AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

250 ಕೋಟಿ ರೂ. ಸಾಲದ ಸುಳಿಯಲ್ಲಿ ರಕುಲ್ ಪ್ರೀತ್ ಸಿಂಗ್ ಗಂಡ; ಆಸ್ತಿ ಮಾರಾಟ

ದೊಡ್ಡ ದೊಡ್ಡ ನಿರ್ಮಾಪಕರನ್ನು ಮದುವೆಯಾಗಿ ಖುಷಿಯಿಂದ ಸಂಸಾರ ಮಾಡುತ್ತಿರುವ ಅನೇಕ ನಟಿಯರು ಇದ್ದಾರೆ. ನಟಿ ರಕುಲ್​ ಪ್ರೀತ್​ ಸಿಂಗ್​ ಕೂಡ ಅದೇ ರೀತಿ ಲೆಕ್ಕಾಚಾರ ಆಗಿದ್ದರು ಎನಿಸುತ್ತದೆ. ಆದರೆ ಅವರನ್ನು ಮದುವೆ ಆಗಿರುವ ನಿರ್ಮಾಪಕ ಜಾಕಿ ಭಗ್ನಾನಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. 250 ಕೋಟಿ ರೂಪಾಯಿ ಸಾಲ ಆಗಿರುವುದರಿಂದ ಆಸ್ತಿ ಮಾರಿಕೊಂಡಿದ್ದಾರೆ!

250 ಕೋಟಿ ರೂ. ಸಾಲದ ಸುಳಿಯಲ್ಲಿ ರಕುಲ್ ಪ್ರೀತ್ ಸಿಂಗ್ ಗಂಡ; ಆಸ್ತಿ ಮಾರಾಟ
ಜಾಕಿ ಭಗ್ನಾನಿ, ರಕುಲ್​ ಪ್ರೀತ್​ ಸಿಂಗ್​
ಮದನ್​ ಕುಮಾರ್​
|

Updated on: Jun 23, 2024 | 10:50 PM

Share

ನಟಿ ರಕುಲ್ ಪ್ರೀತ್​ ಸಿಂಗ್​ (Rakul Preet Singh) ಅವರು ಈ ವರ್ಷ ಫೆಬ್ರವರಿಯಲ್ಲಿ ಬಾಲಿವುಡ್​ (Bollywood) ನಿರ್ಮಾಪಕ, ನಟ ಜಾಕಿ ಭಗ್ನಾನಿ ಅವರನ್ನು ಮದುವೆ ಆದರು. ಹಿಂದಿ ಚಿತ್ರರಂಗದಲ್ಲಿ ದೊಡ್ಡ ನಿರ್ಮಾಪಕ ಎನಿಸಿಕೊಂಡಿರುವ ಜಾಕಿ ಭಗ್ನಾನಿ ಅವರನ್ನು ಕೈ ಹಿಡಿದ ಬಳಿಕ ರಕುಲ್​ ಪ್ರೀತ್​ ಸಿಂಗ್​ ಜೀವನ ಸೆಟ್ಲ್​ ಆಯಿತು ಎಂದು ಎಲ್ಲರೂ ಮಾತನಾಡಿಕೊಂಡರು. ಆದರೆ ಈಗ ಅವರ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಬರೋಬ್ಬರಿ 250 ಕೋಟಿ ರೂಪಾಯಿ ಸಾಲದ ಸುಳಿಗೆ ಅವರು ಸಿಲುಕಿದ್ದಾರೆ. ಇದರಿಂದಾಗಿ ಜಾಕಿ ಭಗ್ನಾನಿ (Jackky Bhagnani) ಅವರು ಆಸ್ತಿ ಮಾರಿಕೊಳ್ಳುವ ಪರಿಸ್ಥಿತಿ ಬಂದಿದೆ.

ಜಾಕಿ ಭಗ್ನಾನಿ ಅವರು ‘ಪೂಜಾ ಎಂಟರ್​ಟೇನ್ಮೆಂಟ್​’ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಈ ಸಂಸ್ಥೆಯಿಂದ ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾದ ಸಿನಿಮಾಗಳೆಲ್ಲವೂ ಹೀನಾಯವಾಗಿ ಸೋತಿವೆ. ಈ ವರ್ಷ ತೆರೆಕಂಡ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಬಂಡವಾಳ ಹೂಡಿದ್ದು ಕೂಡ ಇದೇ ಸಂಸ್ಥೆ. ಅಂದಾಜು 350 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣವಾದ ಆ ಸಿನಿಮಾ ಫ್ಲಾಪ್​ ಆಯಿತು. ಹಾಗಾಗಿ ನಿರ್ಮಾಪಕರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು.

ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಅನೇಕ ಉದ್ಯೋಗಿಗಳಿಗೆ ಜಾಕಿ ಭಗ್ನಾನಿ ಅವರು ಹಲವು ತಿಂಗಳಿಂದ ಸಂಬಳವನ್ನೇ ನೀಡಿಲ್ಲ. ಅವರ ಒಟ್ಟು ಸಾಲು 250 ಕೋಟಿ ರೂಪಾಯಿ ತಲುಪಿದೆ ಎನ್ನಲಾಗಿದೆ. ಹಾಗಾಗಿ ಅವರು ‘ಪೂಜಾ ಎಂಟರ್​ಟೇನ್ಮೆಂಟ್​’ ಆಫೀಸ್​ ಇದ್ದ ಕಟ್ಟಡವನ್ನು ಮಾರಾಟ ಮಾಡಿದ್ದಾರೆ. 7 ಮಹಡಿಗಳನ್ನು ಹೊಂದಿದ್ದ ಕಟ್ಟಡ ಮಾರಾಟ ಆಗಿದೆ. ಅದನ್ನು ಯಾರು ಖರೀದಿಸಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗ ಆಗಿಲ್ಲ. ಆ ಕಟ್ಟಡವನ್ನು ನೆಲಸಮ ಮಾಡಿ, ಅದೇ ಜಾಗದಲ್ಲಿ ಅಪಾರ್ಟ್​ಮೆಂಟ್​ ಕಟ್ಟಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಮದುವೆ ಬಳಿಕ ರಕುಲ್​ ಪ್ರೀತ್​ ಸಿಂಗ್ ಗ್ಲಾಮರಸ್​ ಫೋಟೋಶೂಟ್​

‘ಪೂಜಾ ಎಂಟರ್​ಟೇನ್ಮೆಂಟ್​’ ಸಂಸ್ಥೆಯು ಭಾರಿ ನಷ್ಟ ಅನುಭವಿಸಿದ್ದು, ಶೇಕಡ 80ರಷ್ಟು ಕೆಲಸಗಾರರನ್ನು ಮನೆಗೆ ಕಳಿಸಲಾಗಿದೆ. ಬಹುತೇಕ ಯಾರಿಗೂ ಸಂಬಳ ನೀಡಿಲ್ಲ ಎನ್ನಲಾಗಿದೆ. ಹಾಗಾಗಿ ಕೋಪಗೊಂಡ ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಈ ಕಂಪನಿ ಬಗ್ಗೆ, ನಿರ್ಮಾಪಕರಾದ ಜಾಕಿ ಭಗ್ನಾನಿ ಹಾಗೂ ವಶು ಭಗ್ನಾನಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ನಟಿ ರಕುಲ್​ ಪ್ರೀತ್​ ಸಿಂಗ್​ ಅವರ ಜೀವನದಲ್ಲಿ ಆರ್ಧಿಕ ಸಂಕಷ್ಟ ಉಂಟಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.