ಸೊಂಟ ನೋವು ಮಾಡಿಕೊಂಡ ರಕುಲ್ ಪ್ರೀತ್ ಸಿಂಗ್; ಪರಿಸ್ಥಿತಿ ಗಂಭೀರ: ಕಾರಣ ಏನು?
ರಕುಲ್ ಪ್ರೀತ್ ಸಿಂಗ್ ಅವರು ಅತಿಯಾದ ಭಾರ ಎತ್ತಲು ಪ್ರಯತ್ನಿಸಿ ಸೊಂಟದ ನೋವು ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ರಕುಲ್ ಅವರು ಹಾಸಿಗೆ ಹಿಡಿದಿದ್ದಾರೆ. ಸದ್ಯಕ್ಕಂತೂ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ನೋವು ಕಾಣಿಸಿಕೊಂಡ ನಂತರವೂ ಅವರು ನಿರ್ಲಕ್ಷ್ಯ ಮಾಡಿದ್ದರಿಂದ ಸಮಸ್ಯೆ ಉಲ್ಬಣ ಆಗಿದೆ.
ನಟಿ ರಕುಲ್ ಪ್ರೀತ್ ಸಿಂಗ್ ಅವರ ಬಗ್ಗೆ ಒಂದು ಬ್ಯಾಡ್ ನ್ಯೂಸ್ ಕೇಳಿಬಂದಿದೆ. ಸಿನಿಮಾಗಳಲ್ಲಿ ನಟಿಸುತ್ತಾ, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾ, ಸೋಶಿಯಲ್ ಮೀಡಿಯಾದಲ್ಲಿ ಮಿರಿಮಿರಿ ಮಿಂಚುತ್ತಿದ್ದ ಅವರು ಈಗ ಹಾಸಿಗೆ ಹಿಡಿಯುವಂತಾಗಿದೆ. ಕಳೆದ ಕೆಲವು ದಿನಗಳಿಂದ ಅವರಿಗೆ ತೀವ್ರ ಸೊಂಟ ನೋವು ಶುರುವಾಗಿದೆ. ಅದಕ್ಕೆ ಕಾರಣ ಆಗಿರುವುದು ಅವರೇ ಮಾಡಿಕೊಂಡ ಒಂದು ಎಡವಟ್ಟು. ಹೌದು, ಅತಿಯಾದ ಭಾರ ಎತ್ತಲು ಹೋಗಿ ರಕುಲ್ ಪ್ರೀತ್ ಸಿಂಗ್ ಅವರು ಸೊಂಟ ನೋವು ಮಾಡಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ.
ವರದಿಗಳ ಪ್ರಕಾರ, ರಕುಲ್ ಪ್ರೀತ್ ಸಿಂಗ್ ಅವರು ಹಾಸಿಗೆ ಹಿಡಿದು ಕೆಲವು ದಿನಗಳು ಕಳೆದಿವೆ. ಅಕ್ಟೋಬರ್ 5ರಂದು ಅವರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಡೆಡ್ಲಿಫ್ಟ್ ಮಾಡುವಾಗ ಅವರು 80 ಕೆಜಿ ಭಾರ ಎತ್ತಲು ಹೋಗಿದ್ದಾರೆ. ಆ ಸಂದರ್ಭದಲ್ಲಿ ಅವರು ಸೊಂಟಕ್ಕೆ ಬೆಲ್ಡ್ ಹಾಕಿರಲಿಲ್ಲ. ಈ ಎಡವಟ್ಟಿನಿಂದಾಗಿ ಅವರಿಗೆ ತೊಂದರೆ ಆಗಿದೆ. ಇದು ಅವರೇ ಮಾಡಿಕೊಂಡ ಎಡವಟ್ಟು.
80 ಕೆಜಿ ಭಾರ ಎತ್ತಲು ಹೋದಾಗ ರಕುಲ್ ಪ್ರೀತ್ ಸಿಂಗ್ ಅವರಿಗೆ ನೋವು ಕಾಣಿಸಿಕೊಂಡಿತು. ಆಗಲಾದರೂ ಅವರು ಎಚ್ಚೆತ್ತುಕೊಳ್ಳಬಹುದಿತ್ತು. ಆದರೆ ಅವರು ಅತಿ ಉತ್ಸಾಹದಲ್ಲಿ ವರ್ಕೌಟ್ ಮುಂದುವರಿಸಿದರು. ಸೊಂಟದ ನೋವಿನ ನಡುವೆಯೇ ಅವರು ಕಸರತ್ತು ಮುಂದುವರಿಸಿದ್ದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ.
ಇದನ್ನೂ ಓದಿ: ಡ್ರಗ್ಸ್ ಕೇಸ್ನಲ್ಲಿ ನಟಿ ರಕುಲ್ ಸಹೋದರ ಅಮನ್ ಪ್ರೀತ್ ಸಿಂಗ್ ಬಂಧನ
ಸೊಂಟದ ನೋವು ಕಾಣಿಸಿಕೊಂಡಿದ್ದರೂ ಕೂಡ ರಕುಲ್ ಪ್ರೀತ್ ಸಿಂಗ್ ಅವರು ಎರಡು ದಿನ ಶೂಟಿಂಗ್ಗೆ ಹೋದರು. ಇದರಿಂದಾಗಿ ಅವರಿಗೆ ನೋವು ಜಾಸ್ತಿ ಆಯಿತು. ಅಕ್ಟೋಬರ್ 10ರಂದು ರಕುಲ್ ಪ್ರೀತ್ ಸಿಂಗ್ ಜನ್ಮದಿನ. ಅಂದಿನ ಪಾರ್ಟಿಯಲ್ಲಿ ಕೂಡ ಅವರು ಭಾಗಿ ಆಗಿದ್ದರು. ಆಗ ಅವರಿಗೆ ಸೊಂಟ ನೋವು ಜಾಸ್ತಿ ಆಯಿತು. ಅವರ ಬಿಪಿ ಕಡಿಮೆ ಆಯಿತು. ಅತಿಯಾಗಿ ಬೆವರಲು ಆರಂಭಿಸಿದರು.
ಕೂಡಲೇ ವೈದ್ಯರನ್ನು ಸಂಪರ್ಕಿಸಿದಾಗ ದೊಡ್ಡ ಮಟ್ಟದಲ್ಲಿ ಸಮಸ್ಯೆ ಎದುರಾಗಿರುವುದು ತಿಳಿಯಿತು. ಸದ್ಯಕ್ಕೆ ಅವರ ಸೊಂಟದ ನೋವಿನ ಸಮಸ್ಯೆ ಬಹಳ ಗಂಭೀರವಾಗಿದೆ ಎನ್ನಲಾಗಿದೆ. ವೈದ್ಯರ ಸಲಹೆ ಮೇರೆಗೆ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಕಡೆಯಿಂದಲೇ ಹೆಲ್ತ್ ಅಪ್ಡೇಟ್ ಸಿಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.