AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರೋಧದ ಮಧ್ಯೆಯೂ ವಿಮಲ್​ನ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡ ಅಕ್ಷಯ್ ಕುಮಾರ್

2022ರ ಏಪ್ರಿಲ್​ನಲ್ಲಿ ಟ್ವೀಟ್ ಮಾಡಿದ್ದ ಅಕ್ಷಯ್, ದಯವಿಟ್ಟು ನನ್ನ ಕ್ಷಮಿಸಿ ಎಂದಿದ್ದರು. ಅಕ್ಷಯ್ ಕುಮಾರ್ ಮತ್ತೆ ವಿಮಲ್​ನ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ಅವರು ಮತ್ತೆ ಟೀಕೆಗೆ ಒಳಗಾಗಿದ್ದಾರೆ. ಅಕ್ಷಯ್ ಅವರನ್ನು ಅನೇಕರು ಕಟುವಾಗಿ ಟೀಕಿಸಿದ್ದಾರೆ.

ವಿರೋಧದ ಮಧ್ಯೆಯೂ ವಿಮಲ್​ನ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡ ಅಕ್ಷಯ್ ಕುಮಾರ್
ಅಜಯ್, ಶಾರುಖ್, ಅಕ್ಷಯ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Oct 09, 2023 | 2:18 PM

ಅಕ್ಷಯ್ ಕುಮಾರ್ (Akshay Kumar) ಅವರು ವಿಮಲ್ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ವಿಮಲ್​ ಪ್ರಚಾರ ರಾಯಭತ್ವದಿಂದ ಅವರು ಹಿಂದೆ ಸರಿದಿದ್ದರು. ಈ ಘಟನೆ ನಡೆದು ವರ್ಷದ ಮೇಲಾಗಿದೆ. ಈ ವಿಚಾರದಲ್ಲಿ ಅಕ್ಷಯ್ ಕುಮಾರ್ ಬಗ್ಗೆ ಮೂಡಿದ್ದ ಅಸಮಾಧಾನ ಕಡಿಮೆ ಆಗಿದೆ. ಈ ಕಾರಣಕ್ಕೋ ಏನೋ ಅಕ್ಷಯ್ ಕುಮಾರ್ ಮತ್ತೆ ವಿಮಲ್​ನ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ಅವರು ಮತ್ತೆ ಟೀಕೆಗೆ ಒಳಗಾಗಿದ್ದಾರೆ. ಅಕ್ಷಯ್ ಅವರನ್ನು ಅನೇಕರು ಕಟುವಾಗಿ ಟೀಕಿಸಿದ್ದಾರೆ.

ಸಿನಿಮಾ ನಟರಿಗೆ ನಿಜ ಜೀವನದಲ್ಲಿ ಬೇರೆಯದೇ ಇಮೇಜ್ ಇರುತ್ತದೆ. ಅದಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಅಕ್ಷಯ್ ಕುಮಾರ್ ಅವರ ಬಗ್ಗೆ ಜನರಿಗೆ ಅಪಾರ ಅಭಿಮಾನ ಇದೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ಸಿನಿಮಾಗಳನ್ನು ಅಕ್ಷಯ್​ ಕುಮಾರ್ ಮಾಡಿದ್ದಾರೆ. ಅವರು ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣ ಆಗಿತ್ತು. ಯಾವಾಗಲೂ ಫಿಟ್​ನೆಸ್ ಬಗ್ಗೆ ಮಾತನಾಡುವ ಅಕ್ಷಯ್ ಕುಮಾರ್ ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದು ಸರಿ ಅಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದರು. ಇದಾದ ಬೆನ್ನಲ್ಲೇ ವಿಮಲ್​ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದು ಅವರು ಹೇಳಿದ್ದರು. ಈಗ ಅಕ್ಷಯ್ ವಿಮಲ್​ನ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ಅವರು ಕಾರಿನಲ್ಲಿ ಕುಳಿತಿರುತ್ತಾರೆ. ಅಕ್ಷಯ್ ಮನೆಯಲ್ಲಿ ಕುಳಿತು ಹೆಡ್​ಫೋನ್ ಹಾಕಿ ಹಾಡು ಕೇಳುತ್ತಾ ಇರುತ್ತಾರೆ. ಶಾರುಖ್ ಕರೆದಿದ್ದು ಅಕ್ಷಯ್​ಗೇ ಕೇಳುವುದೇ ಇಲ್ಲ. ಆಗ ಬೌಲ್ ಮೂಲಕ ಕಿಟಕಿ ಗಾಜಿಗೆ ಹೊಡೆಯುತ್ತಾರೆ ಶಾರುಖ್. ಆಗಲೂ ಅಕ್ಷಯ್​ಗೆ ಗೊತ್ತಾಗುವುದಿಲ್ಲ. ಪಕ್ಕದಲ್ಲೇ ಇರುವ ಅಜಯ್ ವಿಮಲ್ ಪಾನ್ ಮಸಾಲ ಸೇವನೆ ಮಾಡುತ್ತಾರೆ. ಈ ಗುಟ್ಕಾದಲ್ಲಿರುವ ಕೇಸರಿಯ ಪರಿಮಳ ಅಕ್ಷಯ್ ಕುಮಾರ್​ ಮೂಗಿಗೆ ಬಡಿದು ಅವರು ಕೆಳಗೆ ಇಳಿದು ಬರುವ ರೀತಿಯಲ್ಲಿ ಜಾಹೀರಾತನ್ನು ತೋರಿಸಲಾಗಿದೆ.

ಜಾಹೀರಾತಿನಿಂದ ಹೊರ ಬರ್ತೀನಿ ಎಂದಿದ್ರು

2022ರ ಏಪ್ರಿಲ್​ನಲ್ಲಿ ಟ್ವೀಟ್ ಮಾಡಿದ್ದ ಅಕ್ಷಯ್, ‘ದಯವಿಟ್ಟು ನನ್ನ ಕ್ಷಮಿಸಿ. ಎಲ್ಲರ ಬಳಿ ನಾನು ಕ್ಷಮೆ ಕೇಳುತ್ತೇನೆ. ನೀವು ನೀಡಿರುವ ಎಲ್ಲಾ ಪ್ರತಿಕ್ರಿಯೆ ನನ್ನ ಮೇಲೆ ಪರಿಣಾಮ ಬೀರಿದೆ. ನಾನು ತಂಬಾಕು ಸೇವನೆ ಉತ್ತೇಜಿಸುವುದಿಲ್ಲ. ಮಾನವೀಯತೆಯ ಕಾರಣದಿಂದ ನಾನು ಈ ಅಡ್ವಟೈಸ್​ಮೆಂಟ್​ನಿಂದ ಹಿಂದೆ ಸರಿಯುತ್ತೇನೆ. ಇದರ ಸಂಭಾವನೆಯನ್ನು ಒಳ್ಳೆಯ ಉದ್ದೇಶಕ್ಕೆ ನೀಡಲು ಬಯಸಿದ್ದೇನೆ. ಬ್ರ್ಯಾಂಡ್​ನವರು ಒಪ್ಪಂದದ ಅವಧಿ ಮುಗಿಯುವವರೆಗೂ ಆ ಜಾಹೀರಾತನ್ನು ಟೆಲಿಕಾಸ್ಟ್ ಮಾಡಬಹುದು. ಮುಂಬರುವ ದಿನಗಳಲ್ಲಿ ನಾನು ಜಾಹೀರಾತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರುತ್ತೇನೆ’ ಎಂದಿದ್ದರು ಅಕ್ಷಯ್ ಕುಮಾರ್.

ಹಳೆಯ ಜಾಹೀರಾತು?

ಈಗ ಪ್ರಸಾರ ಕಂಡಿರೋದು ಈ ಮೊದಲೇ ಶೂಟ್ ಮಾಡಿದ್ದ ಜಾಹಿರಾತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ‘ಪಠಾಣ್’ ಸಿನಿಮಾ ಸಂದರ್ಭದಲ್ಲಿ ಶಾರುಖ್ ಖಾನ್ ಅವರು ಉದ್ದ ಕೂದಲು ಬಿಟ್ಟುಕೊಂಡಿದ್ದರು. ಈ ಜಾಹೀರಾತಿನಲ್ಲೂ ಅವರಿಗೆ ಉದ್ದ ಕೂದಲಿದೆ. ಈ ಕಾರಣದಿಂದ ಈ ಅನುಮಾನ ಮೂಡಿದೆ.

ಗುಟ್ಕಾ ವಿರೋಧಿಸಿದ್ದರು

ಅಕ್ಷಯ್ ಕುಮಾರ್ ಅವರು ಗುಟ್ಕಾನ ವಿರೋಧಿಸಿದ್ದರು. ‘ಸ್ವಸ್ಛ ಭಾರತ’ ಯೋಜನೆಯ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ಅವರು ಈ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದರು. ಗುಟ್ಕಾ ಕಂಪನಿಗಳಿಂದ ಅವರಿಗೆ ಸಾಕಷ್ಟು ಆಫರ್ ಬಂದಿತ್ತಂತೆ. ಆದರೆ, ಇದನ್ನು ಅವರು ಬಿಟ್ಟಿದ್ದರಂತೆ. ಹಳೇ ವಿಡಿಯೋವನ್ನು ಶೇರ್​ ಮಾಡಿ, ಅಕ್ಷಯ್​ ಕುಮಾರ್​ಗೆ ಪಾಠ ಹೇಳಲಾಗುತ್ತಿದೆ.

ಇದನ್ನೂ ಓದಿ: ಅಕ್ಷಯ್ ಕುಮಾರ್ ಸಿನಿಮಾಕ್ಕೆ ಮತ್ತೆ ಸಂಕಷ್ಟ: ಒಟಿಟಿ ಆವೃತ್ತಿಗೂ ಕತ್ತರಿ, ಬಿಡುಗಡೆ ಮುಂದೂಡಿಕೆ

ಮಿಷನ್ ರಾಣಿಗಂಜ್

‘ಮಿಷನ್ ರಾಣಿಗಂಜ್’ ಸಿನಿಮಾ ಕಳೆದ ವಾರ ರಿಲೀಸ್ ಆಗಿದೆ. ಈ ಸಿನಿಮಾ ಮೂರು ದಿನಕ್ಕೆ ಕೇವಲ 12 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅಕ್ಷಯ್ ಕುಮಾರ್ ಅವರಂಥ ಸ್ಟಾರ್ ಹೀರೋಗೆ ಈ ಕಲೆಕ್ಷನ್ ತುಂಬಾ ಸಣ್ಣದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:05 pm, Mon, 9 October 23

ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ