ಬಿಜೆಪಿ ಸರ್ಕಾರದ ಪರವಾಗಿ ಸಿನಿಮಾ ಮಾಡ್ತೀರಿ ಎಂಬ ಆರೋಪಕ್ಕೆ ಉತ್ತರ ನೀಡಿದ ಅಕ್ಷಯ್​ ಕುಮಾರ್​

|

Updated on: Oct 10, 2023 | 12:00 PM

ಬಿಜೆಪಿ ಸರ್ಕಾರದ ಮಾರ್ಸ್​ ಮಿಷನ್​ ಮತ್ತು ಸ್ವಚ್ಛ ಭಾರತ ಅಭಿಯಾನವನ್ನು ಪ್ರಮೋಟ್​ ಮಾಡುವ ಸಲುವಾಗಿ ಅಕ್ಷಯ್​ ಕುಮಾರ್​ ಅವರು ‘ಮಿಷನ್​ ಮಂಗಳ್​’ ಹಾಗೂ ‘ಟಾಯ್ಲೆಟ್​: ಏಕ್​ ಪ್ರೇಮ್​ ಕಥಾ’ ಸಿನಿಮಾವನ್ನು ಮಾಡಿದರು ಎಂಬುದು ಅನೇಕರ ಆರೋಪ. ಆದರೆ ಅದನ್ನು ಅಕ್ಷಯ್​ ಕುಮಾರ್​ ಅವರು ತಳ್ಳಿಹಾಕಿದ್ದಾರೆ.

ಬಿಜೆಪಿ ಸರ್ಕಾರದ ಪರವಾಗಿ ಸಿನಿಮಾ ಮಾಡ್ತೀರಿ ಎಂಬ ಆರೋಪಕ್ಕೆ ಉತ್ತರ ನೀಡಿದ ಅಕ್ಷಯ್​ ಕುಮಾರ್​
ಅಕ್ಷಯ್​ ಕುಮಾರ್​
Follow us on

ನಟ ಅಕ್ಷಯ್​ ಕುಮಾರ್ (Akshay Kumar)​ ಅವರು ವಿಮಲ್​ ಪಾನ್​ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡು ಟೀಕೆಗೆ ಒಳಗಾಗಿರುವುದು ಗೊತ್ತೇ ಇದೆ. ಅಷ್ಟೇ ಅಲ್ಲದೇ ಅವರು ಬೇರೆ ಬೇರೆ ಕಾರಣಕ್ಕೆ ಟ್ರೋಲ್​ ಆಗುತ್ತಾರೆ. ಅವರು ಕೆನಡಾದ ಪೌರತ್ವ ಪಡೆದಿದ್ದು ಕೂಡ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿತ್ತು. ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿ ಸರ್ಕಾರವನ್ನು ಅಕ್ಷಯ್​ ಕುಮಾರ್​ ಅವರು ಬೆಂಬಲಿಸುತ್ತಾ ಬಂದಿದ್ದಾರೆ. ಅವರ ಸಿನಿಮಾಗಳು ಕೂಡ ಬಿಜೆಪಿ (BJP Government) ಪರವಾಗಿ ಇವೆ ಎಂಬುದು ಕೆಲವರ ಆರೋಪ. ಅಂತಹ ಆರೋಪಗಳಿಗೆ ಅಕ್ಷಯ್​ ಕುಮಾರ್​ ಈಗ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯದ ವಿಚಾರದಲ್ಲಿ ತಮ್ಮ ನಿಲುವು ಏನು ಎಂಬುದನ್ನು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರದ ಮಾರ್ಸ್​ ಮಿಷನ್​ ಮತ್ತು ಸ್ವಚ್ಛ ಭಾರತ ಅಭಿಯಾನವನ್ನು ಪ್ರಮೋಟ್​ ಮಾಡುವ ಸಲುವಾಗಿ ಅಕ್ಷಯ್​ ಕುಮಾರ್​ ಅವರು ‘ಮಿಷನ್​ ಮಂಗಳ್​’ ಹಾಗೂ ‘ಟಾಯ್ಲೆಟ್​: ಏಕ್​ ಪ್ರೇಮ್​ ಕಥಾ’ ಸಿನಿಮಾವನ್ನು ಮಾಡಿದರು ಎಂಬುದು ಅನೇಕರ ಆರೋಪ. ಆದರೆ ಅದನ್ನು ಅಕ್ಷಯ್​ ಕುಮಾರ್​ ಅವರು ತಳ್ಳಿಹಾಕಿದ್ದಾರೆ. ‘ಇಂಡಿಯಾ ಟುಡೆ’ ನಡೆಸಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ: ಬೇರೆ ಹೀರೋಗಳ ಸಿನಿಮಾ ಸಾವಿರ ಕೋಟಿ ರೂ. ಗಳಿಸಿದ್ದಕ್ಕೆ ಅಕ್ಷಯ್​ ಕುಮಾರ್​ ಹೇಳೋದೇನು?

‘ಜನರು ಹಾಗೆ ಹೇಳುತ್ತಾರೆ. ಆದರೆ ಅಸಲಿ ವಿಷಯ ಆ ರೀತಿ ಇಲ್ಲ. ನಾನು ‘ಏರ್​ಲಿಫ್ಟ್​’ ಸಿನಿಮಾವನ್ನು ಮಾಡಿದೆ. ಆ ಸಂದರ್ಭದಲ್ಲಿ ಕಾಂಗ್ರೆಸ್​ ಸರ್ಕಾರ ಆಡಳಿತದಲ್ಲಿ ಇತ್ತು. ಆದರೆ ಅದರ ಬಗ್ಗೆ ಯಾರೂ ಮಾತನಾಡಲಿಲ್ಲ. ‘ಮಿಷನ್​ ರಾಣಿಗಂಜ್​’ ಸಿನಿಮಾದ ನೈಜ ಘಟನೆ ನಡೆದಿದ್ದು ಕೂಡ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ. ಅದು ಒಳ್ಳೆಯತನಕ್ಕೆ ಮತ್ತು ಶ್ರೇಷ್ಠತೆಗೆ ಸಂಬಂಧಿಸಿದ್ದು. ಯಾರು ಅಧಿಕಾರದಲ್ಲಿ ಇದ್ದರು ಎಂಬುದು ಮುಖ್ಯವಲ್ಲ. ದೇಶದ ಹಿತಕ್ಕಾಗಿ ಏನು ಮಾಡಲಾಯಿತು ಎಂಬುದು ಮಾತ್ರ ಮುಖ್ಯ’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ:ಅಕ್ಷಯ್​ ಕುಮಾರ್​ಗೆ ಯಾವುದೇ ಧರ್ಮದ ಮೇಲೆ ನಂಬಿಕೆ ಇಲ್ಲ; ಹಾಗಾದ್ರೆ ಅವರ ನಿಲುವು ಏನು?

ಒಂದು ಕಾಲದಲ್ಲಿ ಅಕ್ಷಯ್​ ಕುಮಾರ್​ ನಟಿಸಿದ ಸಿನಿಮಾಗಳು ಸತತವಾಗಿ ಸೋಲು ಕಂಡಿದ್ದವು. ಇನ್ನೇನು ಬಾಲಿವುಡ್​ನಲ್ಲಿ ತಮ್ಮ ಭವಿಷ್ಯ ಅಂತ್ಯವಾಯ್ತು ಎಂದು ಅಕ್ಷಯ್​ ಕುಮಾರ್​ ಅಂದುಕೊಂಡಿದ್ದರು. ಹಾಗಾಗಿ ಕೆನಡಾಗೆ ತೆರಳಿ ಅಲ್ಲಿಯೇ ಜೀವನ ಕಟ್ಟಿಕೊಳ್ಳಬೇಕು ಎಂದು ಅವರು ನಿರ್ಧರಿಸಿದ್ದರು. ಆ ಸಂದರ್ಭದಲ್ಲಿ ಅವರು ಕೆನಡಾದ ಪೌರತ್ವ ಪಡೆದುಕೊಂಡಿದ್ದರು. ಬಳಿಕ ಅವರಿಗೆ ಮತ್ತೆ ಬಾಲಿವುಡ್​ನಲ್ಲಿ ಯಶಸ್ಸು ಸಿಕ್ಕಿತು. ಆದರೂ ಭಾರತದ ಪೌರತ್ವ ಇರಲಿಲ್ಲ. 2023ರಲ್ಲಿ ಅವರಿಗೆ ಮರಳಿ ಭಾರತದ ಪೌರತ್ವ ಸಿಕ್ಕಿತು. ಅದನ್ನು ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತಿಳಿಸಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.