‘ಧುರಂಧರ್’ ಕಲೆಕ್ಷನ್ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು; ರಣವೀರ್ ಕೆರಿಯರ್ನಲ್ಲಿ ಹೊಸ ಮೈಲಿಗಲ್ಲು
ರಣವೀರ್ ಸಿಂಗ್ ಅವರ 'ಧುರಂಧರ್' ಸಿನಿಮಾ ನೆಗೆಟಿವ್ ಮಾತುಗಳನ್ನು ಮೀರಿ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ. ರಣವೀರ್ ವೃತ್ತಿಜೀವನದಲ್ಲೇ ಅತಿ ದೊಡ್ಡ ಓಪನಿಂಗ್ ಪಡೆದ ಚಿತ್ರ ಇದಾಗಿದೆ. ಆದರೆ, ಮಾರ್ಚ್ 19ಕ್ಕೆ ಇದರ ಸೀಕ್ವೆಲ್ 'ಟಾಕ್ಸಿಕ್' ಜೊತೆ ರಿಲೀಸ್ ಆಗುವ ಸಾಧ್ಯತೆ ಇದ್ದು, ಭವಿಷ್ಯದಲ್ಲಿ ತೊಂದರೆ ಎದುರಿಸಬಹುದು.

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ (Dhurandhar Movie) ಸಾಕಷ್ಟು ನೆಗೆಟಿವ್ ವಿಷಯಗಳ ಜೊತೆ ರಿಲೀಸ್ ಆಯಿತು. ಸಿನಿಮಾ ರಿಲೀಸ್ ಆಗುವ ಮೊದಲೇ ಈ ಚಿತ್ರಕ್ಕೆ ಅನೇಕರು ನೆಗೆಟಿವ್ ಪ್ರಚಾರ ಕೊಟ್ಟರು. ಸಿನಿಮಾ ಬಜೆಟ್ 300 ಕೋಟಿ ರೂಪಾಯಿ. ಈ ಸಿನಿಮಾದ ಗಳಿಕೆ ಮೊದಲ ದಿನ 18 ಕೋಟಿ ರೂಪಾಯಿ ಆಗಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಈ ಊಹೆಗೂ ಹೆಚ್ಚಿನ ಗಳಿಕೆ ಈ ಚಿತ್ರದಿಂದ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ಪ್ರೀ ಬುಕಿಂಗ್ ಆಧರಿಸಿ ‘ಧುರಂಧರ್’ ಸಿನಿಮಾ ಫ್ಲಾಪ್ ಆಗಲಿದೆ ಎಂದು ಅನೇಕರು ಭವಿಷ್ಯ ನುಡಿದಿದ್ದರು. ಆದರೆ, ಆ ರೀತಿ ಆಗಿಲ್ಲ. ಈ ಸಿನಿಮಾಗೆ ಸಿಕ್ಕ ಉತ್ತಮ ವಿಮರ್ಶೆ ಕಾರಣದಿಂದ ಈ ಚಿತ್ರ ಮೊದಲ ದಿನ 27 ಕೋಟಿ ರೂಪಾಯಿ ಗಳಿಸಿದೆ. ರಣವೀರ್ ಸಿಂಗ್ ವೃತ್ತಿ ಜೀವನದಲ್ಲೇ ಅವರ ಚಿತ್ರವೊಂದು ಮೊದಲ ದಿನ ಇಷ್ಟು ದೊಡ್ಡ ಮೊತ್ತದ ಓಪನಿಂಗ್ ಕಂಡಿರಲಿಲ್ಲ. ಈಗ ಈ ಚಿತ್ರಕ್ಕೆ ಆ ಸ್ಥಾನ ಸಿಕ್ಕಿದೆ.
ರಣವೀರ್ ಸಿಂಗ್ ನಟನೆಯ ‘ಪದ್ಮಾವತ್’ ಸಾಕಷ್ಟು ವಿವಾದಗಳ ಜೊತೆ ರಿಲೀಸ್ ಆಯಿತು. ಕೆಲವು ರಾಜ್ಯಗಳಲ್ಲಿ ಚಿತ್ರ ಬ್ಯಾನ್ ಕೂಡ ಆಯಿತು. ಈ ಸಿನಿಮಾ ಮೊದಲ ದಿನ ಮಾಡಿದ ಕಲೆಕ್ಷನ್ 24 ಕೋಟಿ ರೂಪಾಯಿ. ಈಗ ಆ ದಾಖಲೆಯನ್ನು ‘ಧುರಂಧರ್’ ಸಿನಿಮಾ ಮುರಿದಿದೆ.
The Roarring Return of Ranveer Singh! 🦁🔥#Dhurandhar #AdityaDhar Forget his past award winning roles. You will remember only Hamza from Dhurandhar. And you will remember Ranveer’s most raw, brutal, intense performance till now. And will never forget why he is among the best,… pic.twitter.com/K9ghPb3rOz
— Upala KBR ❤ (@upalakbr999) December 5, 2025
‘ಧುರಂಧರ್’ ಚಿತ್ರದ ರನ್ ಟೈಮ್ ಬಗ್ಗೆ ಅನೇಕರಿಗೆ ಅಸಮಾಧಾನ ಇದೆ. ಈ ಚಿತ್ರಕ್ಕೆ ಸೀಕ್ವೆಲ್ ಮಾರ್ಚ್ 19ರಂದು ರಿಲೀಸ್ ಆಗಲಿದೆಯಂತೆ. ಈ ಚಿತ್ರಕ್ಕೆ ಇನ್ನೂ ಪಾರ್ಟ್ 3, ಪಾರ್ಟ್ 4 ಮಾಡುವ ಆಲೋಚನೆಯಲ್ಲಿ ತಂಡ ಇದೆ. ಇದನ್ನು ಜನರು ಇಷ್ಟಪಡದೆ ಇರಬಹುದು.
ಇದನ್ನೂ ಓದಿ: ‘ಧುರಂಧರ್’ ರಿಲೀಸ್ಗೂ ಮೊದಲೇ ರಣವೀರ್ಗೆ ಬೆಂಗಳೂರಲ್ಲಿ ಎದುರಾಯ್ತು ದೊಡ್ಡ ಸಂಕಷ್ಟ
ಈಗಾಗಲೇ ಮಾರ್ಚ್ 19ರಂದು ಕನ್ನಡದ ‘ಟಾಕ್ಸಿಕ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಇದೇ ಸಂದರ್ಭದಲ್ಲಿ ‘ಧುರಂಧರ್’ ಸೀಕ್ವೆಲ್ ಬಂದರೆ ಚಿತ್ರ ಸಾಕಷ್ಟು ತೊಂದರೆ ಅನುಭವಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Sat, 6 December 25




