ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದ ನಟ ದಿಲೀಪ್ ಕುಮಾರ್ ಪತ್ನಿ ಸೈರಾ ಬಾನು ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ರಕ್ತದೊತ್ತಡ ಸಮಸ್ಯೆಗೆ ಸಂಬಂಧಿಸಿ ಅವರನ್ನು ಮೂರು ದಿನಗಳ ಹಿಂದೆ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುಗೆ ಶಿಫ್ಟ್ ಮಾಡಲಾಗಿದೆ.
ಸೈರಾ ಹಾಗೂ ದಿಲೀಪ್ ಒಟ್ಟು 54 ವರ್ಷಗಳ ಕಾಲ ಒಟ್ಟಾಗಿ ಸಂಸಾರ ನಡೆಸಿದ್ದಾರೆ. ಅನೇಕರಿಗೆ ಇವರ ದಾಂಪತ್ಯ ಮಾದರಿ ಆಗಿದೆ. ದಿಲೀಪ್ ಮೃತಪಟ್ಟ ನಂತರದಲ್ಲಿ ಸೈರಾ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದೆ. ಈಗ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Actor Saira Banu, wife of late veteran actor Dilip Kumar, was admitted to Hinduja Hospital in Khar, Mumbai after she complained of issues related to blood pressure three days ago. She has been shifted to the ICU ward today pic.twitter.com/wQKKh0ILB0
— ANI (@ANI) September 1, 2021
ಬಾಲಿವುಡ್ನಲ್ಲಿ ದಶಕಗಳ ಕಾಲ ಸ್ಟಾರ್ ಆಗಿ ಮೆರೆದ ದಿಲೀಪ್ ಕುಮಾರ್ ಅವರು ಬುಧವಾರ ಜು.7ರಂದು ನಿಧನರಾದರು. ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಅವರ ಮೂಲ ಹೆಸರು ದಿಲೀಪ್ ಕುಮಾರ್ ಅಲ್ಲವೇ ಅಲ್ಲ. ಈಗ ಪಾಕಿಸ್ತಾನದಲ್ಲಿರುವ ಪೇಶಾವರದಲ್ಲಿ 1922ರಲ್ಲಿ ಜನಿಸಿದ ಅವರಿಗೆ ಕುಟುಂಬದವರು ಇಟ್ಟ ಹೆಸರು ಮೊಹಮ್ಮದ್ ಯೂಸೂಫ್ ಖಾನ್. ಆದರೆ ಚಿತ್ರರಂಗಕ್ಕೆ ಬರುವಾಗ ಅವರು ದಿಲೀಪ್ ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡರು. 1944ರಲ್ಲಿ ತೆರೆಕಂಡ ‘ಜ್ವಾರ್ ಭಾಟ’ ದಿಲೀಪ್ ನಟನೆಯ ಮೊದಲ ಸಿನಿಮಾ. ಆ ಚಿತ್ರದ ನಿರ್ಮಾಪಕಿ ದೇವಿಕಾ ರಾಣಿ ಅವರೇ ಯೂಸೂಫ್ ಖಾನ್ಗೆ ಹೆಸರು ಬದಲಾಯಿಸಿಕೊಳ್ಳುವ ಸಲಹೆ ನೀಡಿದ್ದರು.
ಮೊದಲ ಸಿನಿಮಾ ‘ಜ್ವಾರ್ ಭಾಟಾ’ದಿಂದ ದಿಲೀಪ್ ಕುಮಾರ್ಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ದಿಲೀಪ್ ಅಭಿನಯ ಇಷ್ಟವಾಯಿತು. ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ದಶಕದಲ್ಲಿ ದಿಲೀಪ್ ಕುಮಾರ್ ಸ್ಟಾರ್ ಆದರು. ಎರಡನೇ ದಶಕದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದರು. ದೇವದಾಸ್, ನಯಾ ದೌರ್, ಮಧುಮತಿ, ಕೊಹಿನೂರ್, ಮುಘಲ್-ಏ-ಆಜಮ್ ಮುಂತಾದ ಗಮನಾರ್ಹ ಚಿತ್ರಗಳಲ್ಲಿ ದಿಲೀಪ್ ಕುಮಾರ್ ನಟಿಸಿದರು. 1998ರಲ್ಲಿ ತೆರೆಕಂಡ ‘ಖಿಲಾ’ ದಿಲೀಪ್ ನಟನೆಯ ಕೊನೇ ಸಿನಿಮಾ.
ಇದನ್ನೂ ಓದಿ: ಡಾ. ರಾಜ್ಕುಮಾರ್ ಜತೆ ದಿಲೀಪ್ ಕುಮಾರ್ಗೆ ಇದ್ದ ಒಡನಾಟ ಎಂಥದ್ದು? ಫೋಟೋ ಸಹಿತ ವಿವರಿಸಿದ ಪುನೀತ್