‘ಜಿಗ್ರಾ’ ಚಿತ್ರದಿಂದ ನಷ್ಟ ಅನುಭವಿಸಿದ ಕರಣ್ ಜೋಹರ್, ಆಲಿಯಾ?

| Updated By: ಮಂಜುನಾಥ ಸಿ.

Updated on: Oct 16, 2024 | 2:13 PM

ಆಲಿಯಾ ಭಟ್ ನಟಿಸಿ, ಕರಣ್ ಜೋಹರ್ ನಿರ್ಮಾಣ ಮಾಡಿದ್ದ ‘ಜಿಗ್ರಾ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೋತಿದೆ ಎನ್ನಲಾಗುತ್ತಿದ್ದು, ಈ ಸಿನಿಮಾಕ್ಕೆ ಆಲಿಯಾ ಸಹ ನಿರ್ಮಾಪಕಿ ಆಗಿದ್ದರು. ಆದರೆ ಸಿನಿಮಾ ಸೋತರೂ ಸಹ ಆಲಿಯಾ ಹಾಗೂ ಕರಣ್ ಹಣ ಮಾಡಿದ್ದಾರೆ ಎನ್ನಲಾಗುತ್ತಿದೆ.

‘ಜಿಗ್ರಾ’ ಚಿತ್ರದಿಂದ ನಷ್ಟ ಅನುಭವಿಸಿದ ಕರಣ್ ಜೋಹರ್, ಆಲಿಯಾ?
Follow us on

ಆಲಿಯಾ ಭಟ್ ನಟಿಸಿರೋ ‘ಜಿಗ್ರಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಸಿನಿಮಾದ ಗಳಿಕೆ ಸುಮಾರು 20 ಕೋಟಿ ರೂಪಾಯಿ ಅಂದಿಟ್ಟುಕೊಳ್ಳಿ. ಆದರೆ, ಚಿತ್ರದ ಬಜೆಟ್ಗೂ ಸಿನಿಮಾದ ಗಳಿಕೆಗೂ ಸಾಕಷ್ಟು ವ್ಯತ್ಯಾಸ ಇದ್ದು, ಇದರಿಂದ ನಿರ್ಮಾಪಕರಾದ ಆಲಿಯಾ ಬಟ್ ಹಾಗೂ ಕರಣ್ ಜೋಹರ್ ನಷ್ಟ ಅನುಭವಿಸಿದರು ಎಂದು ವರದಿಗಳು ಆಗುತ್ತಿವೆ. ಈ ಸಿನಿಮಾ ಕೆಲವು ವಿವಾದಗಳನ್ನು ಕೂಡ ಹುಟ್ಟುಹಾಕಿದೆ ಎಂಬುದು ಇಲ್ಲಿ ಗಮನಿಸಲೇಬೇಕಾದ ವಿಚಾರ ಆಗಿದೆ.

ಆಲಿಯಾ ಭಟ್ ಅವರು ತಾವೇ ನಟಿಸಿದ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಇದೇ ಮೊದಲು. ತಮ್ಮ ಗುರು ಎನಿಸಿಕೊಂಡಿರುವ ಕರಣ್ ಜೋಹರ್ ಜೊತೆ ಸೇರಿ ಅವರು ‘ಜಿಗ್ರಾ’ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರದ ಬಜೆಟ್ 80 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾ ಪ್ರಚಾರಕ್ಕಾಗಿ 10 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಈ ಚಿತ್ರ ಗಳಿಸಿರೋದು 20 ಕೋಟಿ ರೂಪಾಯಿ. ಹಾಗಾದರೆ ಸಿನಿಮಾಗೆ ಲಾಭ ಆಗೋದು ಹೇಗೆ?

ಕರಣ್ ಜೋಹರ್ ಅವರು ಮೊದಲಿನಿಂದಲೂ ಉದ್ಯಮದಲ್ಲಿ ಇದ್ದವರು. ಅವರು ಸಿನಿಮಾ ಸಿದ್ಧವಾದ ಬಳಿಕ ಒಟಿಟಿ ಹಕ್ಕು, ಟಿವಿ ಹಕ್ಕುಗಳ ಮಾರಾಟವನ್ನು ಮಾಡಿದ್ದಾರೆ. ಮ್ಯೂಸಿಕ್ ರೈಟ್ಸ್ ಕೂಡ ಮಾರಾಟ ಮಾಡಿದ್ದಾರೆ. ಇದರಿಂದ ಸಿನಿಮಾಗೆ ಹಾಕಿದ 90 ಕೋಟಿ ರೂಪಾಯಿನ ಕರಣ್ ಹಾಗೂ ಆಲಿಯಾ ಭಟ್ ವಸೂಲಿ ಮಾಡಿ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ:ನಷ್ಟದಲ್ಲಿ ಕರಣ್ ಜೋಹರ್? ಧರ್ಮ ಪ್ರೊಡಕ್ಷನ್ ಮಾರಲು ಮುಂದಾದ ನಿರ್ಮಾಪಕ

ಆಲಿಯಾ ಭಟ್ ಅವರು 10-15 ಕೋಟಿ ರೂಪಾಯಿನ ಈ ಚಿತ್ರಕ್ಕಾಗಿ ಪಡೆದಿದ್ದರು. ಅವರ ಸಂಭಾವನೆ ಸ್ಟಾರ್ ಹೀರೋಗಳಿಗೆ ಸಮವಾಗಿದೆ. ಆದರೆ, ಚಿತ್ರದ ಗಳಿಕೆ ಅಂದುಕೊಂಡ ಮಟ್ಟದಲ್ಲಿ ಆಗುತ್ತಿಲ್ಲ. ‘ಜಿಗ್ರಾ’ ಚಿತ್ರವು ಮೊದಲ ದಿನ 4.25 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ದಿನ ಕಳೆದಂತೆ ಸಿನಿಮಾದ ಗಳಿಕೆ ಕಡಿಮೆ ಆಗುತ್ತಾ ಹೋಗಿದೆ. ಸದ್ಯ 20 ಕೋಟಿ ರೂಪಾಯಿ ಆಸುಪಾಲ್ಲಿ ಕಲೆಕ್ಷನ್ ಇದೆ.

‘ಜಿಗ್ರಾ’ ಚಿತ್ರದ ಕಥೆಯನ್ನು ಅನೇಕರು ಟೀಕೆ ಮಾಡಿದ್ದಾರೆ. ‘ಸವಿ’ ಚಿತ್ರದ ಕತೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ. ಹೈ ಸೆಕ್ಯುರಿಟಿ ಜೈಲುನಿಂದ ತಮ್ಮ ಗಂಡನ ರಕ್ಷಿಸುವ ಕೆಲಸವನ್ನು ಪತ್ನಿ ಮಾಡುತ್ತಾರೆ. ‘ಜಿಗ್ರಾ’ದಲ್ಲೂ ಇದೆ ಸಾಮ್ಯತೆ ಇದೆ. ಸಹೋದರಿಯು ತನ್ನ ಸಹೋದರನ ರಕ್ಷಿಸೋ ಕಥೆಯನ್ನು ಇದು ಹೊಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ