗಂಟೆ ಮಿರೀದೆ.

‘ಧುರಂಧರ್’ ನೋಡಿದ ಪ್ರೇಕ್ಷಕ ಹೇಳಿದ್ದೇನು? ಇಲ್ಲಿದೆ ವಿಮರ್ಶೆ
ಧುರಂಧರ್

Updated on: Dec 05, 2025 | 1:03 PM

‘ಧುರಂಧರ’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರ ಇಂದು ತೆರೆಗೆ ಬಂದಿದೆ. ಸ್ಪೈ ಪಾತ್ರದಲ್ಲಿ ರಣವೀರ್ ನಟಿಸಿದ್ದಾರೆ. ವಿವಾದಗಳ ಮಧ್ಯೆ, ಹೆಚ್ಚು ಹೈಪ್ ಪಡೆಯದೇ 300 ಕೋಟಿ ರೂಪಾಯಿ ಬಜೆಟ್ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ನೋಡಿದ ಎಕ್ಸ್ (ಟ್ವಿಟರ್) ಬಳಕೆದಾರರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ಕೆಲವರು ಸಿನಿಮಾ ಹೊಗಳಿದರೆ ಇನ್ನೂ ಕೆಲವರು ತೆಗಳಿದ್ದಾರೆ.

‘ಧುರಂಧರ್’ ಚಿತ್ರಕ್ಕೆ ದೊಡ್ಡ ಹಿನ್ನಡೆ ಎಂದರೆ ಅದು ಚಿತ್ರದ ಅವಧಿ. ಈ ಸಿನಿಮಾದ ಅವಧಿ 3 ಗಂಟೆ 36 ನಿಮಿಷ ಇದೆ. ಹೀಗಾಗಿ ಸಿನಿಮಾದ ಅವಧಿಯೇ ಚಿತ್ರಕ್ಕೆ ಹಿನ್ನಡೆ ಆಗಿದೆ. ಮೊದಲಾರ್ಧದಲ್ಲಿ ಲವ್ ಸ್ಟೋರಿ ಸೇರಿದಂತೆ ಅನೇಕ ವಿಷಯಗಳನ್ನು ಡ್ರ್ಯಾಗ್ ಮಾಡಲಾಗಿದೆಯಂತೆ. ಹೀಗಾಗಿ, ಸಿನಿಮಾದ ಮೊದಲಾರ್ಧದ ಅವಧಿ 2 ಗಂಟೆ ಮಿರೀದೆ. ಇದು ವೀಕ್ಷಕನ ತಾಳ್ಮೆ ಪರೀಕ್ಷೆ ಮಾಡುತ್ತದೆ ಎಂದು ಕೆಲವರು ಹೇಳಿದ್ದಾರೆ.

ರಣವೀರ್ ಸಿಂಗ್ ಪಾತ್ರಕ್ಕಿಂತಲೂ ಅಕ್ಷಯ್ ಖನ್ನಾ ಪಾತ್ರ ಸಾಕಷ್ಟು ಗಮನ ಸೆಳೆದಿದೆಯಂತೆ. ಕೆಲವರು ಸಿನಿಮಾ ನೋಡಿ ಬೇಸರ ಹೊರಹಾಕಿದ್ದಾರೆ. ಇನ್ನೂ ಕೆಲವರು ಕ್ಲೈಮ್ಯಾಕ್ಸ್ ಇಷ್ಟಪಟ್ಟಿದ್ದಾರೆ. ಸಿನಿಮಾಗೆ ಒಳ್ಳೆಯ ರೀತಿಯಲ್ಲಿ ಬುಕಿಂಗ್ ಕೂಡ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.