‘ದಿಲ್ ಚಾಹ್ತಾ ಹೈ’ ಶೂಟಿಂಗ್ ವೇಳೆ ಆಮಿರ್ ಖಾನ್‌ ಕೆನ್ನೆಗೆ 17 ಬಾರಿ ಹೊಡೆದಿದ್ದ ಅಕ್ಷಯ್ ಖನ್ನಾ

2001ರಲ್ಲಿ ತೆರೆಕಂಡ ‘ದಿಲ್ ಚಾಹ್ತಾ ಹೈ’ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಸ್ನೇಹ ಮತ್ತು ಸಂಬಂಧಗಳ ಕುರಿತಾದ ಹೊಸ ಚಿತ್ರಣವಾಗಿತ್ತು. ಆ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ಕಳೆದಿವೆ. ಈ ಪ್ರಯುಕ್ತ ಹಳೆಯ ನೆನಪುಗಳನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

‘ದಿಲ್ ಚಾಹ್ತಾ ಹೈ’ ಶೂಟಿಂಗ್ ವೇಳೆ ಆಮಿರ್ ಖಾನ್‌ ಕೆನ್ನೆಗೆ 17 ಬಾರಿ ಹೊಡೆದಿದ್ದ ಅಕ್ಷಯ್ ಖನ್ನಾ
Aamir Khan, Akshaye Khanna
Image Credit source: Excel Entertainment

Updated on: Sep 04, 2026 | 3:51 PM

ಬಾಲಿವುಡ್‌ನ ಐಕಾನಿಕ್ ಹಾಗೂ ಯುವಜನತೆಯ ಫೇವರಿಟ್ ಸಿನಿಮಾಗಳಲ್ಲಿ ಒಂದಾದ ‘ದಿಲ್ ಚಾಹ್ತಾ ಹೈ’ ತೆರೆಕಂಡು ಇತ್ತೀಚೆಗಷ್ಟೇ 25 ವರ್ಷ ಪೂರೈಸಿದೆ. ಈ ವಿಶೇಷ ಸಂದರ್ಭದಲ್ಲಿ ಚಿತ್ರತಂಡದ ಸದಸ್ಯರು ಒಂದೆಡೆ ಸೇರಿ ಶೂಟಿಂಗ್ ದಿನಗಳ ರೋಚಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನಿರ್ದೇಶಕ ಫರ್ಹಾನ್ ಅಖ್ತರ್ ಹಾಗೂ ನಟ ಆಮಿರ್ ಖಾನ್, ಶೂಟಿಂಗ್ ಸೆಟ್‌ನಲ್ಲಿ ನಡೆದ ಒಂದು ಅಚ್ಚರಿಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಚಿತ್ರದ ಮುಖ್ಯ ಸನ್ನಿವೇಶವೊಂದರಲ್ಲಿ ನಟ ಅಕ್ಷಯ್ ಖನ್ನಾ ಅವರು ಆಮಿರ್ ಖಾನ್ ಕೆನ್ನೆಗೆ ಸುಮಾರು 17 ಬಾರಿ ನೈಜವಾಗಿ ಪೆಟ್ಟು ಕೊಟ್ಟಿದ್ದರಂತೆ.

‘ಯುವಾ’ ಯೂಟ್ಯೂಬ್ ಚಾನೆಲ್ ನಡೆಸಿದ ಸಂವಾದದಲ್ಲಿ ಆಮಿರ್ ಖಾನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದನ್ನು ಕೇಳಿ ಜೊತೆಯಲ್ಲಿದ್ದ ಸೈಫ್ ಅಲಿ ಖಾನ್, ‘ಅವರು ನಿಜವಾಗಿಯೂ ಬಾರಿಸಿದ್ರಾ’ ಎಂದು ಆಶ್ಚರ್ಯದಿಂದ ಪ್ರಶ್ನಿಸಿದ್ದಾರೆ. ಇದಕ್ಕೆ ತಕ್ಷಣವೇ ಉತ್ತರಿಸಿದ ನಿರ್ದೇಶಕ ಫರ್ಹಾನ್ ಅಖ್ತರ್, ‘ಹೌದು, ಅದು ನಿಜವಾದ ಪೆಟ್ಟು’ ಎಂದಿದ್ದಾರೆ.

‘ಆಮಿರ್ ಅವರಿಗೆ ಅಕ್ಷಯ್ ನಿಜವಾಗಿಯೂ ಹೊಡೆಯುತ್ತಾರೆ ಎಂದು ಮುಂಚಿತವಾಗಿಯೇ ಹೇಳಿದ್ದೆ. ಆಮಿರ್ ಕೂಡ ಅದಕ್ಕೆ ಓಕೆ ಎಂದಿದ್ದರು. ಆದರೆ ನಾನು ಅಕ್ಷಯ್ ಅವರಿಗೆ ಆಮಿರ್ ತಮ್ಮ ಸಾಲುಗಳನ್ನು ಹೇಳುವಾಗಲೇ ಮಧ್ಯದಲ್ಲಿ ದಿಢೀರನೆ ಪೆಟ್ಟು ಕೊಡುವಂತೆ ಸೂಚಿಸಿದ್ದೆ, ಇದರಿಂದ ನೈಜವಾದ ಎಕ್ಸ್‌ಪ್ರೆಷನ್ ಸಿಗುತ್ತದೆ ಎಂಬುದು ನನ್ನ ಉದ್ದೇಶವಾಗಿತ್ತು’ ಎಂದು ಫರ್ಹಾನ್ ಅಖ್ತರ್ ತಿಳಿಸಿದ್ದಾರೆ.

ಆ ಪೆಟ್ಟು ಆಮಿರ್ ಅವರಿಗೆ ದೃಶ್ಯದಲ್ಲಿ ಸಂಪೂರ್ಣವಾಗಿ ಲೀನವಾಗಲು ನೆರವಾಯಿತಂತೆ. ಹೀಗಾಗಿ ಆಮಿರ್ ಖಾನ್ ಅವರೇ ಪರಿಪೂರ್ಣ ಶಾಟ್‌ಗಾಗಿ ಮತ್ತೆ ಮತ್ತೆ ಪೆಟ್ಟು ತಿನ್ನಲು ಸಿದ್ಧರಾಗಿದ್ದರು. ‘ನಾವು ಆ ಸನ್ನಿವೇಶದ ಚಿತ್ರೀಕರಣ ಮುಗಿಸುವಷ್ಟರಲ್ಲಿ ಆಮಿರ್ ಅವರ ಮುಖದ ಒಂದು ಭಾಗ ಪೂರ್ತಿ ಕೆಂಪಗಾಗಿ, ಬಾತುಕೊಂಡಿತ್ತು’ ಎಂದು ಫರ್ಹಾನ್ ಅವರು ಶೂಟಿಂಗ್ ಕ್ಷಣವನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಆಮಿರ್ ಖಾನ್ ನಿಜಕ್ಕೂ ‘ಗಜಿನಿ’ ಆಗಿರಬೇಕು, ಸೋನಂ ವಾಂಗ್ಚುಕ್ ವ್ಯಂಗ್ಯ

ಈ ಸಿನಿಮಾದಲ್ಲಿ ನೈಜವಾಗಿ ಪೆಟ್ಟು ತಿಂದದ್ದು ಆಮಿರ್ ಖಾನ್ ಮಾತ್ರವಲ್ಲ, ಸೈಫ್ ಅಲಿ ಖಾನ್ ಕೂಡ! ಚಿತ್ರದಲ್ಲಿ ಸೈಫ್ ಅವರ ಗರ್ಲ್‌ಫ್ರೆಂಡ್ ಪಾತ್ರದಲ್ಲಿ ನಟಿಸಿದ್ದ ಸುಚಿತ್ರಾ ಪಿಳ್ಳೈ ಕೂಡ ಸೈಫ್ ಅವರ ಕೆನ್ನೆಗೆ ನಿಜವಾಗಿಯೂ ಬಾರಿಸಬೇಕಾಗಿ ಬಂದಿತ್ತಂತೆ. ‘ನಾನು ಸೈಫ್‌ಗೆ ಹೇಗೆ ಹೊಡೆಯಲಿ ಎಂದು ಫರ್ಹಾನ್ ಅವರಲ್ಲಿ ಕೇಳಿದ್ದೆ. ಆದರೆ ಫರ್ಹಾನ್ ಯಾವುದೇ ಹಿಂಜರಿಕೆಯಿಲ್ಲದೆ ಜೋರಾಗಿ ಬಾರಿಸುವಂತೆ ಹೇಳಿದರು. ಹೀಗಾಗಿ ನಾನು ಸೈಫ್ ಅವರಿಗೆ ಮೂರು ಬಾರಿ ಕೆನ್ನೆಗೆ ಹೊಡೆದಿದ್ದೆ’ ಎಂದು ಸುಚಿತ್ರಾ ಪಿಳ್ಳೈ ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us